TUMAKURU:SHAKTHIPEETA FOUNDATION
ಕಳೆದ ಹಲವಾರು ವರ್ಷಗಳಿಂದ ಡಾ.ನಾಗಭೂಷಣ್, ಡಾ.ಜಗನ್ನಾಥ್ ರವರ ತಂಡ ಹಲವಾರು ವರ್ಷಗಳಿಂದ ಸಾವಯವ ಕೃಷಿ ಬಗ್ಗೆ ಕೆಲಸ ಮಾಡುತ್ತಿದ್ದರೂ, 2024 ರಿಂದ ರಾಜ್ಯದ್ಯಾಂತ ‘ಕೃಷಿ ಆಶ್ರಮ’ ಹೆಚ್ಚು ಸದ್ಧು ಮಾಡುತ್ತಿದೆಯಂತೆ ಇತಿಹಾಸ ಅವರ ತಂಡವೇ ಹೇಳಬೇಕಿದೆ.
ಶಕ್ತಿಪೀಠ ಫೌಂಡೇಷನ್ ಪರಿಕಲ್ಪನೆಯ, ‘ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್’ 2025 ರಿಂದ ಆರಂಭವಾಗಿದೆ. ಜೊತೆಗೆ ‘ಫಾರ್ಮರ್ ಸಿಟಿ, ಫಾರ್ಮರ್ ಕಾರಿಡಾರ್, ಕೃಷಿ ಸಂಶೋಧನಾ ನಗರ’ ಚಿಂತನೆ ಇತ್ತೀಚೆಗೆ ಆರಂಭವಾಗಿದೆ.
ಈ ಎಲ್ಲಾ ವಿಚಾರಗಳು ರಾಜ್ಯದ ಮುಖ್ಯ ಮಂತ್ರಿಯವರು, ಕೃಷಿ ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಯವರು ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಮಾನ್ಯ ಪ್ರಧಾನ ಮಂತ್ರಿಯವರು, ಮಾನ್ಯ ಕೇಂದ್ರ ಕೃಷಿ ಸಚಿವರ ಗಮನಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಮುಂದಿನ ಆಯವ್ಯಯಕ್ಕೆ ಮುನ್ನ ಅಂದರೆ ಒಂದು ವಾರದೊಳಗೆ ಕೆಂದ್ರ ಸರ್ಕಾರಕ್ಕೆ ರಾಜ್ಯದ ಮುಖ್ಯ ಮಂತ್ರಿಯವರಿಂದ ಪತ್ರ ಬರೆಯುವ ಕಡತದ ಅನುಸರಣೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಅಂಗಳದಲ್ಲಿ ಎಲ್ಲಾ ಚಟುವಟಿಕೆಗಳು ವೈಜ್ಞಾನಿಕವಾಗಿ ನಡೆಯುತ್ತಿವೆ.
ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಸಲಹೆಯ ಮೇರೆಗೆ ‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಆರಂಭಿಸಿ, ಇವೆಲ್ಲಾ ಮಾಹಿತಿಯನ್ನು ಒಳಗೊಂಡ ಪೋರ್ಟಲ್ ರಚಿಸಿ, ಡಿಜಿಟಲ್ ಮೂಲಕ, ಸಾರ್ವಜನಿಕ ಅಭಿಪ್ರಾಯ, ಸಲಹೆ, ಮಾರ್ಗದರ್ಶನ, ಪರ-ವಿರೋಧ ಗುಂಪು ಚರ್ಚೆ ಆರಂಭಿಸಲು ಕಾಲಮಿತಿ ನಿಗಧಿಗೊಳಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಸಲಹೆಯ ಮೇರೆಗೆ, ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ.
1. ದಿನಾಂಕ: 08.01.2026 ರೊಳಗೆ ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರದ ಪ್ರತಿ.
2. ದಿನಾಂಕ: 12.01.2026 ರೊಳಗೆ ಪಿಪಿಟಿ.
3. ದಿನಾಂಕ: 20.01.2026 ರೊಳಗೆ ಪರಿಕಲ್ಪನಾ ವರದಿ.
4. ದಿನಾಂಕ: 20.01.2026 ರೊಳಗೆ ಆಫ್ ಮತ್ತು ಪೋರ್ಟಲ್.
5. ದಿನಾಂಕ: 10.02.2026 ರೊಳಗೆ 1120 ಕಳೆ-ಬೆಳೆ ಅಡಿಕೆ ನಾಲೇಡ್ಜ್ ಬ್ಯಾಂಕ್ ಘೋಷಣೆಯಡಿ, ಫೈಲಟ್ ಯೋಜನೆಯಾಗಿ ಅಡಿಕೆ ನಾಲೇಡ್ಜ್ ಬ್ಯಾಂಕ್ ಆರಂಭ.
6. ದಿನಾಂಕ: 20.03.2026 ರೊಳಗೆ ಆಯುಷ್ ಮಂಡಿ/ ಮ್ಯೂಸಿಯಂ ಪರಿಕಲ್ಪನಾ ಪ್ರಸ್ತಾವನೆ.
7. ದಿನಾಂಕ: 20.06.2026 ರೊಳಗೆ ಒಂದೇ ಕಡೆ 1120 ಕಳೆ-ಬೆಳೆ ಪ್ರಾತ್ಯಾಕ್ಷಿಕೆ.
8. ದಿನಾಂಕ: 01.04.2026 ರೊಳಗೆ ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ ಆರಂಭ.
9. ದಿನಾಂಕ: 01.08.2026 ರೊಳಗೆ ರಾಜ್ಯದ ಎಲ್ಲಾ ಕೃಷಿ,ತೋಟಗಾರಿಕೆ, ಮೀನುಗಾರಿಕೆ ವಿಶ್ವ ವಿದ್ಯಾನಿಲಯ, ಐಐಹೆಚ್‍ಆರ್ ಮತ್ತು 33 ಕೃಷಿ ವಿಜ್ಞಾನ ಕೇಂದ್ರಗಳೊಂದಿಗೆ ಸಂವಾದ ನಡೆಸಿ, ನಂತರ ವಿಶ್ವಧ್ಯಾಂತ ಆಸಕ್ತ ಎಲ್ಲಾ ವರ್ಗದವರ ಅಭಿಪ್ರಾಯದೊಂದಿಗೆ, ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ.
ತುಮಕೂರಿನ ಚಿರಂತನ ಫೌಂಡೇಷನ್ ಮತ್ತು ಸ್ಟಾರ್ಟ್ ಅಫ್ ತುಮಕೂರು, ಈ ಎರಡು ಸಂಸ್ಥೆಗಳನ್ನು ಸಲಹಾಗಾರರಾಗಿ, ಮುಂದಿನ 15 ವರ್ಷಗಳವರೆಗೆ ನಿರಂತರವಾಗಿ ನಿರ್ವಹಣೆ ಸಹಿತ ಸೇವೆ ಸಲ್ಲಿಸಲು ಶಕ್ತಿಪೀಠ ಫೌಂಡೇಷನ್ ಮತ್ತು ಕೃಷಿ ಆಶ್ರಮಗಳ ತಂಡ ಎಂ.ಓ.ಯು ಮಾಡಿಕೊಳ್ಳಲಿದೆ.
ಬೆಂಗಳೂರಿನ ಜ್ಞಾನ ಫೌಂಡೇಷನ್ ಆರಂಭಿಕ ಮುಂಗಡವಾಗಿ ಇವರಿಗೆ ಟೋಕನ್ ಹಣ ಪಾವತಿಸಲು ಮುಂದೆ ಬಂದಿದೆ. ನಂತರ ಸೇವಾ ಶುಲ್ಕ ಸಂಗ್ರಹದೊಂದಿಗೆ, ಅವರ ನಿರ್ವಹಣೆ ಖರ್ಚು ವೆಚ್ಚ ಸರಿದೂಗಿಸಲು ಚಿಂತನೆ ನಡೆಯುತ್ತಿದೆ.
ದಿನಾಂಕ: 05.01.2026 ರಂದು ಬೆಂಗಳೂರಿನಲ್ಲಿ ಡಾ.ನಾಗಭೂಷಣ್, ದಕ್ಷಿಣ ಕನ್ನಡ ಜಿಲ್ಲೆಯ ಆಳ್ವ ಮತ್ತು ಉದಯ್ ರವರೊಂದಿಗೆ ಹಲವಾರು ವಿಚಾgಗಳ ಬಗ್ಗೆ ಚರ್ಚೆ ನಡೆಯಿತು.

ದಿನಾಂಕ: 06.01.2026 ರಂದು ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಲೋಗಾನಂದ್ ಮತ್ತು ಬೆಂಗಳೂರಿನ ಐಐಹೆಚ್‍ಆರ್ ವಿಜ್ಞಾನಿ ಡಾ. ರೂಪ ರವರೊಂದಿಗೆ ಹಲವಾರು ವಿಚಾgಗಳ ಬಗ್ಗೆ ಚರ್ಚೆ ನಡೆಯಿತು.

ಶಕ್ತಿಪೀಠ ಫೌಂಡೇಷನ್ ಮತ್ತು ಕೃಷಿ ಆಶ್ರಮಗಳ ಜೊತೆ, ಹಣ ಬಂದಾಗ ಪಡೆಯುವ ಷರತ್ತಿನೊಂದಿಗೆ, ಸಂಭಾವನೆ ಸಹಿತ ಕಾರ್ಯ ನಿರ್ವಹಿಸಲು ಆಸಕ್ತಿ ಇರುವವರು ಸಂಪರ್ಕಿಸ ಬಹುದು.
