11th February 2026
Share

TUMAKURU:SHAKTHIPEETA FOUNDATION

ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಅನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೃಷಿ ಚಟುವಟಿಕೆಗಳಿಗೆ ಶ್ರಮಿಸುತ್ತಿರುವ ವಿವಿಧ ಚಾರಿಟಬಲ್ ಸಂಸ್ಥೆಗಳು, ಕೃಷಿಯಾದಾರಿತ ಸ್ಟಾರ್ಟ್ ಅಫ್, ಪ್ರಗತಿಪರ ರೈತರು ಮತ್ತು ಹಲವಾರು ಕೃಷಿ ಆಶ್ರಮಗಳ ಸಂಯುಕ್ತಾಶ್ರಯದಲ್ಲಿ ವಿಶಿಷ್ಠವಾದ ಪಿಪಿಪಿ ಮಾಡೆಲ್’ ನಲ್ಲಿ ತೆರೆಯಲು ಆಲೋಚನೆ  ನಡೆಸಲಾಗಿದೆ.

ಕರ್ನಾಟಕ ಸರ್ಕಾರದಲ್ಲಿ ‘ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗ ಮತ್ತು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ನೋಡೆಲ್ ಇಲಾಖೆಗಳಾಗಬೇಕು. ಕೃಷಿಗೆ  ಸಂಭಂದಿಸಿದ ಎಲ್ಲಾ ಇಲಾಖೆಗಳು ಜೊತೆಯಲ್ಲಿರ ಬೇಕು. ಕೃಷಿ ಸಂಶೋದನೆಗಳಿಗೆ ಒತ್ತು ನೀಡುವುದು ಅಗತ್ಯವಾಗಿದೆ. ಇದೂವರೆಗಿನ ಕೃಷಿಗೆ ಸಂಭಂದಿಸಿದ ಎಲ್ಲಾ ಅಧ್ಯಯನ ವರದಿಗಳು, ಜ್ಞಾನಿಗಳ ಮಾಹಿತಿಗಳನ್ನು ಸಂಗ್ರಹ ಮಾಡುವ ಕೆಲಸ ಆಗಬೇಕಿದೆ.

ಸರ್ಕಾರಗಳಲ್ಲಿ ಒಂದು ಗುಂಡು ಪಿನ್ ಕೊಂಡು ಕೊಳ್ಳಬೇಕಾದರೂ ಹಲವಾರು ನಿಯಮಗಳಿರುತ್ತವೆ. ಈ ಹಿನ್ನಲೆಯಲ್ಲಿ ಆಸಕ್ತರು ಸೇರಿ, ಆರಂಭ ಮಾಡಲು ಯೋಚಿಸಲಾಗಿದೆ. ಜನವರಿ ತಿಂಗಳಿನಲ್ಲಿ ಸರ್ಕಾರಗಳ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ, ಒಂದು ನಿರ್ಧಾರಕ್ಕೆ ಬರಲಾಗುವುದು. ನಂತರ ಸರ್ಕಾರಗಳ ನಿರ್ಧಾರಗಳ ಮೇಲೆ ಯೋಚಿಸಲಾಗುವುದು.

ಸರ್ಕಾರಗಳಿಗೆ, ಪ್ರಸ್ತಾವನೆ ಸಿದ್ಧಪಡಿಸಲು ಒಂದು ‘ಉಪ ಸಮಿತಿ’ಯನ್ನು ರಚಿಸಲಾಗುವುದು, ಆಸಕ್ತರು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಸಲಹೆ ನೀಡಲು ಬಹಿರಂಗ ಮನವಿ.