28th January 2026
Share

TUMAKURU:SHAKTHIPEETA FOUNDATION

ಬೆಂಗಳೂರಿನಲ್ಲಿ ದಿನಾಂಕ:21.01.2026 ರಿಂದ 23.01.2026 ರವರೆಗೆ ನಡೆದ NATIONAL CONCLAVE ON SHG-LED NATURAL FARMING ನಲ್ಲಿ ಮಾಡಿದ ಪ್ರಮುಖ ನಿರ್ಧಾರ ರಾಸಾಯನಿಕ ಕೃಷಿಯಿಂದ ರಾಸಾಯನಿಕ ಮುಕ್ತ ಕೃಷಿ’ ಈ ಹಿನ್ನಲೆಯಲ್ಲಿ ನಮ್ಮ ಹೆಜ್ಜೆ.

ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ಒಟ್ಟು 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ರಾಜ್ಯದ ಕೃಷಿ ಆಶ್ರಮಗಳು ಮುಂದಾಗಿವೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೂ ಈಗಾಗಲೇ ತರಲಾಗಿದೆ.

ಸರ್ಕಾರಿ ಯೋಜನೆಯನ್ನು ಕಾಯುತ್ತಾ ಕೂರದೆ ರೈತರೇ ಆರಂಭಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾನು ಒಬ್ಬ ರೈತನಾಗಿ, ಅಡಿಕೆ ಬೆಳೆ ಆಯ್ಕೆ ಮಾಡಿಕೊಂಡು  ARECA KNOWLEDGE BANK  ಸ್ಥಾಪಿಸಿ ಉಳಿದ ರೈತರಿಗೆ ಪ್ರಚಾರ ಮಾಡಲು ಇಚ್ಚಿಸಿದ್ದೇನೆ.

ಈ ಹಿನ್ನಲೆಯಲ್ಲಿ ದಿನಾಂಕ:27.01.2026 ರಂದು ಹೀರೇಹಳ್ಳಿ ಕೃಷಿ ವಿಜ್ಞಾನದ ಕೇಂದ್ರ ವಿಜ್ಞಾನಿಗಳು ಬಂದು ನಮ್ಮ ತೋಟವನ್ನು ಪರಿಶೀಲನೆ ಮಾಡಿದರು. ಮಣ್ಣಿನ ಪರೀಕ್ಷೆಗೆ ವiಣ್ಣು ಸಂಗ್ರಹ ಕಾರ್ಯವನ್ನು ಡಾ.ರಮೇಶ್ ಪರಿಚಯಿಸಿದರು.

 

ಡಾ.ಪ್ರಶಾಂತ್ ರವರು ಅಡಿಕೆ ಗಿಡದ ರೋಗದ ಬಗ್ಗೆ ಮನವರಿಕೆ ಮಾಡಿದರು. ಇದೇ ದಿನ ಅಧಿಕಾರಿಗಳ ಕಾರ್ಯ ಚಟುವಟಿಕೆ ನೋಡಿದ ಅಕ್ಕ-ಪಕ್ಕದ ರೈತರಾದ ಸಿದ್ಧರಾಮಯ್ಯ, ಕೆ.ಆರ್.ಮಹೇಶ್, ಗುಬ್ಬಣ್ಣ ಮತ್ತು ಸಿದ್ಧಯ್ಯ ಸಹ ಅವರ ತೋಟಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.

ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಮಾಡಲು ಆಸಕ್ತಿ ಇರುವ ರೈತರು ಮೊದಲು ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿನ ಸಾಂದ್ರತೆ ಪರೀಕ್ಷೆ ಮಾಡಿಸಿ, ನೀವೂ ಆಯ್ಕೆ ಮಾಡಿಕೊಂಡಿರುವ ಬೆಳೆಗೆ ನಿಮ್ಮ ಭೂಮಿ ಸೂಕ್ತವಾಗಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಿ.

ನಂತರ ನಾನು ಯಾವ ರೀತಿ ಮುಂದಿನ ಚಟುವಟಿಕೆಗಳನ್ನು ಮಾಡುತ್ತೇನೆ, ಅದೇ ರೀತಿ ನೀವೂ ಮಾಡಿ, ಎಲ್ಲವೂ ಡಿಜಿಟಲ್ ಡಾಟಾ ಬೇಸ್ ಆಗಲಿದೆ. ಶೀಘ್ರದಲ್ಲಿ ಡಿಜಿಟಲ್ ಪೋರ್ಟಲ್ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು.