TUMAKURU:SHAKTHI PEETA FOUNDATION
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ, ಪ್ರತಿ ಜಿಲ್ಲೆಗೂ, ಒಂದೊ0ದು ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾನಿಲಯಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿ ಈ ಕೆಳಕಂಡ0ತಿದೆ.
1. ತುಮಕೂರು ಜಿಲ್ಲೆ ವ್ಯಾಪ್ತಿ – ಕೃಷಿ ವಿಶ್ವವಿದ್ಯಾಲಯ ಬೆಂಗಳೂರು
2. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿ – ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ
3. ಕೊಪ್ಪಳ ಜಿಲ್ಲೆ ವ್ಯಾಪ್ತಿ – ಕೃಷಿ ಮಹಾವಿದ್ಯಾಲಯ ರಾಯಚೂರು
4. ಗದಗ ಜಿಲ್ಲೆ ವ್ಯಾಪ್ತಿ – ಕೃಷಿ ವಿಶ್ವವಿದ್ಯಾಲಯ ಧಾರವಾಡ
5. ಹಾವೇರಿ ಜಿಲ್ಲೆ ವ್ಯಾಪ್ತಿ – ಕೃಷಿ ವಿಶ್ವವಿದ್ಯಾಲಯ ಧಾರವಾಡ
6. ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿ – ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲ ಕೋಟೆ
ಗದಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯ ಇರುವುದರಿಂದ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡಕ್ಕೆ ಎರಡು ಜಿಲ್ಲೆಗಳ ವ್ಯಾಪ್ತಿ ಇರುವುದರಿಂದ ಗದಗ ಜಿಲ್ಲೆಯನ್ನು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯ ಗದಗ ಇವರಿಗೆ ನೀಡುವುದು ಸೂಕ್ತ. ಆದರೇ ಸರ್ಕಾರದ ತೀರ್ಮಾನ ಅಂತಿಮ.
