4th February 2026
Share

TUMAKURU:SHAKTHIPEETA FOUNDATION

ಕೃಷಿ ವಿಚಾರಗಳ ಬಗ್ಗೆ ರೈತರು ಮಾಡುವ ಸಂಶೋದನೆಗಳನ್ನು, ಸಕ್ಷಮ ಪ್ರಾಧಿಕಾರಗಳ ಅನುಮೋದನೆಯೊಂದಿಗೆ ಕರಾರುವಕ್ಕಾದ ವಿಷಯಗಳನ್ನು ಹಂಚಿಕೊಳ್ಳುವ ಒಂದು ಯೂ ಟ್ಯೂಬ್  ಚಾನಲ್ ಅನ್ನು ಆರಂಭಿಸಲು, ಕೃಷಿ ಆಶ್ರಮ ವಾಟ್ಸ್ ಗುಂಪಿನ ಸದಸ್ಯರು ಆಗಿರುವ, ಸುಮಾರು 40 ವರ್ಷಗಳಿಂದ ಅವರ ತಾತನವರ ಸಂಪರ್ಕ ನನಗೆ ಇದ್ದ  ಒಂದು ಕುಟುಂಬ ಆಲೋಚನೆ ನಡೆಸುತ್ತಿದೆ.

ಮಗ ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜಿನಿಯರ್, ಪತಿ ಕೆಮಿಕಲ್ ಇಂಜಿನಿಯರ್  ಆಗಿದ್ದರೂ ಸಾವಯವ ಕೃಷಿಕರು, ಪತ್ನಿ ಸುಮಾರು ವರ್ಷಗಳಿಂದ ಒಂದು ವೃದ್ಧಾಶ್ರಮ ನಡೆಸಿದ ಅನುಭವ, ಸುಮಾರು ದೇಶಗಳ ಎನ್.ಆರ್.ಐ ಪರಿಚಯವೂ ಇರುವ ನಿಷ್ಠೂರವಾದಿ ಎಂದರೆ ತಪ್ಪಾಲಾಗರದು ಎಂದು ಕೊಂಡಿದ್ದೇನೆ.

ರಾಸಾಯನಿಕ ಕೃಷಿಯಿಂದ- ರಾಸಾಯನಿಕ ಮುಕ್ತ ಕೃಷಿ ಖರ್ಚು ವೆಚ್ಚಗಳ ಲೈವ್ ಡಾಟಾ ವಿಶ್ಲೇಷಣೆಗೆ ಆದ್ಯತೆ’ ರಾಜ್ಯದ ಮೂಲೆ ಮೂಲೆಯಲ್ಲಿನ ಕೃಷಿ ಸಂಶೋಧಕರನ್ನು, ಹುಡುಕಿ ಒಂದೇ ವೇದಿಕೆಗೆ ತರುವ ಪ್ರಾಮಾಣಿಕ ಪ್ರಯತ್ನ. ಸಂಪಾದನೆಯೊ0ದಿಗೆ ಸೇವೆ ಮಾಡುವ ಆಲೋಚನೆ ಇರಬಹುದು.

ಈ ಬಗ್ಗೆ ಆಸಕ್ತಿ ಇರುವವರು 9886774477  ಕರೆ ಮಾಡಿ ತಮ್ಮ ಅನುಭವ  ಹಂಚಿಕೊಳ್ಳಿ