
TUMAKURU:SHAKTHIPEETA FOUNDATION
ದಿನಾಂಕ:23.01.2026 ರಂದು ತುಮಕೂರಿನ ಚಿರಂತನಾ ಫೌಂಡೇಷನ್ ನಲ್ಲಿ ಕೃಷಿ ಆಶ್ರಮಗಳ ವೆಬ್ ಸೈಟ್, ಡಿಜಿಟಲ್ ಪ್ಲಾಟ್ ಫಾರಂ, ಬಗ್ಗೆ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ನನ್ನ ಜೊತೆ
- ಡಿಜಿಟಲ್ ಪ್ಲಾಟ್ ಫಾರಂ ಸಿದ್ಧಪಡಿಸುತ್ತಿರುವ ತುಮಕೂರಿನ ಚಿರಂತನಾ ಫೌಂಡೇಷನ್ ನ ಸತ್ಯಾನಂದ್ ಎಸ್ ರಾಜ್.
- ಇದೂವರೆಗೂ ಗೂಗಲ್ ಫಾರಂ ಮಾಡಿ ಸುಮಾರು 300 ಕೃಷಿ ಆಶ್ರಮಗಳ ಡಿಜಿಟಲ್ ಮಾಹಿತಿ ಸಂಗ್ರಹ ಮಾಡುತ್ತಿರುವ ಸ್ಟಾರ್ಟ್ ಅಫ್ ತುಮಕೂರು ಮಾಲೀಕರಾದ ಸುಹೃತ್ ಉಜ್ಜನಿ.
- ಈಗ ವೆಬ್ ಸೈಟ್ ಮಾಡಲು ಮುಂದೆ ಬಂದಿರುವ ಬೆಂಗಳೂರಿನ ಅಗ್ರೋಸ್ಪೇಸ್ನ ಮಾಲೀಕರಾದ ಗೋವಿಂದ್ ರಾಜ್.
- ನುಗ್ಗೆ ಪ್ರಪಂಚದ ಮಧುರನಾಥ್ ಭಾಗವಹಿಸಿದ್ದರು.
ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ನೀಡುವ ಮಾಹಿತಿ, ಇದೂವರೆಗೂ ಯಾರು, ಯಾರು ಏನೇನು ಮಾಡುತ್ತಿದ್ದಾರೆ, ಮುಂದೆ ಯಾರು, ಯಾರು ಏನು ಮಾಡಬೇಕು? ಮುಂದಿನ ನಿರ್ವಹಣೆ ಹೇಗೆ, ಹಣಕಾಸಿನ ವ್ಯವಹಾರ ಹೇಗೆ ಎಂಬ ಬಗ್ಗೆ ಎಂ.ಓ.ಯು ಮಾಡಿಕೊಂಡು ನಂತರ ಮುಂದುವರೆಯುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.
‘ಅವರ ಬಿಟ್ಟು, ಅವರ ಬಿಟ್ಟು ಅವರು ಯಾರು ?’ ಎಂಬ ನಾಣ್ಣುಡಿಯಂತೆ ಆಗಬಾರದು.
ಡಾ.ನಾಗಭೂಷಣ್, ಡಾ ಜಗನ್ನಾಥ್ ರವರು, ಅಗತ್ಯವಿರುವವರು ಮತ್ತು ಆಸಕ್ತರ ಸಭೆಯನ್ನು ಮುಂದಿನ ವಾರ ಆಯೋಜಿಸಿ ಅಂತಿಮ ನಿರ್ಧಾರವನ್ನು ಪಾರದರ್ಶಕವಾಗಿ ಪ್ರಕಟಿಸುವುದು ಸೂಕ್ತವಾಗಿದೆ.
ಶೀಘ್ರವಾಗಿ ಲೋಗೋ ಅಂತಿಮಗೊಳಿಸುವುದು ಅಗತ್ಯವಾಗಿದೆ, ಚರ್ಚೆ ಮಾಡುತ್ತಾ ಹೋದರೇ ಇನ್ನೂ ವರ್ಷಗಳು ಕಳೆದರು ಪಲಿತಾಂಶ ಶೂನ್ಯವಾಗುತ್ತದೆ.
ಕಳೆದ ಒಂದು ತಿಂಗಳಿನಲ್ಲಿ ಲೋಗೊ ಬಗ್ಗೆ ‘ಸುಧೀರ್ಘ ಚರ್ಚೆ’ ನಡೆದಿತ್ತು, ಕಳೆದ 2-3 ದಿನಗಳಿಂದ ಮತ್ತೆ ‘ಬೊಂಬಾಟ್ ಚರ್ಚೆ’ ನಡೆಯುತ್ತಿದೆ. ಎರಡು ಚರ್ಚೆಯಲ್ಲಿ ಯಾರು ಯಾರು ಯಾವ ಮಾದರಿ ಲೋಗೊ ಬಗ್ಗೆ ಸಲಹೆ, ನೀಡಿದ್ದಾರೆ, ಯಾರು ಮಾಡಿದ ಲೋಗೊ ಅಂತಿಮ ಮಾಡಲಾಗಿದೆ, ಏಕೆ ಆಯ್ಕೆ ಮಾಡಲಾಗಿದೆ ಎಂಬ ಬಗ್ಗೆ ಲಿಖಿತ ದಾಖಲೆ ಮಾಡುವುದು ಸೂಕ್ತವಾಗಿದೆ.
ಇಲ್ಲದೆ ಹೋದರೆ ‘ಗಾಗ ಇಕ್ಕಿದ ಮೂಗ ಉಂಡ’ ಎಂಬ ಗಾದೆಯಂತೆ ಆಗಬಾರದು.
