TUMAKURU:SHAKTHI PEETA FOUNDATION
ದಿನಾಂಕ:21.01.2026 ರಂದು ಬೆಂಗಳೂರಿನಲ್ಲಿ ನಡೆಯುವ NATIONAL CONCLAVE ON SHG-LED NATURAL FARMING ಕಾರ್ಯಕ್ರಮದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ – ಡಿಜಿಟಲ್ ಪ್ಲಾಟ್ ಫಾರಂ’ ಗೆ ಚಾಲನೆ ನೀಡಲು ಭರದ ಸಿದ್ಧತೆ ನಡೆಯುತ್ತಿದೆ. ಪರಿಕಲ್ಪನಾ ವರದಿ ಮತ್ತು ಡಿಜಿಟಲ್ ಪ್ಲಾಟ್ ಫಾರಂ ಸಿದ್ಧಪಡಿಸಲು ಹಲವಾರು ಜನ ದುಡಿಯುತ್ತಿದ್ದಾರೆ.
ಹಂತ ಹಂತವಾಗಿ ಈ ಕೆಳಕಂಡ ಮಾಹಿತಿಗಳು ಡಿಜಿಟಲ್ ಪ್ಲಾಟ್ ಫಾರಂ ಗೆ ಸೇರ್ಪಡೆಯಾಗಲಿವೆ.
1 ನೇ ಹಂತ
- ರೈತರು ಕುಳಿತಲ್ಲೇ ಎಲ್ಲಾ ಮಾಹಿತಿ ಅಫ್ ಲೋಡ್ ಮಾಡಲು ಆಪ್
- ಕೃಷಿ ಆಶ್ರಮದ ಪ್ರತಿಯೊಬ್ಬ ರೈತರಿಗೂ ವೈಯಕ್ತಿಕ ಡ್ಯಾಷ್ ಬೋರ್ಡ್
- ಕೃಷಿ ಆಶ್ರಮದ ಪ್ರತಿಯೊಬ್ಬ ರೈತರಿಗೂ ವೈಯಕ್ತಿಕ ಡಿಜಿಟಲ್ ವಿಸಿಟಿಂಗ್ ಕಾರ್ಡ್
2 ನೇ ಹಂತ
- ಪ್ರತಿಯೊಂದು ಕೃಷಿ ಆಶ್ರಮವಾರು ಚರ್ಚೆವೇದಿಕೆ.
- ಪ್ರತಿಯೊಂದು ಕಳೆ-ಬೆಳೆ ವಾರು ಚರ್ಚೆವೇದಿಕೆ.
- ರೈತರಿಗೆ ಸಂಭಂಧಿಸಿದ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಎಲ್ಲಾ ಯೋಜನೆಗಳ ಮಾಹಿತಿ.
3 ನೇ ಹಂತ
- ನಕ್ಷೆ ಇತಿಹಾಸ ಸಹಿತ ವಿವಿಧ ಜಿಐಎಸ್ ಲೇಯರ್
4.ನೇ ಹಂತ
- ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿನ ಕೃಷಿ ಆಶ್ರಮಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ವಿಶ್ವಧ್ಯಾಂತ ನೇರಾ ನೇರಾ ವ್ಯವಹಾರ, ಡಿಜಿಟಲ್ ರಫ್ತು ಭವನ.
- ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿನ ಕೃಷಿ ಆಶ್ರಮಗಳ ಜಮೀನು ಮಾರಾಟ/ಗುತ್ತಿಗೆ ಮಾಹಿತಿ, ಮಧ್ಯವರ್ತಿಗಳಿಲ್ಲದೆ ವಿಶ್ವಧ್ಯಾಂತ ಎನ್.ಆರ್.ಐ ಗಳಿಗೆ ನೇರಾ ನೇರಾ ವ್ಯವಹಾರ.
- ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿನ ಕೃಷಿ ಆಶ್ರಮಗಳ ಪ್ರವಾಸಿಗರು ಉಳಿದುಕೊಳ್ಳುವ ಮತ್ತು ಸುತ್ತಮುತ್ತ ನೋಡುವ ಪ್ರದೇಶಗಳ ಇತಿಹಾಸ ಸಹಿತ ವಿವಿಧ ಜಿಐಎಸ್ ಲೇಯರ್. ದೇಶ-ವಿದೇಶಗಳಲ್ಲಿ ಪ್ರಚಾರ.
- ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿನ ಕೃಷಿ ಆಶ್ರಮಗಳ ಸಂಶೋಧನೆಗೆ ಸಕ್ಷಮ ಪ್ರಾಧಿಕಾರಿಗಳಿಂದ ಸರ್ಟಿಫೀಕೇಷನ್.
- ಕೃಷಿ ಆಶ್ರಮಗಳ ಜ್ಞಾನಿಗಳ/ ಸಲಹಗಾರರ ಸೇವೆ ಪ್ಯಾನಲ್.
