TUMAKURU:SHAKTHIPEETA FOUNDATION
ಕೇಂದ್ರ ವಿಮಾನಯಾನ ಸಚಿವಾಲಯ ಮತ್ತು ಏರ್ ಪೋರ್ಟ್ ಆಥಾರಿಟಿ ಇಂಡಿಯಾ, ಕರ್ನಾಟಕ ರಾಜ್ಯ ಮತ್ತು ತಮಿಳುನಾಡು ಸರ್ಕಾರಗಳು, ಅಂತರರಾಷ್ಟಿಯ ವಿಮಾನ ನಿಲ್ಧಾಣ ಸ್ಥಾಪಿಸಲು ಸಲ್ಲಿಸಿದ್ಧ ಪ್ರಸ್ತಾವನೆಗಳಿಗೆ ಸರಿಯಾಗಿ ಬುದ್ಧಿ ಹೇಳಿದೆ ಎಂದರೆ ತಪ್ಪಾಗಲಾರದು.
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡುವ ಆಲೋಚನೆ ಮತ್ತು ಕೃಷಿ ಸಚಿವರಾದ ಶ್ರೀ ಚಲುವರಾಯಸ್ವಾಮಿರವರು ಫಾರ್ಮರ್ ಕಾರಿಡಾರ್ ಸ್ಥಾಪಿಸುವ ಚಿಂತನೆ ನಡೆಸಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಎರಡು ಯೋಜನೆಗಳು ಮಹತ್ತರವಾಗಿವೆ.
ಕೇಂದ್ರ ಸಚಿವರಾದ ಶ್ರೀ ಆಶ್ವಿನಿ ವೈಷ್ಣವ್ ಅವರು, ರಾಜ್ಯ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರಿಗೆ ನೇರವಾಗಿ ತುಮಕೂರಿನಲ್ಲಿ ಸಿಲಿಕಾನ್ ಸಿಟಿ ಆಫ್ ಇಂಡಿಯಾ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದ್ದು ಇತಿಹಾಸ. ನಮ್ಮ ರಾಜ್ಯ ಸರ್ಕಾರ ದೂರದೃಷ್ಠಿಯಿಂದ ಯೋಚನೆ ಮಾಡಲಿ, ಬೃಹತ್ ಯೋಜನೆಗಳು ತುಮಕೂರಿನಿಂದ ಆರಂಭಿಸಿ ಬಿದರ್ ಗಡಿವರೆಗೂ ವಿಸ್ತರಣೆಯಾಗಲಿ.
ಹೌದು ಬೆಂಗಳೂರು ವಿಮಾನ ನಿಲ್ಧಾಣದ ಷರತ್ತಿನ ಅವಧಿ ಮುಗಿಯುವವರೆಗೂ ಅಡೆತಡೆ ಬರಬಹುದು. ಅಂತರರಾಷ್ಟಿಯ ವಿಮಾನ ನಿಲ್ಧಾಣ ನಿರ್ಮಾಣವಾಗಲು ಕನಿಷ್ಠ 10 ವರ್ಷಗಳು ಬೇಕಾಗುತ್ತದೆ. ತುಮಕೂರು ಲೋಕಸಭಾ ಕೇತ್ರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ, ಈಗಾಗಲೇ ಗುರುತಿಸಿರುವ ಎರಡನೇ ಅಂತರರಾಷ್ಟಿಯ ವಿಮಾನ ನಿಲ್ಧಾಣದ ಜಮೀನಿನ ಭೂಸ್ವಾಧೀನ ಪ್ರಕ್ರೀಯೇ ಪೂರ್ಣಗೊಳಿಸಿ, ಸಾವಯವ ಕೃಷಿ ಮೌಲ್ಯ ವರ್ಧಿತ ಉತ್ಪನ್ನಗಳ ಏರ್ ಕಾರ್ಗೋ ಸ್ಥಾಪಿಸಲಿ, 12500 ಎಕರೆಯಲ್ಲಿ ತಲೆ ಎತ್ತಿರುವ ತುಮಕೂರು ನಿಮ್ಜ್ / ತುಮಕೂರು ಇಂಡಸ್ಟಿçಯಲ್ ನೋಡ್ ಯೋಜನೆಯಲ್ಲಿಯೇ ಏರ್ ಕಾರ್ಗೋ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ನಂತರ ಅವಧಿ ಮುಗಿದ ಮೇಲೆ ವಿಮಾನ ನಿಲ್ಧಾಣ ಸ್ಥಾಪಿಸಲಿ, ಅಲ್ಲಿಯವರೆಗೂ ಉಳಿದ ಜಮೀನಿನಲ್ಲಿ ಸಾವಯವ ವೆಜಿಟಿಬಲ್ ಕ್ಲಸ್ಟರ್ ಸ್ಥಾಪಿಸಿ, ಮೂಲಭೂಮಿಯ ಕೃಷಿಕರ ಮೂಲಕ ಸಾವಯವ ಕೃಷಿ ಮಾಡಿಸಲಿ. ಕೆಮಿಕಲ್ ಕೃಷಿ ಮತ್ತು ಸಾವಯವ ಕೃಷಿ ಖರ್ಚು ವೆಚ್ಚಗಳ ಅನಾಲೀಸಿಸ್ ಮಾಡಿಸಲಿ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಸರ್ಕಾರಗಳಿಗೂ ಸಾವಯವ ಕೃಷಿ ಮತ್ತು ಕೆಮಿಕಲ್ ಕೃಷಿ ಆದಾಯ ಖರ್ಚು ವೆಚ್ಚಗಳ ವ್ಯತ್ಯಾಸದ ನೈಜ ಚಿತ್ರಣ ದೊರೆಯಲಿದೆ.
ಸಾವಯವ ಕೃಷಿಕರಿಗೆ ಹೆಚ್ಚಿಗೆ ಯಾವ ಸವಲತ್ತು ನೀಡಬೇಕು ಎಂಬ ಅರಿವು ಸರ್ಕಾರಗಳಿಗೆ ಆಗಲಿದೆ. ಇದೂ ಅಗತ್ಯವಾಗಿದೆ. ಪಂಚಭೂತಗಳು ಅಪವಿತ್ರ/ಮಲೀನಗೊಂಡು ಜನ ಜಾನುವಾರುಗಳಿಗೆ ಬರಬಾರದಷ್ಟು ರೋಗಗಳು ಬಂದರೂ ಸರ್ಕಾರಗಳು ಮೌನವಾಗಿರುವುದು ಸರಿಯಲ್ಲ. ಬೃಹತ್ ಮಾದರಿಯಲ್ಲಿ ವಿನೂತನ ಪ್ರಯೋಗಗಳು ಆರಂಭವಾಗಲಿ.ದೇಶದ ಪ್ರತಿಹಳ್ಳಿಯಲ್ಲೂ ಸಾವಯವ ಕೃಷಿ ಬಗ್ಗೆ ಚರ್ಚೆಯಂತೂ ಆರಂಭವಾಗಿದೆ.
– ಕುಂದರನಹಳ್ಳಿ ರಮೇಶ್, ಮಾಜಿ ಸದಸ್ಯ, ರಾಜ್ಯಮಟ್ಟದ ದಿಶಾ ಸಮಿತಿ, ಕರ್ನಾಟಕ.
