TUMAKURU:SHAKTHI PEETA FOUNDATION
ಸರ್ಕಾರದ ಹಂತದಲ್ಲಿ ಚರ್ಚಿಸಿ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ದಳವಾಯಿ ರವರು ಮತ್ತು ಕೇಂದ್ರ ಸರ್ಕಾರದ ಕೃಷಿ ತಂತ್ರಜ್ಞಾನ ಸಂಶೋಧನಾ ಅಳವಡಿಕೆ ಸಂಸ್ಥೆಯ ನಿರ್ದೇಶಕರಾದ ಡಾ.ವೆಂಕಟ ಸುಬ್ರಮಣ್ಯಯನ್ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದಲ್ಲಿರುವ 33 ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರುಗಳ ಸಭೆಯನ್ನು ಆಯೋಜಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.



ತುಮಕೂರು ಜಿಲ್ಲೆ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ, ತುಮಕೂರು ತಾಲ್ಲೋಕಿನ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ:16.12.2025 ರಂದು ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಲೋಗಾನಂದ್ ಮತ್ತು ಅವರ ತಂಡದೊಂದಿಗೆ, ರಾಜ್ಯಧ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮ, ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್, ತುಮಕೂರು ಕೃಷಿ ಸಂಶೋಧನಾ ನಗರ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ನೆಟ್ಟಿಗೆರೆ ಅಡಿಕೆ ಬೆಳೆಗಾರರ ಪ್ರಶ್ನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಯಿತು.

ನಿಜಕ್ಕೂ ಇದೊಂದು ಅರ್ಥಪೂರ್ಣ ಚರ್ಚೆಯಾಗಿತ್ತು. ಈ ಸಭೆಯಲ್ಲಿ ವಿಜ್ಞಾನಿಗಳಾದ ಡಾ. ಪ್ರಶಾಂತ್, ಡಾ.ರಮೇಶ್, ಡಾ.ನಾಗಭೂಷಣ್, ಡಾ.ಜಗನ್ನಾಥ್, ಮತ್ತು ಕುಂದರನಹಳ್ಳಿ ರಮೇಶ್, ಮಧುರನಾಥ್, ಶಿವಣ್ಣ, ಶಿವಕುಮಾರ್,ವಿಶ್ವನಾಥ ರೆಡ್ಡಿ, ತಾರಕ, ಗಗನ್ ಮತ್ತು ತುಮಕೂರು ವಿಶ್ವ ವಿದ್ಯಾನಿಲಯದ ಡಾ.ಪರಿಮಳ ರವರೊಂದಿಗೆ ಸುಮಾರು 150 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.
ವಿದ್ಯಾರ್ಥಿ ಕು.ಅನ್ನಪೂರ್ಣ ರವರು ಪ್ರಸ್ತಾವನೆ ಸಿದ್ಧಪಡಿಸಲು, ತಮ್ಮದೇ ಆದ ಒಂದು ವರದಿ ನೀಡಲು ಮುಂದೆ ಬಂದಿರುವುದು ನಿಜಕ್ಕೂ ವಿಶೇಷವಾಗಿದೆ.

