16th January 2026
Share

TUMAKURU:SHAKTHIPEETA FOUNDATION

ನನಗೆ ಇರುವವರು ಇಬ್ಬರು ಅಕ್ಕಂದಿರು, ಒಬ್ಬ ಗಟ್ಟಿಗಿತ್ತಿ, ಕಾಯಕಯೋಗಿ, ಶರಣೆ, ದಿ.ಕೆ.ಆರ್.ಭ್ರಮರಾಭಿಕ ದಿನಾಂಕ: 07.01.2026 ರಂದು ಅನುಸ್ಪಾದ ಸಾವನ್ನು ಅಪ್ಪಿದ್ದಾರೆ. ಸಾವಿನ ಘಟನೆ ಬಗ್ಗೆ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ, ಕಾರೇಕುರ್ಚಿ ಗ್ರಾಮದ ಪ್ರತಿಯೊಂದು ಮನೆಯವರಿಗೂ ಗೊತ್ತಿದೆ. ನನ್ನ ರಕ್ತ ಸಂಭ0ದಿಕರ ಪ್ರತಿಯೊಬ್ಬರಿಗೂ  ಗೊತ್ತಿದೆ. ಅದು ಈಗ ನ್ಯಾಯಾಲಯದಲ್ಲಿದೆ ನಾನು ಆ ಬಗ್ಗೆ ಮಾತನಾಡುವುದಿಲ್ಲ, ಶನಿ ಗ್ರಹ ಕರ್ಮಫಲಧಾತ’ ಯಾವ ರೀತಿ ನ್ಯಾಯ ನೀಡುತ್ತಾರೋ ಅವರಿಗೆ ಬಿಟ್ಟು ಬಿಡೋಣ.

ಆದರೇ ನನ್ನ ಅಕ್ಕನ ಕೊನೇ ಬೇಡಿಕೆ, ಅವಳು ನನ್ನೊಂದಿಗೆ ಮಾತನಾಡಿದ್ದು, ರಮೇಶು ಒಂದೈದು ಲಕ್ಷ ಕೆಲಸವನ್ನು ಕಾರೇಕುರ್ಚಿ ದೊಣೆಗೆ ಮಾಡಿಸಿಕೊಡು, ಈ ಬಗ್ಗೆ ಮಾತೋಡೋಕೆ ನಮ್ಮೂರಿನವರನ್ನು ಕರೆದುಕೊಂಡು ಬರುತ್ತೇನೆ ಯಾವಾಗ ಬರಲಿ ಎಂದು ಹೇಳಿದ್ದರು. ನಾನು ನಾನೇ ಬರುತ್ತೇನೆಮ್ಮ ದೊಣೆ ಹತ್ತಿರ ಹೋಗಿ ಸ್ವಾಮೀಜಿಗಳ ಹತ್ತಿರ ಮಾತಾಡೋಣ ಎಂದು ಹೇಳಿದ್ದೆ. ಅದೇ ರೀತಿ ದಿನಾಂಕ:07.01.2026 ರಂದು ಅವರ ಊರಿಗೆ ಹೊರಟಾಗ ಸಾವಿನ ಸುದ್ದಿ ಕಿವಿಗೆ ಬಿತ್ತು.

ಇಂದು ಆಕೆ ನನ್ನೊಂದಿಗಿಲ್ಲ, ಆದರೇ ಅವಳ ಕೋರಿಕೆ ಹಿಡೇರಿಸುವುದು ನನ್ನ ಧರ್ಮ ಹೀಡೇರಿಸಲು ಶ್ರಮಿಸುತ್ತೇನೆ. ನಂತರ ಮೂರು ಗಂಭೀರ ಸಮಸ್ಯೆಗಳು ನಮ್ಮ ದೇಶದಲ್ಲಿ ಇವೆ. ಇವಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಲ್ ಮಾಡಿಸುವುದು ಅವಳ ಆತ್ಮಕ್ಕೆ ಶಾಂತಿ ಸಿಗಬಹುದು ಎಂಬ ಅಭಿಪ್ರಾಯವಾಗಿದೆ.

1.            ಹಿರಿಯ ನಾಗರೀಕರ ಯೋಗ ಕ್ಷೇಮ ಬಿಲ್ – 2026

ನನ್ನ ಅಕ್ಕನ ಮತ್ತು ಅಂತಹ ಕೋಟ್ಯಾನುಕೋಟಿ ಹಿರಿಯ ನಾಗಾರಿಕರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ, ಇಂದು ಶೇ 90 ರಷ್ಟು ಹಿರಿಯನಾಗರೀಕರು ನೆಮ್ಮದಿಯಿಂದ ಇಲ್ಲ, ಸೊಸೆ – ಮಗ ಅಥವಾ ಅತ್ತೆ- ಮಾವ ಇವರಿಬ್ಬರ ಕಡೆಯಿಂದಲೂ ಕಿರುಕುಳದ ಪರಿಪಾಠ ಎಲ್ಲರ ಮನೆಯಲ್ಲಿಯೂ ಇದೆ, ಸಮಾಜಕ್ಕೆ ಅಂಜಿ ಒಳಗೆ, ಒಳಗೆ ಸಾಯುವವರೂ ಇದ್ದಾರೆ. ಬೀದಿಗೆ ಬರುವವರು ಇದ್ದಾರೆ. ಅವರ ಅನೂಕೂಲಕ್ಕಾಗಿ ಮತ್ತು ಮನೆಯವರ ನೆಮ್ಮದಿಗಾಗಿ,  60 ವರ್ಷದ ಮೇಲ್ಪಟ್ಟವರನ್ನು, ಕನಿಷ್ಠ 3 ತಿಂಗಳಿಗೆ ಒಮ್ಮೆ ಅವರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳುವ ಒಂದು ಯೋಗಕ್ಷೇಮ ಸಮಿತಿ ಅಗತ್ಯ ಇದೆ.

2.            ಅವಿಹಾತ ರೈತರ ಮಕ್ಕಳ ಬಿಲ್ – 2026

ರೈತರ ಮಕ್ಕಳ ಗಂಡುಗಳಿಗೆ ಹೆಣ್ಣುಗಳು ಸಿಗುತ್ತಿಲ್ಲ, ಇದೊಂದು ಬೃಹತ್ ಸಾಮಾಜಿಕ ಪಿಡುಗು, ಯಾವುದೇ ಊರಿಗೆ ಹೋಗಿ ಕನಿಷ್ಠ 10-15 ಜನ ಮದುವೆ ಆಗಿಲ್ಲ. ಈ ಬಗ್ಗೆ ನವದೆಹಲಿಗೆ ಹೊಗಿದ್ದಾಗ, ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯದ ಸ್ಪೆಷಲ್ ಆಫೀಸರ್ ಹಾಗೂ ಅವರ ತಂಡ ಮತ್ತು ದೆಹಲಿಯ ಒಬ್ಬ ಉನ್ನತ ಅಧಿಕಾರಿಯವರ ಜೊತೆ ಮಾತನಾಡುವಾಗ ಇದೂ ಸಹ ಕೃಷಿಯ ಸಮಸ್ಯೆ ಎಂದು ಚರ್ಚೆ ಮಾಡಿದ್ದೇವು. ನಾನೂ ಅಂದೇ ಒಂದು ಗ್ರೂಪ್ ಸಹ ರಚಿಸಿದ್ದೇನೆ. ಈ ಸಮಸ್ಯೆ ಪರಿಹಾರದ ನಿಯಮದ ಅಗತ್ಯ ಇದೆ. ನನಗೆ ಮೊದಲು ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದು ಗುಬ್ಬಿ ತಾಲ್ಲೋಕು ಹೆಚ್.ಎ.ಎಲ್ ಬಳಿ ಇರುವ ಸೋಪನಹಳ್ಳಿ ಅವಿಹಾಹಿತ ಗಂಡುಗಳು.

3.            ಡೈವರ್ಸ್ ಆಸ್ತಿ ಹಕ್ಕು ಬಿಲ್ – 2026

ಗಂಡು ಮತ್ತು ಹೆಣ್ಣು ಮಕ್ಕಳು ಮದುವೆ ಆಗಲೂ ಇಂದು ಭಯಬೀಳುವ ಪರಿಸ್ಥಿತಿ ಇದೆ, ತಂದೆ- ತಾಯಿ ಮತ್ತು ಅತ್ತೆ -ಮಾವ ಇಬ್ಬರ ಆಸ್ತಿಯಲ್ಲೂ, ಡೈವರ್ಸ್ ಆದವರು ಭಾಗದ ರೂಪದ ಪರಿಹಾರ ಕೇಳುವುದು ಒಂದು ಪಿಡುಗು ಆಗಿದೆ, ಮದುವೆ ಆದ ನಂತರ 15 ವರ್ಷದ ಒಳಗೆ ಡೈವರ್ಸ್ ಮಾಡಿಕೊಂಡವರಿಗೆ ತಂದೆ- ತಾಯಿ ಮತ್ತು ಅತ್ತೆ –ಮಾವ’ ಇಬ್ಬರ ಆಸ್ತಿಯಲ್ಲಿಯೂ ಭಾಗದ ಹಕ್ಕಿಲ್ಲ ಎಂಬ ನಿಯಮದ ಅಗತ್ಯ ಇದೆ.

ಅಭಿಪ್ರಾಯ ನೀಡುವವರಿಗೆ ಮುಕ್ತ ಆಹ್ವಾನ, ಯಾರಾದರೂ ಮುಂದೆ ಬಂದರೆ ಅವರ ಸಹಭಾಗಿತ್ವದಲ್ಲಿ ಶ್ರಮಿಸಲು ಆಲೋಚನೆ ಇದೆ. ಇದು ನನ್ನ ಅಕ್ಕನ ಅನುಮಾನಾಸ್ಪದ ಸಾವಿನ ಋಣ ತೀರಿಸುವ ಕಾಯಕ ಎಂಬುದು ನನ್ನ ಭಾವನೆ. 

ಇಂದೇ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಪತ್ರ ಬರೆಯಲು ಮುಂದಾಗಿದ್ದೇನೆ.

ಅಂಬಿಕಾ ನ್ಯಾಯಾಲಯದ ತೀರ್ಪು ಸಾಕ್ಷಿ ಮೇಲೆ ನಿಂತಿರುತ್ತದೆ, ಸಾಕ್ಷಿ ಹೇಳುವ ಮನಸ್ಥಿತಿ ಯಾರಿಗಿದೆ, ನೀನೂ ನಿನ್ನ ನೋವು ಹಂಚಿಕೊAಡುವವರ ಎಷ್ಟು ಜನ ಸಂಭAಧಿಕರು ಮತ್ತು ಅಕ್ಕ ಪಕ್ಕದವರು ಸಾಕ್ಷಿ ಹೇಳಲು ಮುಂದೆ ಬರುತ್ತಾರೆ ಎಂಬುದು ಒಂದು ಸವಾಲಾಗಿದೆ, ನಿನ್ನ ಮೊಮ್ಮಕ್ಕಳ ಮುಖ ನೋಡು ಎನ್ನುವ ಮಾತು ಈಗಾಗಲೇ ಶುರುವಾಗಿದೆ. ನೋಡೋಣ ಶಕ್ತಿ ದೇವತೆಗೆ ಬಿಡೋಣ ?

ಆದರೇ ನಿನ್ನ ಸಾವು ನನಗೆ, ಈ ಮೂರು ಗಂಭೀರ ಸಮಸ್ಯೆಗಳತ್ತ ಗಮನ ಹರಿಸಲು ಮುನ್ನುಡಿ ಬರೆದಿದೆ. ಅಂಬಿಕಾ ಇಷ್ಟು ಬಿಟ್ಟು ನಾನು ಏನೂ ಮಾಡಲೂ ಸಾಧ್ಯವಿಲ್ಲ ಕ್ಷಮಿಸಮ್ಮ. ನಿನ್ನ ಕುಟುಂಬದ ಆಸ್ತಿ ವಿಭಾಗದ ಮನವಿಗೆ ವಿಳಂಭ ಧೋರಣೆ ಮಾಡಿದ್ದೂ ನನ್ನ ತಪ್ಪಾಗಿದೆ. ನಿಮ್ಮೂರಿನ ಬಹುತೇಕರು ಇದೇ ಮಾತನಾಡಿದ್ದಾರೆ. ನಿನ್ನ ಗಂಡನ ಜೀವನವೂ ಮುಂದೆ ಒಂದು ಸಮಸ್ಯೆ ಆಗಬಹುದು ಎನಿಸುತ್ತಿದೆ. ನೋಡೋಣ ಹೇಗೆ ಬಗೆಹರಿಸ ಬಹುದು. ಒಂದು ಸಣ್ಣ ಪ್ರಯತ್ನ ಮಾಡುತ್ತೇನೆ.