29th January 2026
Share

TUMAKURU:SHAKTHIPEETA FOUNDATION

ಕೃಷಿ ಆಶ್ರಮಗಳ ನೇತಾರರೇ/ ಪ್ರಗತಿಪರ ರೈತರೇ 1008 ಕೃಷಿ ಆಶ್ರಮ ವಾಟ್ಸ್ ಗ್ರೂಪ್‌ನಲ್ಲಿ 589 ಜನರಿದ್ದಾರೆ. ಈ ಗ್ರೂಪ್ ಅಲ್ಲದೆ ನಾನು ರಚಿಸಿರುವ ಹಾಗೂ ನನ್ನನ್ನು ಸೇರಿಸಿಕೊಂಡಿರುವ ಒಟ್ಟು 82 ಗ್ರೂಪ್‌ಗಳಿಗೆ ನನ್ನ ಇ-ಪೇಪರ್  ಕಳುಹಿಸುತ್ತಿದ್ದೇನೆ. ಕೃಷಿ ಆಶ್ರಮಗಳ ಪರಿಕಲ್ಪನೆ ಎಲ್ಲರಿಗೂ ತಿಳಿಯಲೇ ಬೇಕು.ಎಂಬುದೇ ನನ್ನ ಉದ್ದೇಶ. ಆಸಕ್ತಿ ಇರುವ ಯಾರು ಬೇಕಾದರೂ ಡಾ.ನಾಗಭೂಷಣ್ – 9916030272 ಸಂಪರ್ಕಿಸಿ. ಇದೊಂದು ಮೌನ ಕ್ರಾಂತಿ’ಯಾಗಲೇ ಬೇಕು.

ಇದರ ಉದ್ದೇಶ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ದಳವಾಯಿರವರ ಮೂಲಕ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಪಾಲಿಸಿ ಮಾಡಲು, ಕೆಳಹಂತದಲ್ಲಿ ಮಾಡಬೇಕಾದ ಕೆಲಸಗಳ ಅನುಭವ ಬೇಕಾಗಿದೆ. ಈ ಹಿನ್ನಲೆಯಲ್ಲಿ ಸ್ವತಃ ನನ್ನ ಅನುಭವ ಹಾಗೂ ನಮಗಾಗಿ/ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏನೇನು ಈಗ ಮಾಡಿದೆ, ಮಾಡುತ್ತಿದೆ, ಮುಂದೆ ಏನೇನು ಮಾಡಬೇಕು ಎಂಬ ಮನವರಿಕೆ ಬಹಳ ಮುಖ್ಯ.

ನಾನು ಅಡಿಕೆ ಬೆಳೆ ಆಯ್ಕೆ ಮಾಡಿಕೊಂಡು, ಹಂತ ಹಂತವಾಗಿ ಮಾಡುತ್ತಿದ್ದೇನೆ, ನೀವೂ ಮಾಡಿ ಅಂತ ಹೇಳುತ್ತಿದ್ದೇನೆ. ಮುಂದಿನ ವಾರದಿಂದ ಕೃಷಿ ಆಶ್ರಮಗಳ/ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಈ ಎಲ್ಲಾ ನಡವಳಿಕೆಗಳು ಡಿಜಿಟಲ್ ಪ್ಲಾಟ್ ಫಾರಂ’ನಲ್ಲಿ ಅಫ್ ಲೋಡ್  ಮಾಡಲು ವ್ಯವಸ್ಥೆ ಸಿದ್ಧವಾಗುತ್ತಿದೆ.

  1. 1 ನೇ ಹಂತ – ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ತುಮಕೂರು ಇವರು ನನ್ನ ಜಮೀನಿನ ಮಣ್ಣು ಪರೀಕ್ಷೆ ಮಾಡಲು ಸಂಗ್ರಹ ಮಾಡಿದರು ಮತ್ತು ನನಗೆ ಅಡಿಕೆ ಬಗ್ಗೆ ಮಾಹಿತಿ ಹಂಚಿಕೊ0ಡಿದ್ದಾರೆ.
  2. 2 ನೇ ಹಂತ-ಅಡಿಕೆ ಬೆಳೆ ತೋಟಗಾರಿಕಾ ಇಲಾಖೆಗೆ ಬರುವುದರಿಂದ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಜೊತೆಗೆ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಅಫ್ ಗ್ರೂಪ್ ರಚಿಸಿದ್ದೇನೆ, ಇದರಲ್ಲಿ ಕುಂದರನಹಳ್ಳಿಯಿ0ದ ದೆಹಲಿವರೆಗೂ ಅಧಿಕಾರಿಗಳನ್ನು ಸೇರ್ಪಡೆ ಮಾಡುತ್ತಿದ್ದೇನೆ.
  3. 3 ನೇ ಹಂತ- ಭಾರತ ದೇಶದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ವೈಜ್ಞಾನಿಕ ಸಲಹಾ ಸಮಿತಿ’ ರಚಿಸಿದೆ. ಈ ಸಮಿತಿಯ ಸಭೆ ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೆವಿಕೆಯಲ್ಲಿ ದಿನಾಂಕ:30.01.2026 ನೇ ಶುಕ್ರವಾರ ನಡೆಯಲಿದೆ. ನಾನು ಸಹ ಈ ಸಮಿತಿಯ ಮಹತ್ವ ಅರಿತು ಕೊಳ್ಳಲು ಭಾಗವಹಿಸುತ್ತಿದ್ದೇನೆ. ನೀವೂಗಳು ಸಹ ನಿಮ್ಮ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ಅನುಭವದ ಮಾಹಿತಿಗಳನ್ನು ಹಂಚಿಕೊಳ್ಳಿ.

ನೋಡಿ ಇಲ್ಲಿ ಯಾರು ನಮಗೆ ಹೀಗೆ ಮಾಡಿ ಅಂತ ಹೇಳಿಲ್ಲ, ಕೃಷಿ ಆಶ್ರಮಗಳ ಕಾರ್ಯವೈಖರಿಯನ್ನು ಇಡೀ ಪ್ರಪಂಚ ಅರಿಯ ಬೇಕಾದರೆ, ಆರ್ಥಿಕವಾಗಿ ಸಧೃಡವಾಗಬೇಕಾದರೆ, ಈ ಕಸರತ್ತು ನಡೆಸಲೇ ಬೇಕು. ಸರ್ಕಾರಗಳ ಸವಲತ್ತು ರೈತರ ಮನೆ ಬಾಗಿಲಿಗೆ ತಲುಪಲು ಇರುವ ಕಷ್ಟಗಳ ಅನುಭವ ಇಲ್ಲದೆ, ನಮ್ಮ ಕೃಷಿ ಜಮೀನು ಮಾದರಿ ಮಾಡದೇ, ನಾವು ಕೃಷಿ ಆಶ್ರಮಗಳ ಬಗ್ಗೆ ಮಾತನಾಡುವುದು ಸರಿಯಲ್ಲ.

ಕನಿಷ್ಠ ಅರ್ಧ ಎಕರೆಯನ್ನಾದರೂ ಸ್ವಂತ, ಬಾಡಿಗೆ, ಲೀಸ್ ಪಡೆದದಾದರೂ, ಜಮೀನಿನಲ್ಲಿ ಸಾವಯವ ಕೃಷಿ ಮಾಡಲೇ ಬೇಕು, ‘ಕೃತಿ ಮಾತನಾಡಬೇಕು’ ಎಂಬ ಘೋಷಣೆ ಮಾಡಿರುವುದೇ ಈ ಕಾರಣಕ್ಕೆ.

ಕೃಷಿ ಆಶ್ರಮದ/ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಕೈಪಿಡಿ ಎಂದರೆ, ಅದು ಮ್ಯಾನ್ಯುಯುಲ್ ಮಾದರಿಯಲ್ಲಿ ಇರಬೇಕು. ರೈತರಿಗಾಗಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ನಿಖರವಾದ ಮಾಹಿತಿ ರೈತರಿಗೆ ಬೆರಳ ತುದಿಯಲ್ಲಿ ದೊರೆಯಬೇಕು.

ಜಾತಿ ರಹಿತವಾಗಿ, ಪಕ್ಷ ರಹಿತವಾಗಿ, ಪ್ರಗತಿ ಪರ ರೈತರ ಅನುಭವವೂ ಡಿಜಿಟಲ್ ಫ್ಲಾಟ್ ಫಾರಂ ನಲ್ಲಿ ದಾಖಲಾಗಬೇಕು. ರಾಸಾಯಿನಿಕ ಕೃಷಿಯಿಂದ- ರಾಸಾಯನಿಕ ಮುಕ್ತ ಕೃಷಿಯ’ ಪ್ರತಿಯೊಂದು ಬೆಳೆಯ ಖರ್ಚು ವೆಚ್ಚಗಳು, ಆದಾಯಗಳು ಡಿಜಿಟಲ್ ದಾಖಲಾತಿ ಆಗಬೇಕು.

ರಾಸಾಯಿನಿಕ ಕಂಪನಿಗಳಿಗೆ ನೀಡುವ ಸಹಾಯಧನವನ್ನು, ರಾಸಾಯನಿಕ ಮುಕ್ತ ಕೃಷಿಕರಿಗೆ ನೀಡಬೇಕಾದರೆ ವೈಜ್ಞಾನಿಕ ಅಧ್ಯಯನವೂ ಆಗ ಬೇಕು. ಬಾಷಣ ಇಲ್ಲಿ ಕೆಲಸ ಮಾಡುವುದಿಲ್ಲ, ಕೃತಿ ಮಾತನಾಡಲೇ ಬೇಕು. ಎಲ್ಲವೂ ವೈಜ್ಞಾನಿಕವಾಗಿ ಸರ್ಟಿಫಿಕೇಷನ್ ಆಗಬೇಕು. ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ರೈತರ ಬಳಿ ಬರಬೇಕು. ಇದು ನಮ್ಮ ಉದ್ದೇಶವಾಗಿದೆ.

ಲ್ಯಾಬ್ ಟು ಲ್ಯಾಂಡ್’ ಎಂಬ ಪದ ಬರೀ ಭಾಷಣದಲ್ಲಿ ಇರಬಾರದು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಂಶೋದಕರು ರೈತರ/ನಮ್ಮ ಜಮೀನಿಗೆ ಬರಬೇಕು, ಹರಿಕಥೆ ಹೇಳುವುದಲ್ಲ. ಇದು ರಾಜ್ಯದ ಮುಖ್ಯ ಮಂತ್ರಿಯವರು ಮತ್ತು ದೇಶದ ಪ್ರಧಾನ ಮಂತ್ರಿಯವರಿಗೂ ತಲುಪಬೇಕು.

ಕೃಷಿ ಆಶ್ರಮಗಳ ಕನಸು ನನಸಾಗಬೇಕಾದರೆ,  ನಾನು ಮಾಡಿದ ರೀತಿ ಮಾಡುತ್ತಾ ಬನ್ನಿ, ಇನ್ನೂ ಏನೇನು ಮಾಡಬೇಕು ಎಂಬ ಬಗ್ಗೆ ನಿಮ್ಮ ಅಮೂಲ್ಯವಾದ ಸಲಹೆ ನೀಡಲು ಹೃದಯ ಪೂರ್ವಕ ಮನವಿ.

  1. ಡಾ.ನಾಗಭೂಷಣ್ ರವರೇ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 1120 ಕೃಷಿ ಆಶ್ರಮಗಳ ನೇತಾರÀರನ್ನು ಶೀಘ್ರವಾಗಿ ಕಾಲಮಿತಿಯೊಂದಿಗೆ ಗುರುತಿಸಲೇ ಬೇಕು, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.
  2. ಡಾ.ಜಗನ್ನಾಥ್ ರವರೇ 1120 ಕಳೆ-ಬೆಳೆ ಪಟ್ಟಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಲೇಬೇಕು, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.
  3. ಬನವಾಸಿ ಡಿ. ಮಹೇಶ್ ಕುಮಾರ್ ರವರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ನಿಖರವಾದ ಮಾಹಿತಿ ರೈತರಿಗೆ ಬೆರಳ ತುದಿಯಲ್ಲಿ ದೊರೆಯಬೇಕು. ಶೀಘ್ರವಾಗಿ ಬಿಡುಗಡೆ ಮಾಡಬೇಕು, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.
  4. ಸತ್ಯಾನAದ್ ಎಸ್ ರಾಜ್ ರವರೇ ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಈ ಎಲ್ಲಾ ಹಂತಗಳ ಮಾಹಿತಿಯೂ ಅಫ್ ಲೋಡ್ ಆಗಲೇ ಬೇಕು, ಶೀಘ್ರವಾಗಿ ಬಿಡುಗಡೆ ಮಾಡಬೇಕು, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.
  5. ಸುಹೃತ್‌ರವರೇ ಕೃಷಿ ಆಶ್ರಮಗಳ/ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಗಳ ಕಾರ್ಯವೈಖರಿ, ಒಂದು ಸ್ಟಾರ್ಟ್ ಅಫ್ ಆಗಬೇಕು. ಅಗುತ್ತೋ ಇಲ್ಲವೋ ತಿಳಿಸಿ, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.
  6. ಗೋವಿ0ದರಾಜುರವರೇ ಗ್ರಾಮ ಮಟ್ಟದಿಂದ ಇರುವ ನೌಕರರ/ಅಧಿಕಾರಿಗಳ ನಿಖರವಾದ ಪಟ್ಟಿಯನ್ನು, ಶೀಘ್ರವಾಗಿ ಬಿಡುಗಡೆ ಮಾಡಬೇಕು, ಅದಕ್ಕೆ ಏನೇನು ಆಗ ಬೇಕು ಎಂಬ ವಿವರ ಹಂಚಿಕೊಳ್ಳಿ.

ಕೇ0ದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ವ್ಯವಹರಿಸಬೇಕಾದರೆ, ನಮ್ಮ ಕೆಲಸ/ಅನುಭವ ಅಧಿಕಾರಿಗಳ  ಧ್ವನಿ’ ಯಾಗಬೇಕು. ಕಾಲ ಮಿತಿಯೊಂದಿಗೆ ಕೆಲಸಗಳು ಆಗಬೇಕು.

ದಿನಾಂಕ:04.05.2025 ರಂದು ತುಮಕೂರಿನ ಶಕ್ತಭವನದಲ್ಲಿ ಕೃಷಿ ಆಶ್ರಮಗಳ ಕೈಪಿಡಿ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು. ದಿನಾಂಕ:04.05.2026 ರಂದು ತುಮಕೂರಿನ ಶಕ್ತಭವನದಲ್ಲಿ ಕೃಷಿ ಆಶ್ರಮಗಳ ಕೈಪಿಡಿ ಬಿಡುಗಡೆಗೆ ದಿನಾಂಕ ನಿಗಧಿಗೊಳಿಸಲೇ ಬೇಕು.

ಕೃಷಿ ಆಶ್ರಮಗಳ ಕಾರ್ಯ ವೈಖರಿ ಬಗ್ಗೆ, ಒಂದು ವರ್ಷದಲ್ಲಿ ದೇಶದ ಪ್ರಧಾನ ಮಂತ್ರಿಯವರ ಮತ್ತು ಮುಖ್ಯ ಮಂತ್ರಿಯವರ ಗಮನಕ್ಕೆ ತರಲಾಗಿದೆ ಈ ಬಗ್ಗೆ ಅವರು ಮಾತನಾಡುವ ಹಾಗೆ ಮಾಡಲು ಆಸಕ್ತಿ ಇರುವ ಎಲ್ಲರೂ ಚುರುಕಾಗಬೇಕು.

ಇದು ನನ್ನ ಹೃದಯ ಪೂರ್ವಕ ಮನವಿ.