TUMAKURU:SHAKTHIPEETA FOUNDATION
ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಮಾನ್ಯ ಉಪಮುಖ್ಯಂಮತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್.ಅಶೋಕ್‌ರವರು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ತಾವೂ ಸೂಚಿಸುವ ಇತರೆ ಪ್ರಮುಖರಿಂದ ‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ – ಡಿಜಿಟಲ್ ಪ್ಲಾಟ್ ಫಾರಂ’ ಗೆ ಚಾಲನೆ ನೀಡಲು ಯೋಚಿಸಲಾಗಿದೆ.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರು ಪ್ರಮುಖ ಪಾತ್ರ ವಹಿಸಲು ಮನವಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
ಆಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಮತ್ತು ನೌಕರರು ಕೈಜೋಡಿಸಬಹುದು.
ಡಾ.ನಾಗಭೂಷಣ್ – ಸ್ವಂತ ಖರ್ಚಿನಲ್ಲಿ ರಾಜ್ಯದ್ಯಾಂತ 1008 ಕೃಷಿ ಆಶ್ರಮಗಳ ಸಂಘಟನೆ ಮಾಡುತ್ತಿದ್ದಾರೆ.
ಡಾ. ಜಗನ್ನಾಥ್ – ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳ್ಲಿ ತಲಾ 5 ರಂತೆ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಹೊಣೆಗಾರಿಕೆಯೊಂದಿಗೆ, ಸ್ವಂತ ಖರ್ಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಲ್ಲದೇ ಕೆಳಕಂಡವರು ವಿವಿಧ ಹೊಣೆಗಾರಿಕೆ ಹೊತ್ತು ಕಾರ್ಯನಿರ್ವಹಿಸುತ್ತಿದ್ದಾರೆ.
- ಟಿ.ಆರ್.ರಘೋತ್ತಮರಾವ್ – ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ಸಂಗ್ರಹ.
- ಸತ್ಯಾನ0ದ ಎಸ್ ರಾಜ್ ಮತ್ತು ತಂಡ – ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ – ಡಿಜಿಟಲ್ ಪ್ಲಾಟ್ ಫಾರಂ ಸಿಧ್ಧಪಡಿಸುವಿಕೆ ಮತ್ತು ಜಿ.ಐ.ಎಸ್ ಲೇಯರ್ ನಕ್ಷೆ. (ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಯೋಜನೆ ಮಂಜೂರು ಮಾಡಿಸಿದಾಗ ಹಣ ಪಡೆಯುವ ಅಥವಾ ಸರ್ಕಾರದಲ್ಲಿ ನಿಗಧಿ ಪಡಿಸಿದ ನಿರ್ಧಿಷ್ಠ ಸೇವಾಶುಲ್ಕ ಪಡೆಯುವ ಷರತ್ತಿನೊಂದಿಗೆ ಜ್ಞಾನದಾನ ಮತ್ತು ಸೇವೆ ಆರಂಭಿಸಿದ್ಧಾರೆ)
- ಸುಹೃತ್ ಉಜ್ಜನಿ – ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಆದಾಯ ಬಂದಾಗ ಸೇವಾಶುಲ್ಕ ಪಡೆಯುವ ಷರತ್ತಿನೊಂದಿಗೆ ಪ್ರಸ್ತಾವನೆ ಸಿದ್ಧಪಡಿಸುವುದು.
- ಎಸ್.ಪಿ.ರಾಜೇಶ್ ಮತ್ತು ತಂಡ –ಜ್ಞಾನಸೇತು ಫೌಂಡೇಷನ್ ಆದಾಯ ಬಂದಾಗ ಹಿಂದಿರುಗಿಸುವ ಷರತ್ತಿನೊಂದಿಗೆ ಅಗತ್ಯವಿದ್ದಲ್ಲಿ ಆರಂಭಿಕ ವೆಚ್ಚ ಪಾವತಿಸುವುದರೊಂದಿಗೆ ಜ್ಞಾನದಾನ ಮಾಡುತ್ತಿದ್ದಾರೆ.
ನಮ್ಮ ತಂಡದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು 9886774477 ಕರೆ ಮಾಡಿ. ತಕ್ಷಣ ಸೇವಾಶುಲ್ಕ ಹಣ ಬೇಕು ಎನ್ನುವವರೂ ಮತ್ತು ಯಾವುದೇ ಹೊಣೆಗಾರಿಕೆ ಪಡೆಯದೇ ಇರುವವರು ದಯವಿಟ್ಟು ಕರೆ ಮಾಡಬೇಡಿ
ನನಗೆ ಕಳೆದ 25 ವರ್ಷದ ಸಂಪರ್ಕ ಇರುವ ತಂಡ ಇದು, ಸುಹೃತ್ ಒಬ್ಬರು ಹೊಸಬರು, ಅವರು ಎಷ್ಟು ದಿವಸ ನಮ್ಮ ತಂಡದಲ್ಲಿ ಇರಲಿದ್ದಾರೆ ಕಾದು ನೋಡಬೇಕಿದೆ.
ಎಲ್ಲವೂ ಪಾರದರ್ಶಕವಾಗಿರ ಬೇಕು, ಸರ್ಕಾರಗಳ ನಿಯಮ ಪಾಲಿಸಬೇಕಿದೆ.
