TUMAKURU:SHAKTHI PEETA FOUNDATION
ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನಂತೆ, 100 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ನೂತನವಾಗಿ ‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ’ ಜಾರಿಗೊಳಿಸಿದೆ.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾಗಿರುವ ಜಿಲ್ಲೆಗಳು
1. ತುಮಕೂರು,
2. ಚಿತ್ರದುರ್ಗ,
3. ಚಿಕ್ಕಬಳ್ಳಾಪುರ,
4. ಹಾವೇರಿ,
5. ಕೊಪ್ಪಳ
6. ಗದಗ
ರಾಜ್ಯದ 6 ಜಿಲ್ಲಾವಾರು, ಯಾರು ಲೋಕಸಭಾ ಸದಸ್ಯರು, ಯಾರು ವಿಧಾನಸಭಾ ಸದಸ್ಯರು ಇದ್ದಾರೆ ಎಂಬ ಬಗ್ಗೆ ಪಟ್ಟಿ ಮಾಡಲು, ಚಿಕ್ಕಬಳ್ಳಾಪುರದ ನುಗ್ಗೆ ಪ್ರಪಂಚದ ಶಿವಕುಮಾರ್ ಮತ್ತು ಹಾವೇರಿ ಜಿಲ್ಲೆಯ ನಿಸರ್ಗ ಕೃಷಿ ಆಶ್ರಮದ ಇಸ್ಮಾಯಿಲ್ ರವರಿಗೆ ಬೆಳಿಗ್ಗೆ 6 ಗಂಟೆಗೆ ಸೂಚಿಸಿದೆ, ನನ್ನೊಂದಿಗೆ ಸಮಾಲೋಚನೆ ನಡೆಸಿ, 11 ಗಂಟೆಗೆ ಈ ಪಟ್ಟಿ ನೀಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು.
9 MPS AND 37 MLAS IN 6 DIST

ಈ ಪಟ್ಟಿಯನ್ನು ಪ್ರೋಟೋಕಾಲ್ ರೀತಿ ಅಥವಾ ಜಿಲ್ಲಾವಾರು ಅದಲು-ಬದಲು ಮಾಡಬೇಕಿದೆ. ಇದು ಸರಿಯಾಗಿ ಇದೆಯೇ ಎಂಬ ಬಗ್ಗೆ, ಮೇಲ್ಕಂಡ ಆರು ಜಿಲ್ಲೆಗಳ ಕೃಷಿ ಆಶ್ರಮಗಳ ಪ್ರಮುಖರು ಶಿವಕುಮಾರ್-9844524492 ಮತ್ತು ಇಸ್ಮಾಯಿಲ್ – 9986938667 ಸಂಪರ್ಕಸಿ ಮಾಹಿತಿ ಹಂಚಿಕೊಳ್ಳಬಹುದು.
ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂಧಿಸಿದರೆ, ಇದೊಂದು 6 ಜಿಲ್ಲೆಗಳಿಗೆ ರೈತರಿಗೆ ಬಂಪರ್ ಯೋಜನೆ ಎಂದರೆ ತಪ್ಪಾಗಲಾರದು,
ಈ ಯೋಜನೆಯನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, 1120 ಕೃಷಿ ಆಶ್ರಮಗಳಿಗೆ ವಿಸ್ತರಿಸಲು ಮತ್ತು ವಿಶೇಷ ಯೋಜನೆಗಳನ್ನು ಸೇರ್ಪಡೆ ಮಾಡಲು, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ.
ಡಾ.ನಾಗಭೂಷಣ್ ನೇತೃತ್ವದ ತಂಡ ಇದೂವರೆಗೂ ಕೃಷಿ ಆಶ್ರಮಗಳ ಪರಿಕಲ್ಪನೆಗೆ ಆಲೋಚನೆ ಮಾಡುತ್ತಿದ್ದ ರೀತಿ ಮತ್ತು ಶಕ್ತಿಪೀಠ ಫೌಂಡೇಷನ್ ಕಳೆದ ಒಂದು ವರ್ಷದಿಂದ ಸರ್ಕಾರಗಳಿಗೆ ಸಲ್ಲಿಸಿರುವ ಮನವಿಯಲ್ಲಿನ ಶೇ 80 ರಷ್ಟು ಯೋಜನೆ ಇಲ್ಲಿದೆ. ಇದೊಂದು ರೈತರಿಗೆ ವರದಾನವಾಗಿ ಬಂದಿದೆ ಎಂದರೆ ತಪ್ಪಲ್ಲ.
ಕೇಂದ್ರ ಸರ್ಕಾರ ಉಳಿದ ವಿಶೇಷ ಯೋಜನೆಗಳ ಸೇರ್ಪಡೆಗೂ ಮುಕ್ತ ಅವಕಾಶ ನೀಡಿರುವುದು ಹೆಮ್ಮಯ ವಿಚಾರ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಶಕ್ತಿಪೀಠ ಫೌಂಡೇಷನ್ ಮನವಿಗೆ ಸ್ಪಂಧಿಸಿರುವುದು ಕಾಕತಾಳೀಯವಾಗಿದೆ.
ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ದೇಶದ 100 ಜಿಲ್ಲೆಗಳಲ್ಲಿ, ಕರ್ನಾಟಕ ಮೊದಲ ಸ್ಥಾನದಲ್ಲಿ ಇರಲೇ ಬೇಕು. ಇದು 6 ವರ್ಷದ ಯೋಜನೆ, ವಾರ್ಷಿಕ ರೂ 24000 ಕೋಟಿ ನಿಗದಿ ಮಾಡಿದ್ದಾರೆ.
ರೈತರಿಗೆ ಸಂಭಂದಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ, ಎಲ್ಲಾ ಯೋಜನೆಗಳನ್ನು ಒಂದೇ ರೂಪ್ ನಡಿ ತರಲಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ 100 ಸ್ಮಾರ್ಟ್ ಸಿಟಿಗಳ ಮಾದರಿಯಲ್ಲಿಯೇ, ಈ ಯೋಜನೆ ಇದೆ ಎಂಬ ಭಾವನೆ ನನ್ನದಾಗಿದೆ.
‘ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಸಂಶೋಧನೆ ಮತ್ತು ಅಭಿವೃದ್ಧಿ ಪೀಠ’ ವನ್ನು ಯಾವುದಾದರೂ ಒಂದು ಕೃಷಿ/ತೋಟಗಾರಿಕಾ ವಿಶ್ವ ವಿದ್ಯಾನಿಯಲಯದ ಅಥವಾ 6 ಜಿಲ್ಲೆಗಳ ವ್ಯಾಪ್ತಿಯ 6 ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲು ಶಕ್ತಿಪೀಠ ಫೌಂಡೇಷನ್ ಚಿಂತನೆ ನಡೆಸಿದೆ.
ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾಗಿದ್ದ, ನಾನು ‘ನಂಬರ್ ಒನ್ ಸ್ಮಾರ್ಟ್ ಸಿಟಿ ತುಮಕೂರು’ ವಾಟ್ಸ್ ಅಫ್ ಗ್ರೂಪ್ ರಚಿಸಿದ್ದೆ, ಅಧಿಕಾರಿಗಳು ಗುಂಪಿನಲ್ಲಿ ಸೇರಲು ಭಯಪಡುತ್ತಿದ್ದರು,
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾಗಿದ್ದ, ಈಗಿನ ಮುಖ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶಾಲಿನಿ ರಜನೀಶ್ ರವರೊಂದಿಗೆ ಚರ್ಚಿಸಿದಾಗ, ಎಲ್ಲಾ ಅಧಿಕಾರಿಗಳು ಸೇರ್ಪಡೆ ಮಾಡಲು ಸೂಚಿಸಿದ್ದು ಇತಿಹಾಸ, ಅದೇ ರೀತಿ ನಾವು ಹಲವಾರು ವಿಚಾರಗಳಲ್ಲಿ ‘ನಾವೇ ನಂಬರ್ ಒನ್ ಆಗಿದ್ದು ಹೆಮ್ಮೆ’.
ಕಾಕತಾಳೀಯವಾಗಿ ಈಗಲು ರಾಜ್ಯ ಮಟ್ಟದ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಸಮಿತಿಗೆ ಅವರೇ ಅಧ್ಯಕ್ಷರಾಗಿದ್ದಾರೆ. 100 ಕ್ಕೆ 100 ನಮ್ಮ ರಾಜ್ಯ ಪ್ರಥಮ ರ್ಯಾಂಕಿಂಗ್ ಪಡೆಯಲು ನಿರಂತರವಾಗಿ ಶ್ರಮಿಸಲಾಗುವುದು.
6 ಜಿಲ್ಲೆಗಳ ಕೃಷಿ ಆಶ್ರಮಗಳು ನಮಗೆ ಬೆನ್ನುಲೆಬಾಗಿ ನಿಲ್ಲಬೇಕು, ನಾವು ಸಹ ನಿಮ್ಮ ಕನಸಿಗೆ ಪಾರದರ್ಶಕವಾಗಿ ಆನೆಬಲ ತುಂಬುತ್ತೇವೆ.
