TUMAKURU:SHAKTHIPEETA FOUNDATION
ನಾನು ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರ ರೂಪಿಸಲು ಉಚಿತವಾಗಿ ಎಂ.ಓ.ಯು ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೇನೆ.
ಈಗ ಮಾಜಿ ಸದಸ್ಯನಾದ ಮೇಲೆ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಂಸ್ಥಾಪಕನಾಗಿ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸದಸ್ಯನಾಗಿ ಅಧ್ಯಯನ ಮುಂದುವರೆಸಿದ್ದೇನೆ.
2024 ನೇ ಡಿಸೆಂಬರ್ ತಿಂಗಳಿನಲ್ಲಿ, ರಾಜ್ಯ ಸರ್ಕಾರಕ್ಕೆ ಪಿಪಿಟಿ ಸಿದ್ಧಪಡಿಸುವಾಗ, ನಂಬರ್ ಒನ್ ಕರ್ನಾಟಕ @ 2047 ಪರಿಕಲ್ಪನೆಗೆ, ರಾಜ್ಯದ ಶೇ 85 ರಷ್ಟು ಇರುವ ರೈತರ ಸಹಭಾಗಿತ್ವದಲ್ಲಿ ಪ್ರತಿಯೊಂದು ಗ್ರಾಮ/ಬಡಾವಣೆಗಳ ವಿಷನ್ ಡಾಕ್ಯುಮೆಂಟ್@ 2047 ನ್ನು ವಿದ್ಯಾರ್ಥಿಗಳ ನೇತೃತ್ವದಲ್ಲಿ ರಚಿಸಲು ಆಲೋಚನೆ ಮಾಡುತ್ತಿರುವಾಗ, ನನ್ನ ಸಹೋದರ ಎಸ್.ಪಿ.ರಾಜೇಶ್ ನನಗೆ ಕೃಷಿ ಆಶ್ರಮಗಳ ಆಂದೋಲನದ ಬಗ್ಗೆ ಮಾಹಿತಿ ನೀಡಿದ್ದರು.
ಈ ಆಂದೋಲನದಲ್ಲಿ ನಾನು ಭಾಗವಹಿಸಿ ಒಂದು ವರ್ಷ ತುಂಬಿತು, ಈ ಹಿನ್ನಲೆಯಲ್ಲಿ ದಿನಾಂಕ: 30.12.2025 ರಂದು ಅಂಜನಾದ್ರಿ ಹನುಮ ಹುಟ್ಟಿದ ಬೆಟ್ಟದ ತಪ್ಪಲಿನಲ್ಲಿರುವ, ಮಾರುತಿ ರಾವ್ ರವರ ಮಣ್ಣಿನ ಪಾಠ ಶಾಲೆಗೆ ಭೇಟಿ ಮಾಡುವ ಮೂಲಕ, ಕೃಷಿ ಆಶ್ರಮಗಳ ಒಂದು ವರ್ಷದ ಯಾತ್ರೆಯ ಸಂಭ್ರಮವನ್ನು ಆಚರಿಲಿದ್ದೇವೆ. ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಕೆಲವು ಕೃಷಿ ಆಶ್ರಮಗಳಿಗೂ ಭೇಟಿ ನೀಡಲಾಗುವುದು, ಆಸಕ್ತರು ಭಾಗವಹಿಸಬಹುದು.
