16th January 2026
Share

 

TUMAKURU:SHAKTHIPEETA FOUNDATION

ಸಭೆಯ ದಿನಾಂಕ, ಸಮಯ  ಮತ್ತು ಸ್ಥಳಗಳ ಮಾಹಿತಿಯನ್ನು ಡಾ.ನಾಗಭೂಷಣ್ ರವರು ತಿಳಿಸಲಿದ್ದಾರೆ.  ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಲು ಬಹಿರಂಗ ಮನವಿ.

ಮಾನ್ಯ ಮುಖ್ಯ ಮಂತ್ರಿಯವರು, ಮಾನ್ಯ ಕೃಷಿ ಸಚಿವರು ಮತ್ತು ಮಾನ್ಯ ಮುಖ್ಯ ಕಾರ್ಯದರ್ಶಿಯವರ  ಸೂಚನೆಯ ಮೇರೆಗೆ, ಕರ್ನಾಟಕ ರಾಜ್ಯ ಕೃಷಿ ಆಯೋಗದ ಅಧ್ಯಕ್ಷರಾದ  ಶ್ರೀ ಅಶೋಕ್ ದಳವಾಯಿರವರು, ಮೂರು ವಿಷಯಗಳ ಬಗ್ಗೆ ಸ್ಪಷ್ಠ ನಿರ್ಧಾರಕ್ಕೆ ಬಂದಿದ್ದಾರೆ. ದಿನಾಂಕ:12.01.2026 ರಂದು ಅವರ ಕಚೇರಿಯಲ್ಲಿ ಭೇಟಿಯಾಗಿ, ಮುಕ್ತವಾಗಿ ಸಮಾಲೋಚನೆ ನಡೆಸಲಾಯಿತು.

  1. ಕೃಷಿ ಆಶ್ರಮಗಳ ಮಾಹಿತಿಗಳ ಸಂಗ್ರಹ
  2. ಮುಂದಿನ ಆಯವ್ಯಯದಲ್ಲಿ ಸೇರ್ಪಡೆ
  3. ಮಾನ್ಯ ಮುಖ್ಯಮಂತ್ರಿಯವರಿಂದ – ಮಾನ್ಯ ಪ್ರಧಾನ ಮಂತ್ರಿಯವರಿಗೆ ವಿಶೇಷ ಯೋಜನೆ ಜಾರಿಗೆ ಪತ್ರ.

ಇದೂವರೆಗೂ ಆಗಿರುವ ಸಮಾಲೋಚನಾ ಸಭೆಗಳ ಚರ್ಚೆಯಂತೆ, ಈ ಕೆಳಕಂಡ 9 ಅಂಶಗಳ ಜಾರಿಗೆ, ಶ್ರಮಿಸಲು ಕೃಷಿ ಆಶ್ರಮಗಳು ಸಜ್ಜಾಗಿವೆ, ಈ ವಿಚಾರಗಳು ಸಾಮಾನ್ಯ ಜನರಿಂದ, ಮಾನ್ಯ ಚುನಾಯಿತ ಜನಪ್ರತಿನಿಧಿಗಳವರೆಗೂ ಅರ್ಥವಾಗುವಂತೆ ಪರಿಕಲ್ಪನಾ ವರದಿ’ ಯನ್ನು ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಪ್ರಧಾನ ಮಂತ್ರಿಯವರ ಮನವಿ ರೂಪದಲ್ಲಿ ಪ್ರಕಟಿಸುವುದು ಅಗತ್ಯವಾಗಿದೆ.

  1. ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್
  2. 1008 ಕೃಷಿ ಆಶ್ರಮ/ ಕೃಷಿ ಪ್ರವಾಸೋಧ್ಯಮ
  3. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 5 ರಂತೆ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್
  4. ಕೃಷಿ, ತೋಟಗಾರಿಕಾ ಮತ್ತು ಪಶುವೈದ್ಯಕೀಯ ವಿಶ್ವ ವಿದ್ಯಾನಿಲಯಗಳ ಸಂಪರ್ಕ ಫಾರ್ಮರ್ ಕಾರಿಡಾರ್
  5. ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯಡಿಯಲ್ಲಿ, ಆಯ್ಕೆಯಾಗಿರುವ ಕರ್ನಾಟಕ ರಾಜ್ಯದ 6 ಜಿಲ್ಲೆಗಳ ಸಂಪರ್ಕ ಫಾರ್ಮರ್ ಕಾರಿಡಾರ್
  6. ತುಮಕೂರು ಫಾರ್ಮರ್ ಕಾರಿಡಾರ್
  7. ತುಮಕೂರು ಫಾರ್ಮರ್ ಸಿಟಿ
  8. ಶಕ್ತಿಪೀಠ ಫಾರ್ಮರ್ ಕಾರಿಡಾರ್/ರೈತರ ಸಹಭಾಗಿತ್ವದ ಪಿಪಿಪಿ ಯೋಜನೆ.
  9. ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಯದಡಿಯಲ್ಲಿ ನದಿ ನೀರಿನ ಬಳಕೆಗೆ ಕಾನೂನು ರೂಪಿಸುವುದು.

ಇನ್ನೂ ಯಾವುದಾದರೂ ಅಂಶಗಳ ಅಗತ್ಯವಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಲು ಮನವಿ ಮಾಡಲಾಗಿದೆ.