28th January 2026
Share

TUMAKURU:SHAKTHIPEETA FOUNDATION

ಕೃಷಿ ಆಶ್ರಮದ ನೀತಿ ನಿಯಮ ರೂಪಿಸುವ ಕಾಲ ಈಗ ಬಂದಿದೆ. ಇದು ಡಾ.ನಾಗಭೂಷಣ್‌ರವರು ಹೊಣೆಗಾರಿಕೆ ಯಾಗಿದೆ. ಅವರು ನಿಯಮ ರೂಪಿಸಲು ಸರ್ಕಾರಗಳಿಗೆ ಸಲಹೆ ನೀಡಲು ಹಲವಾರು ವಿಷಯಗಳ ಸಂಗ್ರಹ ಮಾಡುತ್ತಿದ್ದಾರೆ.

  1. ಡಾ.ನಾಗಭೂಷಣ್‌ರವರ ನೇತೃತ್ವದಲ್ಲಿ 1008 ಕೃಷಿ ಆಶ್ರಮಗಳ ನೀತಿ ನಿಯಮ ರೂಪಿಸಲು ಸಂಶೋಧನೆ ಮತ್ತು ಅಧ್ಯಯನ ವರದಿ ಸಿದ್ಧವಾಗುತ್ತಿದೆ.
  2. ಡಾ.ಜಗನ್ನಾಥ್‌ರವರ ನೇತೃತ್ವದಲ್ಲಿ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸಂಶೋಧನೆ ಮತ್ತು ಅಧ್ಯಯನ ವರದಿ ಸಿದ್ಧವಾಗುತ್ತಿದೆ.
  3. ಮಾರುತಿರಾವ್‌ರವರ ನೇತೃತ್ವದಲ್ಲಿ ಮಣ್ಣಿನ ಮ್ಯೂಸಿಯ ಸಂಶೋಧನೆ ಮತ್ತು ಅಧ್ಯಯನ  ವರದಿ ಸಿದ್ಧವಾಗುತ್ತಿದೆ.
  4. ಸತ್ಯಾನಂದ್‌ರವರ ನೇತೃತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ ನ ಡಿಜಿಟಲ್ ಪ್ಲಾಟ್ ಫಾರಂ ಸಂಶೋಧನೆ ಮತ್ತು ಅಧ್ಯಯನ ವರದಿ ಸಿದ್ಧವಾಗುತ್ತಿದೆ. ಆರಂಭಿಕ ಖರ್ಚು ವೆಚ್ಚ ನೀಡಲು ಎಸ್.ಪಿ.ರಾಜೇಶ್ ರವರ ಜ್ಞಾನ ಸೇತುಸೇತು ಫೌಂಡೇಷನ್ ಹಣ ಬಂದಾಗ ಹಿಂದಿರುಗಿಸುವ ಷರತ್ತಿನೊಂದಿಗೆ ಮುಂದೆ ಬಂದಿದೆ. ಅವರು ಮುಂಗಡ ಹಣ ಪಡೆಯಲು ಇನ್ನೂ ತೀರ್ಮಾನ ಮಾಡಿಲ್ಲ.
  5. ಸುಹೃತ್ ಉಜ್ಜನಿರವರ ನೇತೃತ್ವದಲ್ಲಿ ಕೃಷಿ ಆಶ್ರಮಗಳ ಪರಿಕಲ್ಪನೆ/ ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ ನ ಡಿಜಿಟಲ್ ಪ್ಲಾಟ್ ಫಾರಂ/ ಪಾಂರ್ ಕಾರಿಡಾರ್/ಫಾರ್ಮರ್ ಸಿಟಿ/ ಕೃಷಿ ಸಂಶೋಧನಾ ನಗರ ಪರಿಕಲ್ಪನೆಯನ್ನು ಸ್ಟಾರ್ಟ್ಅಫ್ ಯೋಜನೆಯಡಿಯಲ್ಲಿ ತರಬಹುದೇ ಎಂಬ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ  ವರದಿ ಸಿದ್ಧವಾಗುತ್ತಿದೆ.

ಹೀಗೆ ಆಸಕ್ತ ಕೃಷಿ ಆಶ್ರಮಗಳ ತಜ್ಞರು/ ಆಸಕ್ತ ಕೃಷಿಕರು, ಅವರ ಕನಸಿನ ಯಾವುದೇ ಯೋಜನೆಗಳ ಬಗ್ಗೆ  ಸಂಶೋಧನೆ ಮತ್ತು ಅಧ್ಯಯನ  ವರದಿ ನೀಡಲು ಮುಕ್ತ ಅವಕಾಶವಿದೆ. ಈ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ನನಗೆ ಯಾವುದೇ ಹೊಣೆಗಾರಿಕೆ ನೀಡಿಲ್ಲ ಎಂಬ ಕೊರಗು ಇಲ್ಲಿ ಬರಬಾರದು, ಜ್ಞಾನ ಯಾರಪ್ಪನ ಸ್ವತ್ತಲ್ಲ’ ಯಾರೂ ಬೇಕಾದರೂ ಯಾವುದೇ ಒಂದು ಅಥವಾ ಎರಡು ವಿಷಯ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಮೇಲ್ಕಂಡ ತಂಡಗಳ ನೇತೃತ್ವ ವಹಿಸಿದವರಿಗೆ ಜ್ಞಾನದಾನ’ ಮಾಡಬಹುದು.

ಈಗಾಗಲೇ ಮಾನ್ಯ ಮುಖ್ಯಂಮತ್ರಿಯವರು, ಕೃಷಿ ಸಚಿವರು, ಮುಖ್ಯಕಾರ್ಯದರ್ಶಿಯವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಮುಂದೆ ಎಲ್ಲಾ ಕಡತಗಳು ಇವೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಜಾರಿಗೊಳಿಸಿದೆ. ಈ ಮಾರ್ಗದರ್ಶಿ ಸೂತ್ರದಲ್ಲಿ ನಾವು ಇದೂವರೆಗೂ ಸರ್ಕಾರಗಳಿಗೆ ಬರೆದ ಪತ್ರಗಳ ಶೇ 80 ರಷ್ಟು ವಿಷಯಗಳು ಸೇರ್ಪಡೆ ಆಗಿದೆ ಎಂದರೆ ತಪ್ಪಾಗಲಾರದು. ಈ ಯೋಜನೆಯಡಿಯಲ್ಲಿ ನಮ್ಮ ರಾಜ್ಯದಲ್ಲಿ ಆಯ್ಕೆಯಾಗಿರುವ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾವೇರಿ ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಯಾಗಿವೆ. ಈ ವ್ಯಾಪ್ತಿಯಲ್ಲಿ 39 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಇಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 5 ರಂತೆ ಒಟ್ಟು 195 ಕೃಷಿ ಆಶ್ರಮಗಳನ್ನು ಆರಂಭಿಸಲು ಚಿಂತನೆ ಇದೆ.

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಮಾರ್ಗದರ್ಶಿ ಸೂತ್ರದಲ್ಲಿ, ಕೃಷಿಗೆ ಸಂಬAಧಿಸಿದ ಎಲ್ಲಾ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪಟ್ಟಿಯನ್ನು ಮಾಡಲು ಕೇಂದ್ರ ಸರ್ಕಾರ ನಿಯಮದಲ್ಲಿ ಘೋಷಣೆ ಮಾಡಿದೆ. ಈ ಆರು ಜಿಲ್ಲೆಗಳ ಕೃಷಿ ಇಲಾಖೆ ನೋಡೆಲ್ ಇಲಾಖೆ ಆಗಿರುವುದರಿಂದ ಅವರು ಮಾಡಲೇ ಬೇಕಿದೆ.

ನನ್ನ ಅಧ್ಯಯನದ ಪ್ರಕಾರ ಯೋಜನೆಯಡಿಯಲ್ಲಿ, ಕೃಷಿಗೆ ಸಂಭAದಿಸಿದ ಹಲವಾರು ಇಲಾಖೆಗಳನ್ನು ಸೇರ್ಪಡೆ ಮಾಡಿಲ್ಲ,  ಆದರೇ ಕೈ ಬಿಟ್ಟಿರುವ ಅಥವಾ ವಿನೂತನ ಐಡಿಯಾಗಳನ್ನು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಮಾರ್ಗದರ್ಶಿ ಸೂತ್ರದಲ್ಲಿ ಅವಕಾಶ ಕಲ್ಪಿಸಿದೆ.

ದಿನಾಂಕ:19.01.2026 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ, ಕೃಷಿಗೆ ಸಂಬAಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಇಲಾಖೆಗಳ ಯೋಜನೆಗಳಲ್ಲಿ, ಕೇಂದ್ರ ಸರ್ಕಾರದ ಪಾಲು, ರಾಜ್ಯ ಸರ್ಕಾರದ ಪಾಲು ಮತ್ತು ಕೃಷಿಕರ ಪಾಲು ಎಷ್ಟು, ಎಸ್.ಪಿ.ವಿಗಳ ಮೂಲಕ ವಿವಿಧ ಕ್ಲಸ್ಟರ್‌ಗಳಿಗೆ ದೊರೆಯುವ ಅನುದಾನ ಎಷ್ಟು ಎಂಬ ಬಗ್ಗೆ ವಿವರವಾದ ವರದಿ ನೀಡಲು ಬನವಾಸಿ ಡಿ. ಮಹೇಶ್ ಕುಮಾರ್ ರವರಿಗೆ ಹೊಣೆಗಾರಿಕೆ ನೀಡಲಾಗಿದೆ.

ಅವರು ಆರು ಜಿಲ್ಲೆಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕರುಗಳು, ಈ ಮಾಹಿತಿ ಸಂಗ್ರಹ ಮಾಡಿರುವ ಬಗ್ಗೆ ವಿಷಯ ಸಂಗ್ರಹಿಸಿ, ವಿವಿಧ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಹಾಗೂ ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ವರಧಿ ನೀಡಲಿದ್ದಾರೆ, ಅವರ ಜೊತೆ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು 9739788801 ಸಂಪರ್ಕಿಸಬಹುದು.

ಈ ವರದಿ ಕೃಷಿ ಆಶ್ರಮಗಳಿಗೆ/ ರಾಜ್ಯದ ರೈತರಿಗೆ ಯಾವ ಯೋಜನೆ ಅಗತ್ಯವಿದೆ, ಎಂಬ ಬಗ್ಗೆ ಆಯ್ಕೆ ಮಾಡಿಕೊಳ್ಳಲು ಬಹಳ ಅನೂಕೂಲವಾಗಲಿದೆ. ಜೊತೆಗೆ ಇನ್ನೂ ಯಾವ ಯೋಜನೆಯನ್ನು, ಯಾವ ಇಲಾಖೆ ಹೊಸದಾಗಿ ರೂಪಿಸುವ ಅಗತ್ಯವಿದೆ ಎಂಬ ಬಗ್ಗೆ ಸರ್ಕಾರಗಳಿಗೆ ಸಲಹೆ ನೀಡಲು ಸಹಕಾರಿಯಾಗಲಿದೆ.

ಪ್ರಪಂಚದ ಬೇರೆ, ಬೇರೆ ದೇಶಗಳ ಯೋಜನೆಗಳ ಮಾದರಿ, ಭಾರತ ದೇಶದ ಬೇರೆ ಬೇರೆ ರಾಜ್ಯಗಳ ಯೋಜನೆಗಳನ್ನು ಪ್ರಸ್ತಾಪ ಮಾಡುವ ಅಗತ್ಯವಿದೆ.  ಅವರಿಗೆ ಏನಾದರೂ ಖರ್ಚು ವೆಚ್ಚಗಳ ಅಗತ್ಯವಿದ್ದಲ್ಲಿ, ಶಿವಮೊಗ್ಗ ಜಿಲ್ಲೆಯ ಶ್ರೀ ಮುಖೇಶ್ ಗೌಡರು ಮತ್ತು ಅವರ ತಂಡ ಹಣ ಬಂದಾಗ ಹಿಂದಿರುಗಿಸುವ ಷರತ್ತಿನೊಂದಿಗೆ ನೀಡಲು ಮುಂದೆ ಬಂದಿದ್ದಾರೆ, ಡಿಜಿಟಲ್ ಮೂಲಕ ಪಡೆಯ ಬಹುದಾಗಿದೆ.

ಕೃಷಿ ಆಶ್ರಮಗಳ ನೀತಿ ನಿಯಮ ರೂಪಿಸಲು ಇದು ವರದಾನವಾಗಲಿದೆ. ಅವರು ಯಾವುದಾದರೂ ಸಂಸ್ಥೆಯ ಮೂಲಕ ಅಥವಾ ಅವರ ಹೇಸರಿನಲ್ಲಿಯೇ ವರಧಿ ನೀಡಲು ಮುಕ್ತ ಅವಕಾಶ ಕಲ್ಪಿಸುವುದು ಅಗತ್ಯವಿದೆ.

ಮೇಲ್ಕಂಡ ವರದಿ ಸಿದ್ಧಪಡಿಸಲು ಅವರವರ ಒಪ್ಪಿಗೆಯನ್ನು 1008 ಕೃಷಿ ಆಶ್ರಮಗಳ ಗುಂಪಿನಲ್ಲಿ ಪ್ರಕಟಿಸುವುದು ಒಳ್ಳೆಯ ಬೆಳವಣಿಗೆ.

ಆಸಕ್ತರು ಸಲಹೆ ಮಾರ್ಗದರ್ಶನ ನೀಡಲು ಬಹಿರಂಗ ಮನವಿ. ವಿಷಯವಾರು ಬಹಿರಂಗ ಚರ್ಚೆ ಆದಲ್ಲಿ ಪಾರದರ್ಶಕತೆಗೆ ಬೆಲೆ ಬರಲಿದೆ.  ಅವರವರೇ ಕಾಲ ಮಿತಿ  ನಿಗಧಿ ಗೊಳಿಸುವುದು ಸೂಕ್ತವಾಗಿದೆ.