TUMAKURU:SHAKTHIPEETA FOUNDATION
ದಿನಾಂಕ: 05.01.2026 ರಿಂದ 09.01.2026 ರವರೆಗೆ ಕರ್ನಾಟಕ ರಾಜ್ಯದಲ್ಲಿರುವ ಶಿವಮೊಗ್ಗ, ಧಾರವಾಢ, ಬಾಗಲಕೋಟೆ, ರಾಯಚೂರು, ಬೆಂಗಳೂರು, ಮಂಡ್ಯದ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯಗಳ ಹಾಗೂ ಗದಗದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯದ ವಿಸಿಯವರೊಂದಿಗೆ ಕೆಳಕಂಡ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಆಸಕ್ತರು ಭಾಗವಹಿಸಬಹುದು.
1. ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನಂತೆ, 100 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯಗಳ ಪಾತ್ರದ ಬಗ್ಗೆ.
2. ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾಗಿರುವ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾವೇರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ, ಜಿಲ್ಲಾವಾರು ಯಾವ ವಿಶ್ವವಿದ್ಯಾನಿಲಯ ತೊಡಗಿಸಿಕೊಂಡಿದೆ ಎಂಬ ಬಗ್ಗೆ.
3. ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ ಪೂರಕವಾಗಿ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಬಳಿ ನಿಯೋಗದಲ್ಲಿ ನೀಡುವ ಮನವಿ ಬಗ್ಗೆ.
4. ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳಲ್ಲಿ ಜಾರಿಗೆ ತಂದಿರುವ, ಫಾರ್ಮರ್ ಫೀಲ್ಡ್ ಸ್ಕೂಲ್, ಫಾರ್ಮರ್ ಮಾಸ್ಟರ್ ಟ್ರೈನಿ, ಕೃಷಿ ಸಖಿ, ಪಶು ಸಖಿ ಮತ್ತು ಇನ್ನೂ ಮುಂತಾದ ಯೋಜನೆಗಳ ಬಗ್ಗೆ.
5. ಮಂಡ್ಯದ ಕೃಷಿ ವಿಶ್ವ ವಿದ್ಯಾನಿಲಯ ಸ್ಥಾಪಿಸಲು ಉದ್ದೇಶಿರುವ ಸೆಂಟರ್ ಆಫ್ ಎಕ್ಸಲೆನ್ಸ್ ರೈಸ್, ಮಾದರಿಯಲ್ಲಿ ಎಲ್ಲಾ ವಿಶ್ವ ವಿದ್ಯಾನಿಯಲಗಳು ಒಂದೊಂದು ಬೆಳೆಯ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸುವ ಬಗ್ಗೆ.
6. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಕೃಷಿ ಸಚಿವರಾದ ಶ್ರೀ ಚಲುವರಾಯಸ್ವಾಮಿಯವರು ನಮ್ಮ ಮನವಿ ಮೇರೆಗೆ ಮಾಡಿರುವ ಆದೇಶದಂತೆ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರೊಂದಿಗೆ ನಡೆಸಿರುವ ಸಮಾಲೋಚನೆಗಳ ಸಭೆಯ ಪ್ರಮುಖ ಅಂಶಗಳಾದ,
1. ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ, ತಲಾ 5 ರಂತೆ, ರಚಿಸುತ್ತಿರುವ 1120 ಕೃಷಿ ಆಶ್ರಮಗಳ/ ರೈತ ಶಕ್ತಿ/ ರೈತ ಗ್ಯಾರಂಟಿ/ ಕೃಷಿ ಭಾಗ್ಯ ಪಾಠ ಶಾಲೆ, ರಾಜ್ಯ ಸರ್ಕಾರ ಘೋಷಣೆ ಮಾಡುವ ಯಾವುದೇ ಯೋಜನೆ ಬಗ್ಗೆ.
2. ಭೂಮಿಯ ಮೇಲೆ ಹುಟ್ಟುವ ಕಳೆ-ಬೆಳೆಗಳಿಗೆ ವೈಜ್ಞಾನಿಕ ನೀರು ಬಳಕೆ ಮತ್ತು ಮೌಲ್ಯವರ್ಧೀತ ಉತ್ಪನ್ನಗಳ ಮ್ಯೂಸಿಯಂ ಬಗ್ಗೆ.
3. ಬೆಸ್ಟ್ ಪ್ರಾಕ್ಟೀಸಸ್ ರೈತರ ನಾಲೇಡ್ಜ್ ಬ್ಯಾಂಕ್ ಬಗ್ಗೆ.
4. ತುಮಕೂರು ಫಾರ್ಮರ್ ಸಿಟಿ.
5. ತುಮಕೂರು ಫಾರ್ಮರ್ ಕಾರಿಡಾರ್.
6. ತುಮಕೂರು ಕೃಷಿ ಸಂಶೋಧನಾ ನಗರ.
7. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿಗೆ ಸಂಭಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಗಳ ಕೈಪಿಡಿ.
8. ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿನ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕ, ಕೃಷಿ ಯೋಜನೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಬಗ್ಗೆ.
9. ತುಮಕೂರು ನಗರದ ಶಕ್ತಿಭವನದಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ.
