ಕೃಷಿ ಆಶ್ರಮ:ಫಾರ್ಮರ್ ಸಿಟಿ/ ಕಾರಿಡಾರ್ ಮುಖ್ಯಮಂತ್ರಿಯವರಿಂದ ಪ್ರಧಾನಿಯವರಿಗೆ ಪತ್ರ
TUMAKURU:SHAKTHIPEETA FOUNDATION
ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿದ್ದಾಗ, ಕೇಂದ್ರ ಸರ್ಕಾರದಿಂದ, ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರ ರೂಪಿಸಲು, ಉಚಿತವಾಗಿ ರಾಜ್ಯ ಸರ್ಕಾರದೊಂದಿಗೆ ಎಂ.ಓ.ಯು ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೇನೆ, ನನ್ನ ಮಗ ಕೆ.ಆರ್. ಸೋಹನ್ ಎಂ.ಟೆಕ್ ಮಾಡುವಾಗ ಇದು ಒಂದು ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿಕೊಂಡಿದ್ದು, ನನಗೆ ಖುಷಿ ವಿಚಾರ.
ನನ್ನ ಸಹೋದರ ರಾಜೇಶ್ ಎಸ್.ಪಿ ಮುಖಾಂತರ ನನ್ನ ಸಂಪರ್ಕಕಕ್ಕೆ ಬಂದಿದ್ದು ಕೃಷಿ ಆಶ್ರಮ ಸಂಘಟನೆಗಳು, ನಾನು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯ ಅಂಶಗಳನ್ನು ಅನುಷ್ಠಾನ ಗೊಳಿಸಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿಕೊಂಡು ನಿರಂತರವಾಗಿ ಶ್ರಮಿಸುತ್ತಿದ್ದೇನೆ.
ಕೃಷಿ
ಆಶ್ರಮಗಳು ನೊಂದಾಯಿತವಾಗಿಲ್ಲದ ಕಾರಣ, ಕೇಂದ್ರ ಮತ್ತು ರಾಜ್ಯಸರ್ಕಾರದೊಂದಿಗೆ ಕೃಷಿ ಆಶ್ರಮಗಳ ಬಗ್ಗೆ ವ್ಯವಹರಿಸಲು ಹರಿಕಾರರಾದ ಡಾ.ನಾಗಭೂಷಣ್, ಡಾ.ಜಗನ್ನಾಥ್‍ರವರು ಸಲಹೆ ನೀಡಿದ ನಂತರ, ಕೃಷಿ ಆಶ್ರಮಗಳನ್ನೇ ನನ್ನ ಕನಸಿನ ‘ನಂಬರ್ ಒನ್ ಕರ್ನಾಟಕ @ 2047’ ಗೆ ಮಾರ್ಗದರ್ಶನ ಕೇಂದ್ರಗಳಾಗಿ ವ್ಯವಹರಿಸಲು ಚಿಂತನೆ ನಡೆಸಲಾಯಿತು.
ಮಾನ್ಯ ಮುಖ್ಯ ಮಂತ್ರಿಯವರಾದ ಸಿದ್ಧರಾಮಯ್ಯನವರು ಮತ್ತು ಮಾನ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲು ಸೂಚಿರುವ ಹಿನ್ನಲೆಯಲ್ಲಿ, ಈಗ ಮಾನ್ಯ ಮುಖ್ಯಮಂತ್ರಿಯವರಿಂದ ಮಾನ್ಯ ಪ್ರಧಾನಿಯವರಿಗೆ ಪತ್ರ ಬರೆಯಲು ಕಡತ ಅನುಸರಣೆಯಲ್ಲಿದೆ, ಕೃಷಿ ಆಶ್ರಮಗಳ ಪರಿಕಲ್ಪನೆ, ನನ್ನ ಕನಸಿನ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ಫಾರ್ಮರ್ ಸಿಟಿ, ಫಾರ್ಮರ್ ಕಾರಿಡಾರ್, ಕೃಷಿ ಸಂಶೋಧನಾ ನಗರಗಳ ಪರಿಕಲ್ಪನೆಗಳನ್ನು ತುಮಕೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿ, ಬಹುತೇಕ ಒಂದು ಕರಡು ಪ್ರತಿ ಸಿದ್ಧಪಡಿಸಲಾಗಿದೆ.
ಇದೇ ಪ್ರತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ, ನಾಳೆ ಅಂದರೆÉ ದಿನಾಂಕ:12.01.2026 ರಂದು ಸಮಾಲೋಚನೆ ಸಭೆ ನಡೆಸಿ, ಈಗಾಗಲೇ ಎರಡು ಸಭೆ ಆಯೋಜಿಸಿರುವ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರಿಗೆ ನೀಡಲಾಗುವುದು.
ಸಲಹಾಗಾರರಾಗಿ ಶಕ್ತಿಪೀಠ ಫೌಂಡೇಷನ್ ನೇಮಿಸಿಕೊಂಡಿರುವ ‘ಚಿರಂತನ ಫೌಂಡೇಷನ್ ಮತ್ತು ಸ್ಟಾರ್ಟ್ ಅಫ್ ತುಮಕೂರು’ ಇವರಿಗೆ, ತಲಾ ರೂ 10,000 ಮುಂಗಡ ಹಣವನ್ನು ಬೆಂಗಳೂರಿನ ‘ಜ್ಞಾನಸೇತು ಫೌಂಡೇಷನ್’ ರವರು ಹಣ ಬಂದಾಗ ಹಿಂತಿರುಗಿಸುವ ಷರತ್ತಿನೊಂದಿಗೆ ನೀಡಲಿದ್ದಾರೆ.
ಡಾ.ನಾಗಭೂಷಣ್ ರವರು ಕೃಷಿ ಆಶ್ರಮದ ಪರಿಕಲ್ಪನಾ ವರದಿಯನ್ನು ಮತ್ತು ಡಾ.ಜಗನ್ನಾಥ್ ರವರು 1120 ಕಳೆ-ಬೆಳೆಗಳ ಪಟ್ಟಿಯನ್ನು ನೀಡಲಿದ್ದಾರೆ. ದಿನಾಂಕ ನಿಗಧಿ ಪಡಿಸಲಾಗುವುದು.
ಮುಖ್ಯ ಮಂತ್ರಿಯವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದ ನಂತರ, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಸೇರಿದಂತೆ, ರಾಜ್ಯದ ಎಲ್ಲಾ ಪಕ್ಷಗಳ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯಸಭಾ ಸದಸ್ಯರ ಸಂಪರ್ಕಿಸಿ ಪ್ರಧಾನಿಯವರಿಗೆ ಪತ್ರ ಬರೆಸಲು ಶ್ರಮಿಸಲಾಗುವುದು.
ಈಗಾಗಾಲೇ ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿಯವರು, ವಿ.ಸೋಮಣ್ಣನವರು, ಶೋಭಾಕರಂದ್ಲಾಜೆಯವರು ಸೂಕ್ತ ಪ್ರಸ್ತಾವನೆಯೊಂದಿಗೆ ಬರಲು ನನಗೆ ಸಲಹೆ ನೀಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಲ್ಲಿರುವ, ಕರ್ನಾಟಕ ಅಧಿಕಾರಿಗಳ ಒಂದು ತಂಡ ಕಂಕಣಬದ್ಧವಾಗಿ ಸಹಕಾರ ನೀಡಲು ಸಿದ್ಧವಾಗಿದೆ ಎಂಬ ಅಂಶವನ್ನು ಕೃಷಿ ಆಶ್ರಮಗಳ ಗಮನಕ್ಕೆ ತರಬಯಸುತ್ತೇನೆ.
ಸಲಹೆಗಳಿಗೆ ಮುಕ್ತ ಆಹ್ವಾನವಿದೆ.

