16th January 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ಕೃಷಿ ಆಶ್ರಮ/ ಕೃಷಿ ಪ್ರವಾಸೋಧ್ಯಮ’ ಗಳ ಸದ್ಧು ಕೇಳಿಸುತ್ತಿದೆ. ಟ್ರೆಡಿಷನ್ ಕೃಷಿ ಮರುಸ್ಥಾಪನೆ, ಇನ್ನೊವೇಟೀವ್ ರೈತರ ಗುಂಪುಕಟ್ಟಿಕೊAಡು ಜ್ಞಾನ ವಿನಿಮಯ ಮಾಡಿಕೊಳ್ಳುವುದು, ಬುದ್ಧಿವಂತ ರೈತರು ಕೆಮಿಕಲ್ ಕೃಷಿಗೆ ಸೆಡ್ಡು ಹೊಡೆದು, ಸಾವಯವ ಕೃಷಿ ಮಾಡಿ, ಕೆಮಿಕಲ್ ಕೃಷಿಗಿಂತ ಹೆಚ್ಚಿಗೆ ಆದಾಯ ಗಳಿಸಲು ಸಾಧ್ಯವೇ ಎಂದು ದಾಖಲೆ ಸಹಿತ ಅಧ್ಯಯನ ಮಾಡುವುದು.

 ಪಂಚಭೂತ ಸಂರಕ್ಷಣೆ ಮಾಡುವುದು, ತಮ್ಮ ಕುಟುಂಬದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು. ನಮ್ಮ ಮೇಲೆ ನಂಬಿಕೆ ಇಡುವ ಹಲವಾರು ಕುಟುಂಬಗಳಿಗೆ ವಿಷಮುಕ್ತ ಆಹಾರದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವುದು. ಪ್ರಾಮಾಣಿಕವಾಗಿ ಕಲಿಯಲು ಆಸಕ್ತಿ ಇರುವವರಿಗೆ ಗುರುಕುಲ’ ಮಾದರಿಯಲ್ಲಿ ಕೃಷಿ ಕಲಿಸುವುದು.

 ಸರ್ಕಾರದ ಯೋಜನೆಗಳ ಹಿಂದೆ ಬೀಳಲು ಇವರಿಗೆ ಸಮಯ ಇಲ್ಲ, ಕೃಷಿ ವಿಶ್ವ ವಿದ್ಯಾನಿಲಯಗಳ ಕೆಮಿಕಲ್ ವೈಜ್ಞಾನಿಕ ಚಿಂತನೆ ಇವರಿಗೆ ಇಷ್ಟವಿಲ್ಲ, ಬ್ಯಾಂಕ್‌ಗಳ ಸಾಲದ ಬಿಕ್ಷೆಗೆ ಇವರಿಗೆ ಸಿಟ್ಟು. ಅವರು ಸಾಧಿಸಿದ ನಂತರ ಎಲ್ಲರೂ ಅವರ ಮನೆ ಬಾಗಿಲಿಗೆ ಸೇವೆ, ಸೌಲಭ್ಯ ಮಾಡಿರುವ ಸಂಗತಿಗಳೇ ಹೆಚ್ಚಂತೆ.

ಇ0ತಹ 1120 ಕೃಷಿ ಆಶ್ರಮಗಳ ಮನೆ ಬಾಗಿಲಿಗೆ, ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಸ್ಟಾರ್ಟ್ ಅಪ್’ ಗಳ ಅಗತ್ಯ ಇದೆ. ನಿಧಿಷ್ಠ ಗುರಿ ಎಂದರೆ, ಕೇಂದ್ರ ಸರ್ಕಾರ  PMDDKY ಯೋಜನೆಗೆ 6 ವರ್ಷಕ್ಕೆ 100 ಜಿಲ್ಲೆಗಳಿಗೆ ವರ್ಷಕ್ಕೆ 24000 ಕೋಟಿ, 6 ವರ್ಷಕ್ಕೆ 1.44 ಲಕ್ಷ ಕೋಟಿ ಮೀಸಲಿಟ್ಟಿದೆ.

 ಈ ಮೊತ್ತದಲ್ಲಿ ಕರ್ನಾಟಕ ರಾಜ್ಯದಲ್ಲಿ PMDDKY ಯೋಜನೆಗೆ ಆಯ್ಕೆ ಆಗಿರುವ 6 ಜಿಲ್ಲೆಗಳಿಗೆ ಮತ್ತು ನಾವು ಸೇರ್ಪಡೆ ಮಾಡಲು ಉದ್ದೇಶಿರುವ ಕೃಷಿ ಆಶ್ರಮಗಳಿಗೆ, ಎಷ್ಟು, ಯಾರಿಗೆ, ಹೇಗೆ ತಲುಪಿದೆ, ಇದರಿಂದ ಆದ ಪ್ರಯೋಜನ ಏನು ಎಂಬ ಅಧ್ಯಯನವೇ PMDDKY ಯೋಜನೆ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ ದ ಪ್ರಮುಖ ಉದ್ದೇಶ.ಯಾವುದೇ ವಿಶ್ವ ವಿದ್ಯಾನಿಲಯ, ಸಂಸ್ಥೆ, ಕುಟುಂಬ ಮತ್ತು ವ್ಯಕ್ತಿಗಳಿಗೆ,ಸ್ಥಾಪಿಸಲು ಆಸಕ್ತಿ ಇದ್ದಲ್ಲಿ ಸಂಪರ್ಕಿಸಲು ಬಹಿರಂಗ ಮನವಿ.

ಮುಂದಿನ 6 ವರ್ಷಗಳಲ್ಲಿ, ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕೇತ್ರಗಳಲ್ಲಿ ತಲಾ 5 ರಂತೆ, ರಚಿಸುತ್ತಿರುವ 1120 ಕೃಷಿ ಆಶ್ರಮಗಳ ಪಾತ್ರ ಮಹತ್ತರವಾಗಿರಲಿದೆ, ವಿಶ್ವದ ಗಮನ ಸೆಳೆಯಲಿದೆ, ಎಂಬ ಕನಸು ಕೃಷಿ ಆಶ್ರಮಗಳ ಹರಿಕಾರರದ ಡಾ.ಬಿ.ಎಂ.ನಾಗಭೂಷಣ್ ಮತ್ತು ಅವರ ತಂಡಕ್ಕೆ ಇದೆ. ಕೃಷಿ ಆಶ್ರಮಗಳ ಹೆಸರಿಗೆ ಬದಲಾಗಿ, ರಾಜ್ಯ ಸರ್ಕಾರ ಏನೇ ಹೆಸರು ಘೋಶಿಸಲಿ, ಕೇಂದ್ರ ಸರ್ಕಾರ ಏನೇ ಹೆಸರು ಘೋಶಿಸಲಿ, ‘ಪಂಚಭೂತಗಳ ಸಂರಕ್ಷಣೆ ಮೌನ ಕ್ರಾಂತಿ’ ಗೆ ಸಜ್ಜಾಗಿವೆ ಎಂದರೆ ತಪ್ಪಾಗಲಾರದು.

ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು, ಕೃಷಿ ಸಚಿವರಾದ ಶ್ರೀ ಚಲುವರಾಯಸ್ವಾಮಿರವರು, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ರೂಪುರೇಷೆ ನಿರ್ಧರಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ನಮ್ಮ ಎಲ್ಲಾ ಮನವಿ ಪತ್ರಗಳನ್ನು ರವಾನಿಸಿದ್ದಾರೆ. ಕೃಷಿ ಜ್ಞಾನ ಭಂಢಾರದ0ತಿರುವ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರು ಮತ್ತು ಅವರ ತಂಡ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲಾ ವರ್ಗದವರು ಒಪ್ಪುವ ಕೃಷಿ ಆಶ್ರಮಗಳಿಗೆ ಸಂಪರ್ಕ ಸೇತುವೆಯಾಗಿ, ಸರ್ಕಾರಿ ಸವಲತ್ತುನ್ನು ಆಸಕ್ತರಿಗೆ ತಪುಪಿಸಲು ಸಾದ್ಯವೇ ಎಂಬ ಅಧ್ಯಯನವನ್ನು ಶಕ್ತಿಪೀಠ ಫೌಂಡೇಷನ್ ಆರಂಭಿಸಿದೆ.

 ಕಳೆದ ಒಂದು ವರ್ಷದ ಅನುಭವ, ಗುರಿ ತಲುಪಬಹುದು ಎಂಬ ಆಶಾಭಾವನೆ ಇದೆ. ಅದು ಅಷ್ಟೋಂದು ಸುಲಭದ ಹಾದಿಯಲ್ಲ ಎಂಬ ಅರಿವು ಇದೆ. ಪಲಿತಾಂಶಕ್ಕೆ ಕಾಯಲೇ ಬೇಕಲ್ಲವೇ ? ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದಿನ ಆಯವ್ಯಯದಲ್ಲಿ ಸಿಹಿ ಸುದ್ಧಿ ಸಿಗಬಹುದೇ ಕಾದು ನೋಡೋಣ.

ಇಂದಿನಿ0ದ PMDDKY ಮಾರ್ಗದರ್ಶಿ ಸೂತ್ರದ ಅವಲೋಕನ ಆರಂಭವಾಗಲಿದೆ.