TUMAKURU:SHAKTHI PEETA FOUNDATION
ತುಮಕೂರು ಜಿಲ್ಲೆ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ, ತುಮಕೂರು ತಾಲ್ಲೋಕಿನ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ:16.12.2025 ರಂದು ಬೆಳಿಗ್ಗೆ 10.30 ಗಂಟೆಗೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಲೋಗಾನಂದ್ ಮತ್ತು ಅವರ ತಂಡದೊಂದಿಗೆ ಕೆಳಕಂಡ ಮೂರು ವಿಷಯಗಳ ಬಗ್ಗೆ ಸಮಾಲೋಚನಾ ಸಭೆ ನಿಗಧಿ ಮಾಡಲಾಗಿದೆ. ಆಸಕ್ತರು ಆಗಮಿಸಲು ಮನವಿ, ಹೆಚ್ಚಿನ ವಿವರಗಳಿಗೆ ಡಾ.ನಾಗಭೂಷಣ್, ಡಾ.ಜಗನ್ನಾಥ್ ಸಂಪರ್ಕಿಸಿ.
1. ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಪರಿಕಲ್ಪನೆಯ ಹಲವಾರು ಯೋಜನೆಗಳು ಮತ್ತು ಶಕ್ತಿಪೀಠ ಫೌಂಡೇಷನ್ ಇದೂವರೆಗೂ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು, ತುಮಕೂರು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ,ಬಿ.ಜ್ಯೋತಿಗಣೇಶ್ ರವರು, ಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ಸೇರಿದಂತೆ ಎಲ್ಲರಿಗೆ ಬರೆದ ಮನವಿಗಳು ಸಹ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಕಚೇರಿಗೆ ತಲುಪಿದ ಹಿನ್ನಲೆಯಲ್ಲಿ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದಲ್ಲಿ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿ ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ, ನಡೆದ ರೈತ ಶಕ್ತಿ/ರೈತ ಗ್ಯಾರಂಟಿ ಯೋಜನೆಗಳ ಸಭೆಯ ನಿರ್ಣಯದಂತೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವ ಬಗ್ಗೆ.
2. ಮುಂದಿನ ತಿಂಗಳು ಬೆಂಗಳೂರಿನ ಐಸ್ಯಾಕ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೃಷಿ ತಜ್ಞರ ಮತ್ತು ರೈತ ವಿಜ್ಞಾನಿಗಳ ಸಮಾವೇಶ ನಡೆಸುವ ಬಗ್ಗೆ.
3. ನೆಟ್ಟಿಗೆರೆಯಲ್ಲಿ ದಿನಾಂಕ:12.12.2025 ರಂದು ಕೃಷಿ ಮತ್ತು ಸಂಸ್ಕøರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಮತ್ತು ತೋಟಗಾರಿಕೆ ಇಲಾಖೆ ತುಮಕೂರು ಇವರ ಸಹಯೋಗ ದೊಂದಿಗೆ ‘ಅಡಿಕೆ ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಅಡಿಕೆ ಉತ್ಪನ್ನಗಳ ರಫ್ತು ಅವಕಾಶ ಕರಿತು ಕಾರ್ಯಾಗಾರ’ ದಲ್ಲಿ ರೈತರ ಪ್ರಶ್ನೆಗಳ ಬಗ್ಗೆ.
(ಕುಂದರನಹಳ್ಳಿ ರಮೇಶ್)
ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ, ತುಮಕೂರು ವಿಶ್ವ ವಿದ್ಯಾನಿಲಯ ತುಮಕೂರು ಹಾಗೂ ಮಾಜಿ ಸದಸ್ಯ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ತುಮಕೂರು.
