16th January 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ 1120 ಕೃಷಿ ಆಶ್ರಮಗಳು, ಪ್ರಪಂಚದ ಎಲ್ಲಾ 195 ದೇಶಗಳಿಗೆ ತಮ್ಮ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದಾರೆ.

ಪೋಸ್ಟ್ ಆಫೀಸ್, ಕೃಷಿ ಆಶ್ರಮ, ಗ್ರಾಮಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದ ಪಿಪಿಪಿ ಮಾದರಿಯ ವಿನೂತನ ಯೋಜನೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲು, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಮನವಿ ಮಾಡಲಾಗಿದೆ.

ರಾಜ್ಯದ 31 ಜಿಲ್ಲೆಗಳಲ್ಲೂ, ಆಸಕ್ತ ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ಅಪೆಡಾ ಸಭೆಗಳನ್ನು ಆಯೋಜಿಸಿ, ರಫ್ತು ಬಗ್ಗೆ ಜನಜಾಗೃತಿ ಮೂಡಿಸಲು  ಕಾರ್ಯತಂತ್ರ ರೂಪಿಸಲು ದಿನಾಂಕ:08.01.2026 ರಂದು ಬೆಂಗಳೂರಿನ ಹೆಬ್ಬಾಳ ಬಳಿ ಇರುವ APEDAAGRICULTURAL AND PROCESSED FOOD PRODUCTS EXPORT DEVELOPMENT AUTHORITY / ಅಗ್ರಿಕಲ್ಚ್ ರಲ್ ಅಂಡ್ ಫುಡ್ ಪ್ರಾಡಕ್ಟ್ ಎಕ್ಸ್ ಪೋರ್ಟ್ ಡೆವಲಪ್ ಮೆಂಟ್ ಅಥಾರಿಟಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಕೇರಳ ಮತ್ತು ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಶ್ರೀ ಯು.ಧರ್ಮರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಹಾಜಾರಾಗಲು ಮನವಿ.

 ಆಸಕ್ತರು ಡಾ.ನಾಗಭೂಷಣ್ ರವರನ್ನು ಸಂಪರ್ಕಿಸಿ

ಬೆಸ್ಟ್ ಪ್ರಾಕ್ಟೀಸ್ : ಉತ್ತರ ಕರ್ನಾಟಕದ, ಒಂದು ರೈತ ಕುಟುಂಬದ ಪತಿ ಪತ್ನಿಯರು ವಿದೇಶದಲ್ಲಿರುವ ತಮ್ಮ ಸಂಭAಧಿಕರಿಗೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಟ್ನಿ ಪುಡಿಯನ್ನು ಪೋಸ್ಟ್ ಆಫೀಸ್ ಮೂಲಕ ಕಳುಹಿಸುವಾಗ, ಅವರಿಗೆ ಹೊಳೆದಿದ್ದು ನಾವ್ಯಾಕೆ ರಫ್ತು ವ್ಯವಹಾರಕ್ಕೆ ಇಳಿಯಬಾರದು ಎಂಬ ಚಿಂತನೆ, ಇಂದು ವ್ಯಾಗಿನ್‌ಗಟ್ಟಲೇ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಟ್ನಿ ಪುಡಿಯನ್ನು ರಫ್ತು ಮಾಡುತ್ತಿದ್ದಾರಂತೆ, ಸಂಪೂರ್ಣ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಅವರ ಬಾಯಲ್ಲಿ ಕೇಳೋಣ.