16th January 2026
Share

TUMAKURU : SHAKTHIPEETA FOUNDATION

ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ರಚಿಸುತ್ತಿರುವ 1120 ಕೃಷಿ ಆಶ್ರಮ ಗಳಲ್ಲಿ, ಈಗಾಗಲೇ ಸುಮಾರು 60 ಕ್ಕೂ ಹೆಚ್ಚು ಕಳೆ-ಬೆಳೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕೃಷಿ ಆಶ್ರಮಗಳ ಅಲಿಖಿತ ನಿಯಮ ಪ್ರಕಾರ ಪ್ರತಿಯೊಬ್ಬರೂ ಒಂದೊಂದು ಕಳೆ-ಬೆಳೆ ಆಯ್ಕೆ ಮಾಡಿಕೊಳ್ಳಬೇಕು, ನಾನು ನನ್ನ ಜೀವನಕ್ಕೆ ಆಧಾರವಾಗಿರುವ ಅಡಿಕೆ ಬೆಳೆಯನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.

ತುಮಕೂರು ಜಿಲ್ಲೆ, ತುಮಕೂರು ಲೋಕಸಭಾ ಕ್ಷೇತ್ರದ, ಗುಬ್ಬಿ ತಾಲ್ಲೋಕಿನ, ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಕುಂದರನಹಳ್ಳಿ ಮತ್ತು ತ್ಯಾಗಟೂರು ಗ್ರಾಮ ಪಂಚಾಯಿತಿಯ ಸಾಗರನಹಳ್ಳಿ ಗ್ರಾಮದ ಸುಮಾರು 6 ಎಕರೆ ಜಮೀನಿನಲ್ಲಿ ಅಡಿಕೆ ನಾಲೇಡ್ಜ್ ಬ್ಯಾಂಕ್ ಮೂಲಕ ಸಂಶೋಧನೆ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಅಡಿಕೆ ಬಗ್ಗೆ ಅನುಭವ ಇರುವ ರೈತ ಜ್ಞಾನಿಗಳು ನನ್ನ ತೋಟಕ್ಕೆ ಆಗಮಿಸಿ, ಯಾವ ಸಾವಯವ ಗೊಬ್ಬರ ಯಾವಾಗ ಹಾಕಬೇಕು, ಯಾವ ಸಾವಯವ ಔಷಧಿ ಯಾವಾಗ ಹೇಗೆ ಹಾಕಬೇಕು, ಯಾವ ರೋಗಕ್ಕೆ ಏನು ಮಾಡಬೇಕು ಎಂಬ ವೈಜ್ಞಾನಿಕ ಆಧಾರಿತವಾಗಿ ಸಲಹೆ ನೀಡಿದಲ್ಲಿ ನಿಮ್ಮ ಸ್ಥಳದಿಂದ ಬಂದು ಹೋಗುವ ಸಾರಿಗೆ ವೆಚ್ಚ, ದಿನಭತ್ಯೆ, ಊಟ ತಿಂಡಿಯ ವೆಚ್ಚವನ್ನು ಭರಿಸಲಾಗುವುದು.

ಸಾವಯವ ಗೊಬ್ಬರ ಮತ್ತು ಔಷಧಿಗಳನ್ನು ಸುಮಾರು 30 ಎಕರೆಗೆ ಆಗುವಷ್ಠು ಕೊಂಡು ಕೊಳ್ಳಲಾಗುವುದು. ಸಕ್ಷಮ ಪ್ರಾಧಿಕಾರಗಳಲ್ಲಿ ಅನುಮೋದನೆಯನ್ನು ನಿಯಮ ಪ್ರಕಾರ ಮಾಡಿಸಲಾಗುವುದು. ಮಣ್ಣಿನ ತಜ್ಞರು ಸಹ ಸಲಹೆ ನೀಡಲು ಮನವಿ.

ಅಡಿಕೆ ಬಗ್ಗೆ ಸಂಶೋಧನೆ ಮಾಡಿರುವವರು, ಮಾಡುತ್ತಿರುವವರ ಮಾಹಿತಿಗಳು ಇದ್ದಲ್ಲಿ ಹಂಚಿಕೊಳ್ಳಲು ಮನವಿ.

ಹಿರೇಹಳ್ಳಿ ಮತ್ತು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕಾ ಇಲಾಖಾ ಅಧಿಕಾರಿಗಳು, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಸಹ ಆಗಮಿಸಿ ವೈಜ್ಞಾನಿಕ ಸಲಹೆ ನೀಡಲು ಮನವಿ ಮಾಡಿದ್ದೇನೆ.

ನನ್ನ ಅಡಿಕೆ ತೋಟಕ್ಕೆ ಏನೇನು ಮಾಡಿಸಬೇಕೋ, ಅದನ್ನು ಮಾಡಿಸಿದ ನಂತರ ಆಸಕ್ತ ಅಡಿಕೆ ಬೆಳೆಗಾರರ ಚಿಂತನಾ ಸಮಾವೇಶ ಮಾಡಲಾಗುವುದು ಆಸಕ್ತರು ನೊಂದಾಯಿಸಿಕೊಳ್ಳ ಬಹುದು.

ಅಡಿಕೆ ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾರ್ಟ್‍ಅಫ್ ಮಾಡಿರುವವರು ಹಾಗೂ ಮಾಡಲು ಇಚ್ಚೆಯುಳ್ಳಯವರು  ಸಹ ನೊಂದಾಯಿಸಿಕೊಳ್ಳ ಬಹುದು.

ಗೋರಕ್ ಸಮಿತಿ ವರಧಿ, ಡಾ.ಸ್ವಾಮಿನಾಥನ್ ವರದಿ ಹಾಗೂ ಅಡಿಕೆ ಬಗ್ಗೆ ಪರ- ವಿರೋಧ ಯಾವುದೇ ವರದಿಗಳ ಬಗ್ಗೆ ಅಧ್ಯಯನ ಮಾಡಿರುವವರು/ ಜ್ಞಾನವುಳ್ಳವರು  ಸಹ ನೊಂದಾಯಿಸಿಕೊಳ್ಳ ಬಹುದು.

ಚಿಂತನಾ ಸಮಾವೇಶದಲ್ಲಿ ಕೆಳಕಂಡ ಅಂಶಗಳ ಜ್ಞಾನಿಗಳು ಭಾಗವಹಿಸಿ ಪ್ರತಿಕ್ರೀಯೆ ನೀಡಲು ಮುಕ್ತ ಆಹ್ವಾನ.

1.            ಅಡಿಕೆ ಇತಿಹಾಸ,ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ

2.            ಅಡಿಕೆ ನಾಲೇಡ್ಜ್ ಬ್ಯಾಂಕ್ ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟದವರೆಗಿನ (ಜ್ಞಾನಿಗಳ ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿ) ಸಂಶೋಧನೆ ಮತ್ತು ಅಭಿವೃದ್ಧಿ 

3.            ಅಡಿಕೆ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ

4.            ಅಡಿಕೆ ಮೌಲ್ಯವರ್ಧಿತ ಉತ್ಪನ್ನಗಳ ಯಂತ್ರೋಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ

5.            ಅಡಿಕೆ ಮ್ಯೂಸಿಯಂ ಸಂಶೋಧನೆ ಮತ್ತು ಅಭಿವೃದ್ಧಿ 

6.            ಅಡಿಕೆ ಕೃಷಿ ಕ್ಲಸ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ

7.            ಅಡಿಕೆ ಮೌಲ್ಯವರ್ಧಿತ ಉತ್ಪನ್ನಗಳ ಕ್ಲಸ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ

8.            ಅಡಿಕೆ ಸೀಡ್ ಬ್ಯಾಂಕ್, ಅಡಿಕೆ ನರ್ಸರಿ ಸಂಶೋಧನೆ ಮತ್ತು ಅಭಿವೃದ್ಧಿ

9.            ಅಡಿಕೆ ಕೃಷಿಗೆ ಬಳಸುವ ಸಾವಯವ ಗೊಬ್ಬರ ಸಂಶೋಧನೆ ಮತ್ತು ಅಭಿವೃದ್ಧಿ 

10.         ಅಡಿಕೆ ಕೃಷಿಗೆ ಬಳಸುವ ಸಾವಯವ ಕ್ರಿಮಿನಾಷಕ ಸಂಶೋಧನೆ ಮತ್ತು ಅಭಿವೃದ್ಧಿ 

11.         ಅಡಿಕೆ ಮೌಲ್ಯವರ್ಧೀತ ಉತ್ತನ್ನಗಳ ಬಳಕೆ ಸಂಶೋಧನೆ ಮತ್ತು ಅಭಿವೃದ್ಧಿ 

12.         ಅಡಿಕೆ ಮೌಲ್ಯವರ್ಧೀತ ಉತ್ತನ್ನಗಳ ರಫ್ತು ಸಂಶೋಧನೆ ಮತ್ತು ಅಭಿವೃದ್ಧಿ 

13.         ಅಡಿಕೆ ಕೃಷಿ, ಮೌಲ್ಯವರ್ಧಿತ ಉತ್ತನ್ನಗಳ ಫಾರ್‍ವರ್ಡ್-ಬ್ಯಾಕ್‍ವರ್ಡ್  ಲಿಂಕೇಜ್ ಸಂಶೋಧನೆ ಮತ್ತು ಅಭಿವೃದ್ಧಿ 

14.         ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಡಿಕೆ ಕೃಷಿ, ಮೌಲ್ಯವರ್ಧಿತ ಉತ್ತನ್ನಗಳಿಗೆ ಇರುವ ಯೋಜನೆಗಳ ಸಂಶೋಧನೆ ಮತ್ತು ಅಭಿವೃದ್ಧಿ 

15.         ಅಡಿಕೆ ಕೃಷಿಗೆ ವೈಜ್ಞಾನಿಕ ನೀರು ಬಳಕೆ ಸಂಶೋಧನೆ ಮತ್ತು ಅಭಿವೃದ್ಧಿ 

16.         ಅಡಿಕೆ ಕೃಷಿಗೆ ವೈಜ್ಞಾನಿಕ ಮಣ್ಣಿನ ಗುಣಮಟ್ಟ ಸಂಶೋಧನೆ ಮತ್ತು ಅಭಿವೃದ್ಧಿ 

17.         ಅಡಿಕೆ ಕೃಷಿಗೆ ವೈಜ್ಞಾನಿಕ ಹವಾಮಾನ ಗುಣಮಟ್ಟ ಸಂಶೋಧನೆ ಮತ್ತು ಅಭಿವೃದ್ಧಿ 

18.         ಅಡಿಕೆ ಕೃಷಿಗೆ ಪೂರಕವಾದ ಸ್ಟಾರ್ಟ್ ಅಫ್  ಸಂಶೋಧನೆ ಮತ್ತು ಅಭಿವೃದ್ಧಿ 

19.         ಅಡಿಕೆ ಪ್ರಮಾಣೀಕೃತ ಸಾವಯವ ಕೃಷಿ – ಕೆಮಿಕಲ್ ಕೃಷಿ ಆದಾಯ ಹಾಗೂ ಖರ್ಚುಗಳ ವೈಜ್ಞಾನಿಕ ಡಿಜಿಟಲ್ ಲೈವ್ ವಿಶ್ಲೇಷಣೆ ಸಂಶೋಧನೆ ಮತ್ತು ಅಭಿವೃದ್ಧಿ 

20.         ಅಡಿಕೆ ಬೆಳೆಗಾರ ರೈತರಿಗೆ  ವಿಜ್ಞಾನಿ, ಡಾಕ್ಟರೇಟ್ ನೀಡಲು ಸಿಲಬಸ್, ತರಭೇತಿ, ವೈಜ್ಞಾನಿಕ ಧೃಡೀಕರಣಗಳ ಪತ್ರ ನೀಡುವ  ಸಂಶೋಧನೆ ಮತ್ತು ಅಭಿವೃದ್ಧಿ 

21.         ಅಡಿಕೆ ತೋಟದಲ್ಲಿ ಇಂಟರ್ ಕ್ರಾಪ್ ಬೆಳೆಗಳ ಸಂಶೋಧನೆ ಮತ್ತು ಅಭಿವೃದ್ಧಿ 

ಅಡಿಕೆ ನರ್ಸರಿ ಮಾಡಿರುವವರು, ಅಡಿಕೆಯಲ್ಲಿ ಎಷ್ಟು ತಳಿಗಳು ಇವೆಯೋ, ಆ ಎಲ್ಲಾ ತಳಿಗಳ ಗಿಡಗಳನ್ನು ಕೊಂಡು ಕೊಳ್ಳಲಾಗುವುದು, ನರ್ಸರಿ ಮಾಡಿರುವವರು ಸಂಪರ್ಕಿಸಿ – 9886774477