16th January 2026
Share

TUMAKURU:SHAKTHIPEETA FOUNDATION
ಬೇಡ್ತಿ-ವರದಾ ನದಿ ತಿರುವು ಯೋಜನೆಗೆ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಶ್ರಮವೂ ಇದೆ. ಕಾರಣ ಬೇಡ್ತಿ-ವರದಾ ನದಿ ತಿರುವು ನೀರನ್ನು ತುಂಗಭಧ್ರಾ ಡ್ಯಾಂಗೆ ಬಿಡಲು ಯೋಜನೆ ರೂಪಿಸಲಾಗುತ್ತಿತ್ತು.
ತುಂಗಭಧ್ರಾ ಡ್ಯಾಂ ಈಗ 35 ಟಿ.ಎಂ.ಸಿಯಷ್ಟು ಹೂಳು ತುಂಬಿದೆ. ಕೃಷ್ಣಾ ನದಿ ಪಾತ್ರದ ನಮ್ಮ ಅಲೋಕೇಷನ್ 35 ಟಿ.ಎಂ.ಸಿ ನೀರು ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಈ ಪಾಪಕ್ಕೆ ಯಾರು ಹೊಣೆ ? ಇಲ್ಲಿವರೆಗೂ ಕರ್ನಾಟಕ ರಾಜ್ಯವನ್ನು ಆಳಿದ ಎಲ್ಲಾ ಪಕ್ಷಗಳು ತಮ್ಮ ನಿಲುವು ವ್ಯಕ್ತ ಪಡಿಸಬೇಕು.
ಆಗಿನ ಕೊಪ್ಪಳ ಲೋಕಸಭಾ ಸದಸ್ಯರಾಗಿದ್ದ ಶ್ರೀ ಕರಡಿ ಸಂಗಣ್ಣವರು ಅದೇ ಯೋಜನೆಗೆ ಬೆಂಬಲಿಸಿ ಪತ್ರ ಬರೆದಿದ್ದರು. ನನಗೆ ಈ ಮಾಹಿತಿ ತಿಳಿದ ನಂತರ ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯರಾಗಿದ್ದರು, ನಾನೂ ಸಹ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿದ್ದ ಕಾರಣ, ಬಲವಾಗಿ ವಿರೋಧ ವ್ಯಕ್ತಪಡಿಸಿ, ಹಿರೇವಡ್ಡಹಟ್ಟಿ ಡ್ಯಾಂ ನಿರ್ಮಾಣದ ಯೋಜನೆಗೆ ಬೆಂಬಲವ್ಯಕ್ತ ಪಡಿಸಿದ್ದು ಇತಿಹಾಸ.
ನಮ್ಮ ನಿಲುವಿಗೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಸ್ಪಂಧಿಸಿದ್ದು ಹೆಮ್ಮೆಯ ಸಂಗತಿ. ಈಗ ಮಾಜಿ ಮುಖ್ಯಮಂತ್ರಿ, ನೀರಾವರಿ ತಜ್ಞ ಶ್ರೀ ಬಸವರಾಜ್ ಬೊಮ್ಮಾಯಿ ನಿಲುವು ನಿಜಕ್ಕೂ ಒಳ್ಳೆಯ ಬೆಳವಣಿಗೆ ಇದು ಅಗತ್ಯವಿತ್ತು, ತೆರೆಮರೆ ಆಟ ಸರಿಯಲ್ಲ. ಪಕ್ಷ ಬೇದ ಮರೆತು ಗಟ್ಟಿ ನಿಲುವು ಅಗತ್ಯವಾಗಿದೆ.
ಸ್ವರ್ಣವಲ್ಲಿ ಶ್ರೀ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ನದಿ ತಿರುವು ಯೋಜನೆಗೆ ವಿರೋಧ ಮಾಡುತ್ತಿದ್ದಾರೋ ಅಥವಾ ಪಶ್ಚಿಮ ಘಟ್ಟಗಳ ನೀರಿನ ಬಳಕೆಗೆ ವಿರೋಧ ಮಾಡುತ್ತಾರೋ ನನಗೆ ಮಾಹಿತಿ ಇಲ್ಲ. ಅವರೊಂದಿಗೆ ಸಮಾಲೋಚನೆ ಮಾಡಿದ ನಂತರ ಮಾತನಾಡುವುದು ಸೂಕ್ತವಾಗಿದೆ.
ಪಶ್ಚಿಮ ಘಟ್ಟದಲ್ಲಿನ ನೀರನ್ನು ಬಯಲು ಪ್ರದೇಶಕ್ಕೆ ತರಲೇಬೇಕು, ಆದರೇ ಎಷ್ಟು ನೀರನ್ನು, ಎಲ್ಲಿಗೆ, ಹೇಗೆ, ಏಕೆ ತರಬೇಕು ಎಂಬ ಬಗ್ಗೆ ಒಂದು ಕಾನೂನು ರೂಪಿಸಲೇ ಬೇಕು, ಈ ಬಗ್ಗೆ ಕಾನೂನು ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರ ಜೊತೆ ಈಗಾಗಲೇ ದೆಹಲಿಯಲ್ಲಿ ಚರ್ಚಿಸಲಾಗಿದೆ.
1997 ರಿಂದ ರಾಜ್ಯದ ಒಂದೊAದು ಹನಿ ನೀರಿನ ಬಳಕೆ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದೇನೆ. ನೀರಾವರಿ ತಜ್ಞ ಜಿ..ಎಸ್.ಪರಮಶಿವಯ್ಯ ನವರ 0.1% ರಷ್ಟು ಮಾಹಿತಿ ನನಗೂ ಇದೆ. ಈ ರಾಜ್ಯದಲ್ಲಿ ಇರುವ ಎಲ್ಲಾ ತಜ್ಞರುಗಳ ನಿಲುವನ್ನು ನಾನೂ ಅರಿತಿದ್ದೇನೆ, ಈಗ ನಮ್ಮ ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸಲು ಒಂದು ಸುವರ್ಣ ಅವಕಾಶ. ಬಯಲು ಸೀಮೆಯ ಜನರಿಗೂ ಹಲವಾರು ಶ್ರೀಗಳ ನಾಯಕತ್ವ ಅಗತ್ಯವಿದೆ.
ಮತ್ತೆ ನಮ್ಮ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ , ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಲೇ ಬೇಕಿದೆ. ಯಾವ ಮಟ್ಟಕ್ಕೇ ಹೋದರೂ ಹೋಗಲೇ ಬೇಕು. ಪರ-ವಿರೋಧ ಚರ್ಚೆಗಳಿಗೆೆÆಂದು ಡಿಜಿಟಲ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಬೇಕಿದೆ.