16th January 2026
Share

TUMAKURU:SHAKTHIPEETA FOUNDATION

ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲ್ಲೋಕಿನ ಹನುಮ ಹುಟ್ಟಿದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಾದರಿ ಕೃಷಿ ಆಶ್ರಮ/ಗುರುಕುಲ ಜನ್ಮ ತಾಳಿದೆ. ಮಣ್ಣಿನ ತಜ್ಞ ಮಾರುತಿ ರಾವ್ ಕೃಷಿ ಆಶ್ರಮ ಮಾಡೆಲ್‍ಗಳ ಸರದಾರರಾಗಿದ್ದಾರೆ.

ಒಂದು ಎಕರೆ ಪ್ರದೇಶದಲ್ಲಿ ಸಾವಯವ ತರಕಾರಿ ಬೆಳೆದು ವಾರ್ಷಿಕ ರೂ 7.50 ಲಕ್ಷ ದುಡಿಮೆಯ ಹಾದಿ ತುಳಿದಿದ್ದಾರೆ. 30 ಎಕರೆಯಲ್ಲಿ ಸುಮಾರು 12 ಮಾಡೆಲ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಒಂದೆರಡು ವರ್ಷ ಕಳೆದರೆ ವಿಜಯನಗರ ಸಾಮ್ರಾಜ್ಯದ ಕೃಷಿಯ ಗತಕಾಲದ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ.

ನಮ್ಮ ತಂಡವೂ ಸಹ ರೂ 500 ಸಾವಯವ ತರಕಾರಿ ಕೊಂಡು ಬಂದೆವು. ಹೆಚ್ಚಿನ ವಿವರಗಳಿಗೆ ಮಾರುತಿ ರಾವ್ -9945111097 ಸಂಪರ್ಕಿಸಿ.