28th January 2026
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಗೆ ಸೆಂಟ್ರಲ್ ಅಗ್ರಿಕಲ್ಚರ್ ಯೂನಿವರ್ಸಿಟಿ ಮಂಜೂರು ಮಾಡಿಸಲು ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣವರನ್ನು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೆ ಬಹಿರಂಗ ಮನವಿ ಮಾಡಲಾಗಿದೆ.

ತುಮಕೂರು ಜಿಲ್ಲೆ ತೆಂಗು, ಅಡಿಕೆ, ಹುಣೆಸೆಹಣ್ಣು ಹೀಗೆ ಆನೇಕ ಬೆಳೆಗಳಿಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಮಾಡಿದರೂ ಇದೂವರೆಗೂ ಕೃಷಿ ಕಾಲೇಜು ಇಲ್ಲದಂತಹ ಸ್ಥಿತಿಗೆ ಬಂದು ನಿಂತಿದೆ.

ಶಿರಾದಲ್ಲಿ ಕೃಷಿ ಕಾಲೇಜಿಗೆ ಜಮೀನು ಮಂಜೂರು ಮಾಡಲಾಗಿದೆ, ದೆಹಲಿ ವಿಶೇಷ ಪ್ರತಿನಿಧಿಯವರಾದ ಶ್ರೀ ಟಿ.ಬಿ.ಜಯಚಂದ್ರವರು ಸಹ ಈ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.

ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಗೆ ತುಮಕೂರು ಜಿಲ್ಲೆಯೂ ಆಯ್ಕೆ ಆಗಿದೆ. ಈಗಲಾದರೂ ಚುನಾಯಿತ ಜನಪ್ರತಿನಿಧಿಗಳು ಗಂಭೀರ ಪ್ರಯತ್ನ ಮಾಡಲಿ

-ಕುಂದರನಹಳ್ಳಿ ರಮೇಶ್, ಮಾಜಿ ಸದಸ್ಯ ರಾಜ್ಯ ಮಟ್ಟದ ದಿಶಾ ಸಮಿತಿ.