TUMAKURU:SHAKTHIPEETA FOUNDATION
ಕಳೆ-ಬೆಳೆಗೆ, ರೈತರಿಗೆ ಸಂಭಂದಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆ, ಬೋರ್ಡ್, ಕಾರ್ಪೋರೇಷನ್, ನಿಗಮಗಳ ಒಂದೊಂದು ಕಚೇರಿ ಇಲ್ಲಿ ಇರಲಿದೆ. ಆಯಾ ಇಲಾಖೆಗಳ ಯೋಜನೆಗಳನ್ನು ಪ್ರಾತ್ಯಾಕ್ಷಿಕವಾಗಿ ರೈತರ ಜಮೀನಿನನಲ್ಲಿ ನಿರ್ಮಾಣ ಮಾಡುವ ಕೆಲಸವೂ ಇಲ್ಲಿ ಆಗಬೇಕಿದೆ.
ಆಸಕ್ತರು ಯಾವ ಯಾವ ಇಲಾಖೆಯ ಘಟಕಗಳು ಇಲ್ಲಿ ಇರಬೇಕು ಎಂಬ ಬಗ್ಗೆ ಲಿಖಿತವಾದ ಮಾಹಿತಿ ಹಂಚಿಕೊಳ್ಳಲು ಬಹಿರಂಗ ಮನವಿ. ‘ಜ್ಞಾನ ಯಾರಪ್ಪನ ಸ್ವತ್ತಲ್ಲ’ ಯಾರೂ ಬೇಕಾದರೂ, ಏನೂ ಬೇಕಾದರೂ ಅಧ್ಯಯನ ಮಾಡಬಹುದು, ವರದಿ ನೀಡಬಹುದು.
ಫಾರ್ಮರ್ ಕಾರಿಡಾರ್ ಮತ್ತು ಫಾರ್ಮರ್ ಸಿಟಿ ಪ್ರಪಂಚದ ಮುಂದುವರೆದ ದೇಶಗಳಲ್ಲಿನ ಯೋಜನೆಗಳ ಅಧ್ಯಯನ ಆರಂಭವಾಗಿದೆ. ಹಲವಾರು ಜನ ಒಂದೊಂದೇ ಮಾಹಿತಿಗಳನ್ನು ಹುಡುಕಿ ಹುಡುಕಿ, ಕಳುಹಿಸುತ್ತಿದ್ದಾರೆ. ನಿಜಕ್ಕೂ ಅಂಥಹವರಿಗೆ ಅಭಿನಂದನೆಗಳು.
ನನಗೆ ಯಾರ್ಯಾರು ಯಾವ ವಿಷಯಗಳ ಬಗ್ಗೆ ಜ್ಞಾನದಾನ ಮಾಡಿದ್ದಾರೋ, ಅಂಥಹವರ ವಿಭಾಗವೂ ನಮ್ಮ ‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಪೋರ್ಟಲ್‍ನಲ್ಲಿ ಇರಲಿದೆ. ಜ್ಞಾನದಾನಿಗಳ ವಿವರವೂ ಇರಬೇಕಲ್ಲವೇ ?
