29th January 2026
Share

TUMAKURU :SHAKTHIPEETA FOUNDATION

108 ಕೃಷಿ ಆಶ್ರಮಗಳಿಂದ ಆರಂಭವಾದ ಪಯಣ, 2026 ಮಾರ್ಚ್ ವೇಳೆಗೆ 432 ಕೃಷಿ ಆಶ್ರಮಗಳ ನೇತಾರರನ್ನು ಗುರುತಿಸುವುದಾಗಿ, ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರು ವಿಷಯ ಹಂಚಿಕೊ0ಡಿದ್ದಾರೆ. ಇದೊಂದು ಅವರ ಧೃಡ ನಿರ್ಧಾರ. 432 ರಲ್ಲಿ ರಾಜ್ಯದ 31 ಜಿಲ್ಲೆಗಳ, ಎಲ್ಲಾ 224 ವಿಧಾನಸಭಾ ಕೇತ್ರಗಳಲ್ಲೂ ಕಡ್ಡಾಯವಾಗಿ ಕನಿಷ್ಠ ಒಂದು ಕೃಷಿ ಆಶ್ರಮವಾದರೂ ಇರಲೇ ಬೇಕು ಎಂಬ ಆಲೋಚನೆ ನಮ್ಮದಾಗಿದೆ.

ಈ ಭಾರಿ ಕೃಷಿ ಆಶ್ರಮ ಅವಾರ್ಡ್’ ನೀಡಲು ಸಹ ಯೋಚಿಸಲಾಗಿದೆ. ಅವಾರ್ಡ್ ನೀಡಲು RANKING’ ಅಂಶಗಳನ್ನು ಪಟ್ಟಿ ಮಾಡಿ, ಅಂಕಗಳನ್ನು ನಿಗಧಿ ಗೊಳಿಸಬೇಕಿದೆ. ಆಸಕ್ತರು ಮಾನದಂಡಗಳ’ ಪಟ್ಟಿ ಮಾಡಲು ಬಹಿರಂಗ ಆಹ್ವಾನ.

ಕನ್ನೇರಿ ವಾರ್ಷಿಕ ಸಭೆ ವೇಳೆಗೆ ಗುರುತಿನ ಪತ್ರ’ ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಡಿಜಿಟಲ್ ಪ್ಲಾಟ್ ಫಾರಂಗೆ ಎಲ್ಲಾ 432 ಕೃಷಿ ಆಶ್ರಮಗಳ ಮಾಹಿತಿಗಳನ್ನು ಅಫ್ ಲೋಡ್ ಮಾಡಲು ಭರದ ಸಿದ್ಧತೆ ನಡೆಯುತ್ತಿದೆ.