4th March 2026
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ತುರುವೇಕೆರೆ ವಿಧಾನಸಭಾ ಕ್ಷೇತ್ರದ, ಗುಬ್ಬಿ ತಾಲ್ಲೋಕಿನ, ಚಂದ್ರಶೇಖರಪುರ ಹೋಬಳಿಯ, ಚೆಂಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಿಗೆರೆಯಲ್ಲಿ ದಿನಾಂಕ:12.12.2025 ರಂದು  ಕೃಷಿ ಮತ್ತು ಸಂಸ್ಕøರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಮತ್ತು ತೋಟಗಾರಿಕೆ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ‘ಅಡಿಕೆ ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಅಡಿಕೆ ಉತ್ಪನ್ನಗಳ ರಫ್ತು ಅವಕಾಶ ಕರಿತು ಕಾರ್ಯಾಗಾರ’ ನಡೆಯಿತು.

ಕಾಯಾಗಾರದಲ್ಲಿ ನಡೆದ ವಿಶೇಷ ಪ್ರಸಂಗಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ.

•             ಹಿರಿಯ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಚನ್ನಪ್ಪಗೌಡರು ಸೇರಿದಂತೆ ಹತ್ತಾರು ನಿವೃತ್ತ ಅಧಿಕಾರಿಗಳು ಸಭೆಯಲ್ಲಿ ಭಾಗಿ,

•             ಒಂದು ಹಳ್ಳಿಯಲ್ಲಿ ಪಿಪಿಟಿಯೊಂದಿಗೆ ಸುಮಾರು 150 ಕ್ಕೂ ಹೆಚ್ಚು ಅಡಿಕೆ ಬೆಳೆಗಾರರಿಗೆ ಒಂದು ಕಾರ್ಯಾಗಾರ ಉತ್ತಮ ಬೆಳವಣಿಗೆ, ಅದು ರೈತರಿಂದ ಉದ್ಘಾಟನೆ ಮಾಡಿಸಿದ್ದು ವಿಶೇಷ.

•             ರೈತರು ಖಡಕ್ ಆಗಿ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ತಾಳ್ಮೆ ಕಳೆದು ಕೊಳ್ಳದೆ ಸಂಯಮದಿಂದ ಉತ್ತರಿಸಿದ ರೀತಿ ಅದ್ಭುತವಾಗಿತ್ತು.

ರೈತರ ಖಡಕ್ ಪ್ರಶ್ನೆಗಳು.

1.            ಗೋರಕ್ ವರದಿಯಲ್ಲಿ ಅಡಿಕೆಬೆಳೆಗೆ ನಿಷೇಧ ಹೇರಿರುವ ಕಾರಣ ಏನು ಸ್ಪಷ್ಟಪಡಿಸಿ?

2.            ಕನ್ನಡದಲ್ಲಿ ಪುಸ್ತಕ/ಪಿಡಿಎಫ್ ಮಾದರಿಯಲ್ಲಿ ಕಾರ್ಯಾಗಾರದ ಅಂಶಗಳ ಬಗ್ಗೆ ಮಾಹಿತಿ ನೀಡಿ ?

3.            ರೌಂಡ್ ಅಫ್ ಜಮೀನುಗಳಿಗೆ ಒಡೆಯಬೇಕೋ ಬೇಡವೋ ತಿಳಿಸಿ ?

4.            ಕೆಮಿಕಲ್ ಗೊಬ್ಬರ ಮತ್ತು ಕೀಟನಾಶಕ ಬಳಸಬೇಕೋ ಬೇಡವೋ, ಅದರಿಂದ ಆಗುವ ಪರಿಣಾಮಗಳ ಬಗ್ಗೆ ವಿವರಿಸಿ ?

5.            ಸಾವಯವದಲ್ಲಿ ಯಾವ ರೀತಿ ಅಡಿಕೆ ಬೆಳೆಗೆ ಗೊಬ್ಬರ ಮತ್ತು ಔಷಧಿ ಬಳಸಬೇಕು ? ವೈಜ್ಞಾನಿಕವಾಗಿ ಸರ್ಟಿಪೀಕೇಷನ್ ಆಗಿರುವ ಎನೇನು ಗೊಬ್ಬರ ಇದರ ಮತ್ತು ಔಷಧಿಗಳು ಇವೆ ವಿವರಿಸಿ ?

6.            ಪ್ರಗತಿಪರ ರೈತ ಅಡಿಕೆ ಬೆಳೆಗಾರರನ್ನು ಏಕೆ ಕಾರ್ಯಾಗಾರಕ್ಕೆ ಆಹ್ವಾನಿಸಿಲ್ಲ ?

7.            ಪ್ರಗತಿಪರ ರೈತ ಅಡಿಕೆ ರಫ್ತುಗಾರರನ್ನು ಏಕೆ ಕಾರ್ಯಾಗಾರಕ್ಕೆ ಆಹ್ವಾನಿಸಿಲ್ಲ ?

8.            ಅಡಿಕೆ ತೋಟಕ್ಕೆ ಉಳುಮೆ ಮಾಡಬೇಕಾ ಅಥವಾ 0 ಕಲ್ಟಿವೇಷನ್ ಮಾಡಬೇಕೋ ವೈಜ್ಞಾನಿಕ ಮಾಹಿತಿ ನೀಡಿ ?

9.            ವೈಜ್ಞಾನಿಕವಾಗಿ ಅಡಿಕೆ ಬೆಳೆಗೆ ಎಷ್ಟು ನೀರು ಅಗತ್ಯ, ಯಾವ ಮಾದರಿ ಸೂಕ್ತ ತಿಳಿಸಿ ?

10.         ಗ್ರಾಮ ಪಂಚಾಯಿತಿಯಲ್ಲಿ ಅಥವಾ ಪೋಸ್ಟ್ ಆಫೀಸ್‍ನಲ್ಲಿ ರಫ್ತು ಘಟಕಗಳ ಮಾಹಿತಿ ಕಚೇರಿ ಆರಂಬಿಸಲು ಸಾದ್ಯವೇ ?

11.         ಬೇರೆ ದೇಶಗಳಿಗೆ ರಫ್ತು ಮಾಡಲು ಸಾವಯವ ಸರ್ಟಿಫಿಕೇಟ್ ಅಗತ್ಯವಾದರೆ, ನಮ್ಮ ದೇಶದ ಜನರು ತಿನ್ನಲು ಸಾವಯವ ಸರ್ಟಿಫಿಕೇಟ್ ಬೇಡವೇ ನಾವು ವಿಷ ತಿನ್ನ ಬೇಕೆ ?

12.         ಕೃಷಿ ತಜ್ಞ ಸ್ವಾಮಿನಾಥನ್ ವರದಿಯಲ್ಲಿ ಸಾವಯವ ಕೃಷಿ ಮಾಡಲು, ರೂ 1 ಬಂಡವಾಳ ಹಾಕಿದರೆ ರೂ 3.80 ಆದಾಯ ಬರಲಿದೆ, ಕೆಮಿಕಲ್ ಕೃಷಿ ಮಾಡಲು, ರೂ 1 ಬಂಡವಾಳ ಹಾಕಿದರೆ ರೂ 2.80 ಆದಾಯ ಬರಲಿದೆ ಎಂದು ಹೇಳಿರುವುದು ನಿಜವೇ ?

13.         ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಸಿ.ಎನ್.ಮಂಜುನಾಥ್ ರವರು, ಲೋಕಸಭೆಯಲ್ಲಿ, ಗಮನ ಸೆಳೆದ ಹಿಂದಿನ ಕಾಲದಲ್ಲಿ ಹಿರಿಯರನ್ನು ಅವರ ಮಕ್ಕಳು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತಿದ್ದರು, ಇಂದು ನಮ್ಮ ಮಕ್ಕಳನ್ನು ಹಿರಿಯರೇ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ಪರಿಸ್ಥಿತಿ ಬಂದಿಗೆ, ಇದಕ್ಕೆ ಆರೋಗ್ಯ ಜಿಡಿಪಿ, ವಿಷಕಾರಿಕ ಪದಾರ್ಥಗಳ ಬಳಕೆ ಜಿಡಿಪಿ ಬಗ್ಗೆ ವ್ಯಾಪಕ ಚರ್ಚೆ ಅಗತ್ಯ ಎಂಬಂತಿತ್ತು. ಅದಕ್ಕೆ ವೈಜ್ಞಾನಿಕ ಉತ್ತರ ನೀಡಿ ?

ಈ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಅಧಿಕಾರ ಇಲ್ಲ ಎಂದು ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳು ನಯವಾಗಿ ಹೇಳಿದಾಗ, ಅಲ್ಲಿದ್ದ ರೈತರು ಕುಂದರನಹಳ್ಳಿ ರಮೇಶ್ ರವರೇ ನೀವು ಉತ್ತರಿಸ ಬಹುದಲ್ಲಾ ನೀವೇ ಹೇಳಿ ಎಂದು ನನ್ನ ಮೇಲೆಯೇ ನಮ್ರತೆಯಿಂದ ಮುಗಿ ಬಿದ್ದರು.

ನಾನು ಅವರಿಗೆ ಹೇಳಿದ ಮಾತು, ಇಲ್ಲಿ ನಿಮ್ಮೂರಿನ ಹಿರಿಯ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಚನ್ನಪ್ಪಗೌಡರು ಇದ್ದಾರೆ, ತಾಲ್ಲೋಕು ಕೃಷಿಕ ಸಮಾಜದ ಪಧಾಧಿಕಾರಿ ಹಾಗೂ ವಕೀಲರಾದ ಶ್ರೀ ಸದಾಶಿವಯ್ಯನವರು ಇದ್ದಾರೆ, ಆನೇಕ ರೈತ ಸಂಘಟನೆಗಳ ಪದಾಧಿಕಾರಿಗಳು ಇದ್ದಾರೆ, ನಿವೃತ್ತ ಅಧಿಕಾರಿಗಳು ಇದ್ದಾರೆ, ಸಂಶೋಧಕರು, ಪತ್ರಕರ್ತರು ಇದ್ದಾರೆ, ಅವರು ಮತ್ತು ನಾನು ಜೊತೆಯಾಗಿ ಶ್ರಮಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಧೀಕೃತ ಮಾಹಿತಿ ಪಡೆದು, ಇನ್ನೊಂದು ಕಾರ್ಯಾಗಾರ ಮಾಡಿ ಲಿಖಿತ ಉತ್ತರ ನೀಡುತ್ತೇನೆ. ಏಕಾಏಕಿ ಉತ್ತರ ನೀಡುವುದು ಸರಿಯಲ್ಲ ಎಂದಾಗ ಎಲ್ಲರು ತಪ್ಪಾಳೆ ತಟ್ಟಿ ಬೆಂಬಲ ವ್ಯಕ್ತ ಪಡಿಸಿದರು.

ನಾನು ಅಲ್ಲಿದ್ದ ಅಧಿಕಾರಿಗಳಾದ ಬಿ.ಶಾರದಮ್ಮ, ಲೋಗಾನಂದ್, ದರ್ಶನ್, ಯು.ಧರ್ಮರಾವ್, ಪುಷ್ಪ್ಪಲಥಾ, ಪೂಜಾ, ಕಾರಂತ್, ಇನ್ನೂ ಮುಂತಾದವರ ಜೊತೆ ಸಮಾಲೋಚನೆ ನಡೆಸಿ, ಹಿರೇಹಳ್ಳಿ ಕೆವಿಕೆಯಲ್ಲಿ ರಾಜ್ಯ ಮಟ್ಟದ ಸಭೆ ಆಯೋಜಿಸಿ, ವೈಜ್ಞಾನಿಕ ಮಾಹಿತಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಉತ್ತರ ಪಡೆಯಲು ನಿರ್ಣಯ ಮಾಡಿದ್ದೇವೆ.