TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ಮತ್ತು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಜನವರಿ 21 ರಿಂದ 24 ರವರೆಗೆ ನಡೆಯುವ NATIONAL CONCLAVE ON NATURAL FARMING ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರು ಆಗಮಿಸಲಿದ್ದಾರೆ. ಅವರೊಂದಿಗೆ ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ನಿಯೋಗ ಹೋಗಲು ಸಮಯ ನೀಡಲು, ಕಳೆದ ವಾರ ನನ್ನ ದೆಹಲಿ ಪ್ರವಾಸ ಕಾರ್ಯಕ್ರಮದ ವೇಳೆ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಉತ್ತಮವಾಗಿ ಸ್ಪಂಧಿಸಿದ ಅಧಿಕಾರಿಗಳು ನಿಯೋಗದ ಸದಸ್ಯರ ಪಟ್ಟಿಯೊಂದಿಗೆ ದಿನಾಂಕ: 03.01.2026 ರೊಳಗೆ ಪತ್ರ ಬರೆಯಲು ತಿಳಿಸಿದ್ದಾರೆ. ನಿಯೋಗದ ಸದಸ್ಯರು ಈ ಸಭೆಗೆ ಭಾಗವಹಿಸಲು ಸಹ ನೋಂದಣೆ ಮಾಡಿಸಲಾಗುವುದು. ಆದ್ದರಿಂದ ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರೊಂದಿಗೆ ಚರ್ಚಿಸಲು ಮನವಿ. ಅವರು ನೀಡುವ ಪಟ್ಟಿಯೊಂದಿಗೆ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
