TUMAKURU:SHAKTHI PEETA FOUNDATION
ಭಾರತ ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ (ಬಿಎಂಸಿ)’ರಚಿಸಿದೆ. ‘ಪೀಪಲ್ ಬಯೋಡೈವರ್ಸಿಟಿ ರಿಜಿಸ್ಟಾರ್ (ಪಿಬಿಆರ್)’ ಎಂಬ ವರದಿಯನ್ನು ಸಿದ್ಧಪಡಿಸಿದೆ. ಈ ಆಕ್ಟ್ ಜಾರಿ ತಂದವರು ಯಾವ ಪ್ರಧಾನಮಂತ್ರಿಯವರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
ತಾವು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಪಿಡಿಓ ಅಥವಾ ಸಂಭAಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಸಮಿತಿಯಲ್ಲಿ ‘ನಾಲೇಡ್ಜ್ಬಲ್ ಪರ್ಸನ್, ನಾಟಿ ವೈಧ್ಯರು, ಪಾರಂಪರಿಕ ವೈದ್ಯರು ಮತ್ತು ಹಕೀಮರುಗಳನ್ನು ಸದಸ್ಯರನ್ನಾಗಿ ನೇಮಕ’ ಮಾಡಲು ಅವಕಾಶವಿದೆ.
ಪಿಬಿಆರ್ ವರದಿಯನ್ನು ಪಡೆದುಕೊಂಡು ನೋಡಿ, ಒಂದು ಜೆರಾಕ್ಸ್ ಪ್ರತಿಯನ್ನು ಪಡೆದುಕೊಳ್ಳಿ, ಈ ಪುಸ್ತಕ ಮಾಡಿದವರ ಮಾಹಿತಿ ಪಡೆದುಕೊಳ್ಳಿ, ಅವರೊಂದಿಗೂ ಸಮಾಲೋಚನೆ ನಡೆಸಿ.
ಕೃಷಿ ಆಶ್ರಮ / ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಆರಂಬಿಸುವ ತಾವುಗಳು ಸಹ ‘ನಾಲೇಡ್ಜ್ಬಲ್ ಪರ್ಸನ್’ ಗಳೇ ನಮ್ಮನ್ನು ಕಮಿಟಿಗೆ ಸೇರ್ಪಡೆ ಮಾಡಿ ಎಂದು ಮನವಿ ಸಲ್ಲಿಸಿ, ಇದರೊಂದಿಗೆ ಇದೂವರೆಗೂ ತಾವೂ ಕೈಗೊಂಡಿರುವ ಚಟುವಟಿಕೆಗಳ ಅಡಕಗಳನ್ನು ಲಗತ್ತಿಸಿ.
ಬಿಎಂಸಿ ಕಮಿಟಿಯ ಸದಸ್ಯರ ಪಟ್ಟಿಯನ್ನು ಪಡೆಯಿರಿ, ಅವರು ಕೊಡಲು ನೀರಾಕರಿದರೆ, ‘ಮಾಹಿತಿ ಹಕ್ಕು ಅಧಿನಿಯಮದ’ ಪ್ರಕಾರ ಪಡೆದುಕೊಳ್ಳಿ, ನಿಮ್ಮ ನಾಲೇಡ್ಜ್ ಬ್ಯಾಂಕ್ (ಪಿಸಿಕಲ್ ಲೈಬ್ರರಿ) ಡಾಕ್ಯುಮೆಂಟ್‌ಗಳ ಸಂಗ್ರಹ ಇಲ್ಲಿಂದ ಆರಂಭವಾಗಲಿ, ಈ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದು (ಡಿಜಿಟಲ್ ಲೈಬ್ರರಿ). ಸಮಿತಿಯ ಅಧ್ಯಕ್ಷರು, ಸದಸ್ಯಕಾರ್ಯದರ್ಶಿ ಮತ್ತು ಸದಸ್ಯರೊಂದಿಗೆ ಅನುಭವವನ್ನು ಯೂಟ್ಯೂಬ್‌ನಲ್ಲಿ ರೆಕಾರ್ಡ್ ಮಾಡುವುದು (ಹ್ಯೂಮನ್ ಲೈಬ್ರರಿ). ಇದೇ ‘ನಾಲೇಡ್ಜ್ ಬ್ಯಾಂಕ್ ತತ್ವ’.
ನಾನು ದಿನಾಂಕ:26.01.2026 ರಿಂದ ಆರಂಭಿಸಿರುವ ವಿವಿಧ ಹಂತಗಳು- ತಾವೂಗಳು ನಿಮ್ಮಿಷ್ಟದ ರೀತಿ ಆರಂಭಿಸಿ.
- 1 ನೇ ಹಂತ – ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ತುಮಕೂರು ಇವರು ನನ್ನ ಜಮೀನಿನ ಮಣ್ಣು ಪರೀಕ್ಷೆ ಮಾಡಲು ಸಂಗ್ರಹ ಮಾಡಿದರು ಮತ್ತು ನನಗೆ ಅಡಿಕೆ ಬಗ್ಗೆ ಮಾಹಿತಿ ಹಂಚಿಕೊAಡಿದ್ದಾರೆ.
- 2 ನೇ ಹಂತ-ಅಡಿಕೆ ಬೆಳೆ ತೋಟಗಾರಿಕಾ ಇಲಾಖೆಗೆ ಬರುವುದರಿಂದ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಜೊತೆಗೆ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಅಫ್ ಗ್ರೂಪ್ ರಚಿಸಿದ್ದೇನೆ, ಇದರಲ್ಲಿ ಕುಂದರನಹಳ್ಳಿಯಿAದ ದೆಹಲಿವರೆಗೂ ಅಧಿಕಾರಿಗಳನ್ನು ಸೇರ್ಪಡೆ ಮಾಡುತ್ತಿದ್ದೇನೆ.
- 3 ನೇ ಹಂತ- ಭಾರತ ದೇಶದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ‘ವೈಜ್ಞಾನಿಕ ಸಲಹಾ ಸಮಿತಿ’ ರಚಿಸಿದೆ. ಈ ಸಮಿತಿಯ ಸಭೆ ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೆವಿಕೆಯಲ್ಲಿ ದಿನಾಂಕ:30.01.2026 ನೇ ಶುಕ್ರವಾರ ನಡೆಯಲಿದೆ. ನಾನು ಸಹ ಈ ಸಮಿತಿಯ ಮಹತ್ವ ಅರಿತು ಕೊಳ್ಳಲು ಭಾಗವಹಿಸುತ್ತಿದ್ದೇನೆ. ನೀವೂಗಳು ಸಹ ನಿಮ್ಮ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ಅನುಭವದ ಮಾಹಿತಿಗಳನ್ನು ಹಂಚಿಕೊಳ್ಳಿ.
- 4 ನೇ ಹಂತ – ಬಯೋಡೈವರ್ಸಿಟಿ ಮ್ಯಾನೇಜ್‌ಮೆಂಟ್ ಕಮಿಟಿ. ನಾನು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ.
