16th January 2026
Share

 

TUMAKURU:SHAKTHI PEETA FOUNDATION

ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಕರ್ನಾಟಕ ರಾಜ್ಯ ಕೃಷಿ ಸಚಿವರಾದ ಶ್ರೀ ಚಲುವನಾರಾಯಣಸ್ವಾಮಿರವರು, ಮುಖ್ಯಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರ ಮತ್ತು ಕೃಷಿ ಇಲಾಖೆಯ ಅಪರಮುಖ್ಯಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ರವರ ಸೂಚನೆ ಮೇರೆಗೆ, ರಾಜ್ಯದ ರೈತರ ಆದಾಯ ವೃದ್ಧಿಸುವ, ಫಾರ್ಮರ್ ಕಾರಿಡಾರ್, ಫಾರ್ಮರ್ ಸಿಟಿ, ಕೃಷಿ ಸಂಶೋಧನಾ ನಗರ, ಕೃಷಿ ಆಶ್ರಮ, ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್.’ ಇನ್ನೂ ಮುಂತಾದ ಹಲವಾರು ವಿಶೇಷ ಯೋಜನೆ ರೂಪಿಸಲು ವಿವಿಧ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಲು ಹರ್ಷವಾಗುತ್ತಿದೆ.

  1. ದಿನಾಂಕ:20.01.2026 ರೊಳಗೆ, ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಲಾ 5 ರಂತೆ ರಚಿಸುತ್ತಿರುವ 1120 ಕೃಷಿ ಆಶ್ರಮಗಳು, ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು ಇಲ್ಲಿ ತಮ್ಮ ಕನಸಿನ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು.
  2. ದಿನಾಂಕ:20.01.2026 ರೊಳಗೆ, ಡಾ.ನಾಗಭೂಷಣ್ ರವರಿಂದ ಕೃಷಿ ಆಶ್ರಮ ಪರಿಕಲ್ಪನಾ ವರದಿ ಸಂಗ್ರಹ.
  3. ದಿನಾAಕ:20.01.2026 ರೊಳಗೆ, ಡಾ.ಜಗನ್ನಾಥ್ ರವರಿಂದ 1120 ಕಳೆ-ಬೆಳೆ ಪಟ್ಟಿ ಸಂಗ್ರಹ.
  4. ದಿನಾAಕ:21.01.2026 ರಂದು ಬೆಂಗಳೂರಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರು ಆಗಮಿಸಿದಾಗ ಅವರಿಗೆ ಕೃಷಿ ಆಶ್ರಮಗಳ ನಿಯೋಗ ಮನವಿ ಸಲ್ಲಿಸಲಾಗುವುದು.
  5. ತುಮಕೂರಿನ ಚಿರಂತನಾ ಫೌಂಡೇಷನ್ ಸಿದ್ಧಪಡಿಸುತ್ತಿರುವ, ‘ಸೆಂಟರ್ ಆಫ್ ಎಕ್ಸ್ಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಪೋರ್ಟಲ್, ದಿನಾಂಕ:21.01.2026 ರೊಳಗೆ ಸಿದ್ಧವಾದರೆ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರು ಮತ್ತು ಕರ್ನಾಟಕ ರಾಜ್ಯ ಕೃಷಿ ಸಚಿವರಾದ ಶ್ರೀ ಚಲುವನಾರಾಯಣಸ್ವಾಮಿರವರಿಂದ ಲೋಕಾರ್ಪಣೆ ಮಾಡಿಸಲಾಗುವುದು.
  6. ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರ ಮಾರ್ಗದರ್ಶನದಲ್ಲಿ ಆಯವ್ಯಯದಲ್ಲಿ ಸೇರ್ಪಡೆ ಮಾಡಲು, ಮಾನ್ಯ ಮುಖ್ಯಮಂತ್ರಿಯವರಿAದ ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಸಲು, ನಿರಂತರವಾಗಿ ಶಕ್ತಿಪೀಠ ಫೌಂಡೇಷನ್ ಕಡತದ ಅನುಸರಣೆ ಮಾಡುತ್ತಿದೆ.
  7. ಕೇಂದ್ರ ಸರ್ಕಾರದಿಂದ ತಾತ್ವಿಕ’ ಒಪ್ಪಿಗೆ ದೊರೆತ ನಂತರ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ರಾಜ್ಯದ ಎಲ್ಲಾ 28 ಲೋಕಸಭಾ ಮತ್ತು 14 ರಾಜ್ಯಸಭಾ ಸದಸ್ಯರಿಂದ ಪ್ರಧಾನಿಯವರಿಗೆ ಪತ್ರ ಬರೆಸಿ ಯೋಜನೆಯ ಮಂಜೂರಾತಿಗೆ ನಿರಂತರವಾಗಿ ಶಕ್ತಿಪೀಠ ಫೌಂಡೇಷನ್ ಶ್ರಮಿಸಲಿದೆ.