13th December 2025
Share

TUMAKURU:SHAKTHI PEETA FOUNDATION

  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ದಿನಾಂಕ:15.12.2025 ಮತ್ತು 16.12.2025 ರಂದು ಬೆಂಗಳೂರಿನ ಡಿ.ದೇವರಾಜ ಅರಸು ಭವನದ ಸಭಾಂಗಣದಲ್ಲಿ, ರಾಜ್ಯದ ಎಲ್ಲಾ ಜಾತಿಯ ಸಂಘ ಸಂಸ್ಥೆಗಳ ಸಭೆ ಆಯೋಜಿಸಿರುವುದು ನಿಜಕ್ಕೂ ಸ್ವಾಗಾತಾರ್ಹ.

 ದಿನಾಂಕ:15.09.2025 ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂಧಿಸಿರುವ ಆಯೋಗದ ನಿರ್ಧಾರ ಬಹಳ ಒಳ್ಳೆಯ ಬೆಳವಣಿಗೆ.

ಮನವಿಯ ಆಯ್ದ ಭಾಗಗಳು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕೈಪಿಡಿ- 2025 ರ ಪಟ್ಟಿಯಂತೆ ಅನುಬಂಧ 3 ಎ ಪ್ರಕಾರ 1561 + ಅನುಬಂಧ 3 ಬಿ ಪ್ರಕಾರ 183 + ಅನುಬಂಧ 3 ಸಿ ಪ್ರಕಾರ 107 = ಒಟ್ಟು 1851   ಜಾತಿ/ಉಪಜಾತಿಗಳ ನಾಲೇಡ್ಜ್ ಬ್ಯಾಂಕ್ (ಫಿಸಿಕಲ್ ಲೈಬ್ರರಿ + ಡಿಜಿಟಲ್ ಲೈಬ್ರರಿ + ಹ್ಯೂಮನ್ ಲೈಬ್ರರಿ) ಮ್ಯೂಸಿಯಂ ಮತ್ತು ಮಾನಿಟರಿಂಗ್ ಸೆಲ್ ರಚಿಸುವುದು.

ಇದೂವರೆಗೂ ವಿವಿಧ ಜಾತಿ/ಉಪಜಾತಿ ಜ್ಞಾನಿಗಳು, ಸ್ರ್ಯಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ರಚಿಸಿರುವ ಪುಸ್ತಕಗಳು, ಪಿಹೆಚ್‍ಡಿಗ¼/ ಕುಲಶಾಸ್ತ್ರೀಯ ಅಧ್ಯಯನ ವರಧಿಗಳ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಉನ್ನತ ಮಟ್ಟದ ಸಮಿತಿಗಳ ವರದಿಗಳ ಮಾಹಿತಿ ಸಂಗ್ರಹಿಸಿ, ಕಲೆ, ಸಂಸ್ಕøತಿ, ಮೌಡ್ಯ, ಆಚರಣೆ, ದೇವರು, ನಂಬಿಕೆ, ಇತಿಹಾಸ, ಪೂಜಿಸುವ ಗಿಡಗಳು ಸೇರಿದಂತೆ ಎಲ್ಲಾ ಮಾಹಿತಿಗಳನ್ನು, ವಿಶ್ವ ವಿದ್ಯಾನಿಲಯಗಳ ಮೂಲಕ ಅನಾಲೀಸಿಸ್ ಮಾಡಿಸಲು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಸೂಚಿಸುವುದು ಅಗತ್ಯವಾಗಿದೆ.

ಪ್ರತಿಯೊಂದು ಜಾತಿ/ಉಪಜಾತಿಗಳ ರಾಜ್ಯ ಮಟ್ಟದ ಸಂಘಟನೆಗಳಿಗೆ, ಸರ್ಕಾರಿ ಜಮೀನು ಮಂಜೂರು ಮಾಡಿ ಒಂದು ಪ್ರಭೇದದ ಗಿಡಗಳನ್ನು ಬೆಳೆಸುವ ಹೊಣೆಗಾರಿಕೆಯೊಂದಿಗೆ, ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಅನುದಾನ ನೀಡುವುದು.

 ಈಗಾಗಲೇ ನಮ್ಮ ಸಂಸ್ಥೆ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಕಾಲುವೆಯ ಅಕ್ಕ-ಪಕ್ಕದ ವಿಜೆಎನ್‍ಎಲ್ ಜಮೀನು ಹಾಗೂ ತುಮಕೂರು ನಗರದ ಸುತ್ತ-ಮುತ್ತ ಇರುವ ಸರ್ಕಾರಿ ಜಮೀನನ್ನು ಎಲ್ಲಾ ಜಾತಿ/ಉಪಜಾತಿ ಸಂಘಟನೆಗಳಿಗೆ ಮಂಜೂರು ಮಾಡಲು ಮನವಿ ಸಲ್ಲಿಸಲಾಗಿದೆ. ಕಡತ ಪ್ರಗತಿಯಲ್ಲಿದೆ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ.

ಎಲ್ಲಾ ಜಾತಿ/ಉಪಜಾತಿ ಸಂಘಟನೆಗಳಿಗೆ, ಸಮೀಕ್ಷೆ ನಿರ್ಧಿಷ್ಟ ಹೊಣೆಗಾರಿಕೆ ನೀಡುವುದು.ಯಾವ ಜಾತಿ/ಉಪಜಾತಿಗಳ ಬಗ್ಗೆ ಅಧ್ಯಯನವಾಗಿಲ್ಲವೋ, ಅಂತಹವರ ಅಧ್ಯಯನ ನಡೆಸಲು ಜಾತಿವಾರು ನಿಗಮಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅನುದಾನಗಳಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದು.

ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮತ್ತು  ಹಿಂದುಳಿದ ವರ್ಗಗಳ ಕಲ್ಯಾಣ’ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಲಾಗಿತ್ತು.  ಈ ಸಭೆ ಆಯೋಜಿಸಿರುವುದು ಸೂಕ್ತವಾಗಿದೆ.