TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿನ ನದಿ ನೀರಿನ ಬಳಕೆ ಬಗ್ಗೆ ನ್ಯಾಯಯುತ ಕಾನೂನು ರೂಪಿಸುವುದು ಅಗತ್ಯವಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ಧಾರಿಯೂ ಹೌದು. ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಬಯಲು ಸೀಮೆಗೆ ಹರಿಸುವ ಭಗಿರಥ ಯತ್ನಕ್ಕೆ ನಾನೂ ಸಹ 1997 ರಿಂದ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆ ಶ್ರಮಿಸಿದ ಪ್ರತಫಲ, ಎತ್ತಿನಹೊಳೆ ಯೋಜನೆ.
ಈಗ ಬೇಡ್ತಿ-ವರದಾ ಮತ್ತು ಆಘಿನಾಶಿನಿ- ವೇದಾವತಿ ನದಿ ಜೋಡಣೆ ಭಾರಿ ಸದ್ದು ಮಾಡುತ್ತಿದೆ. ಪಶ್ಚಿಮ ಘಟ್ಟ ಮತ್ತು ಅಲ್ಲಿ ನೀರಿನ ಯೋಜನೆಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಿದೆ. ರಾಜಕೀಯ ನಾಟಕ ಸಾಕಾಗಿದೆ. ರಾಜ್ಯಾದ್ಯಾಂತ ನದಿಗಳ ಅಕ್ಕ-ಪಕ್ಕದಲ್ಲಿರುವ ಕೃಷಿ ಆಶ್ರಗಳ ರೈತರು ಈ ಬಗ್ಗೆ ನಿಖರವಾದ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಪಶ್ಚಿಮ ಘಟ್ಟಗಳ ನೀರಿನ ಬಳಕೆ ಬಗ್ಗೆ KARNATAKA WESTERN GHATS CONSERVATION TASK FORCE ಸಮಿತಿ ಇದೂವರೆಗೂ ಅಧ್ಯಯನ ಮಾಡಿರುವ ವರದಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಆಗ್ರಹ ಮಾಡಲಾಗಿದೆ. ಈ ಸಮಿತಿ ನನಗೆ ತಿಳಿದ ಪ್ರಕಾರ ಟಿಎ-ಡಿಎ, ನೌಕರಿ ಪಡೆಯಲು ಶ್ರಮಿಸಿದಷ್ಟು ಅಧ್ಯಯನಕ್ಕೆ ಶ್ರಮಿಸಿಲ್ಲ ಎಂಬ ಕೊರಗು ಇದೆ. ಈಗಿನ ಅಧ್ಯಕ್ಷರು ಮೂಲ ಹುಡುಕುತ್ತಿದ್ದಾರಂತೆ.
ಕಾನೂನು ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು, ಕೃಷಿ ಸಚಿವರಾಗಿ ಮತ್ತು ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಕೂಡಲೇ ಈ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಲಾಗುವುದು.
