TUMAKURU:SHAKTHIPEETA FOUNDATION
ದೇಶದ ಪ್ರತಿಯೊಂದು ಜಿಲ್ಲೆಗೂ ಬಾಲಕಿಯರ ವಿದ್ಯಾರ್ಥಿ ನಿಲಯ ಘೋಷಣೆ ಮಾಡಿದೆ, ಕೇಂದ್ರ ಸರ್ಕಾರ ನೇರವಾಗಿ ಕೆಲವು ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಕರ್ನಾಟಕ ರಾಜ್ಯಕ್ಕೆ ಹೈದರಾಬಾದ್ – ಬೆಂಗಳೂರು, ಚನ್ನೆöÊ – ಬೆಂಗಳೂರು ರೈಲ್ವೇ ಕಾರಿಡಾರ್, ಜಲ ಮಾರ್ಗ ಯೋಜನೆಗಳ ಅನುದಾನ ಬರಲಿದೆ.
ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗೆ ಮುಂದುವರೆದ ಅನುದಾನ ಬಂದೇ ಬರುತ್ತದೆ. ವಿವರವಾಗಿ ಅಧ್ಯಯನ ಮಾಡಿದಾಗ ಎಷ್ಟು ಅನುದಾನ ದೊರೆಯಲಿದೆ ಎಂಬ ಬಗ್ಗೆ ನಿಖರವಾಗಿ ಹೇಳಬಹುದಾಗಿದೆ. ಇದೊಂದು ಒಟ್ಟಾರೆ ಅಭಿವೃದ್ಧಿ ಪೂರಕವಾದ ಆಯವ್ಯಯವಾಗಿದೆ. ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಮತ್ತು ವಿತ್ತ ಸಚಿವರಾದ ಶ್ರೀಮತಿನಿರ್ಮಲ ಸೀತಾರಾಮ್ ರವರು ಬಹಳ ಕಸರತ್ತು ಮಾಡಿದ್ದಾರೆ, ಅವರ ಗುರಿ ವಿಕಸಿತ ಭಾರತ @ 2047 ಕ್ಕೆ ಪೂರಕವಾಗಿದೆ.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಸದಸ್ಯರು ಅವರ ಕೇತ್ರಗಳಿಗೆ ಪೂರಕವಾದ ಯೋಜನೆ ಆಯ್ಕೆ ಮಾಡಿಕೊಂಡು, ರಾಜ್ಯದ ಆಯವ್ಯಯದಲ್ಲಿ ನಮ್ಮ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಮೀಸಲಿಟ್ಟಾಗ ಮಾತ್ರ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಲು ವಿಫುಲ ಅವಕಾಶಗಳಿವೆ.
ಕರ್ನಾಟಕ ರಾಜ್ಯ ಸರ್ಕಾರ ಟೀಕೆ ಮಾಡುತ್ತಲೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿದೆ, ಇದರಲ್ಲಿ ಎರಡು ಮಾತಿಲ್ಲ. ರಾಜ್ಯ ಸರ್ಕಾರದ ಆಯವ್ಯಯದ ಮೇಲೆ ನಿರ್ಧಾರವಾಗಲಿದೆ.
ತುಮಕೂರು ಜಿಲ್ಲೆಗೆ ಹೆಚ್ಚು ಅನುದಾನ ತರಲು ವಿಫುಲ ಅವಕಾಶವಿದೆ.
ಆಯವ್ಯಯ ಗಮನಿಸಿದಾಗ, ಬಾಲಕಿಯರ ವಿದ್ಯಾರ್ಥಿ ನಿಲಯ, ಎನ್.ಆರ್.ಐ ಇಂಡಸ್ಟಿçಯಲ್ ಏರಿಯಾ, ನಗರಗಳಿಗೆ ಅನುದಾನ, ಎಸ್.ಹೆಚ್.ಇ ಮಾರ್ಟ್, ದಿವ್ಯಾಂಗಜನ್ ಕೌಷಲ್ಯ ಯೋಜನೆ, ಮೆಡಿಕಲ್ ಟೂರಿಸಂ ಹಬ್, ಕ್ರೀಡೆ, ಯೂನಿವರ್ಸಿಟಿ ಟೌನ್‌ಷಿಪ್ ಫಾರ್ಮರ್ ಕಾರಿಡಾರ್, ಫಾರ್ಮರ್ ಸಿಟಿ, ಕೃಷಿ ಸಂಶೋಧನ ನಗರ, ಕೋಕನಟ್ ಸ್ಪೆಷಲ್ ಎಕಾನಮಿಕ್ ಝೋನ್, ಸಿದ್ಧರಬೆಟ್ಟದಲ್ಲಿ ಆಯುಷ್ ಪಾರ್ಕ್, ಶ್ರೀಗಂದ ಕ್ಲಸ್ಟರ್, ಪ್ರವಾಸೋಧ್ಯಮ ಸರ್ಕ್ಯೂಟ್, ಹೇಮಾವತಿ ಮೈಕ್ರೋ ರ‍್ರಿಗೇಷನ್ ಯೋಜನೆ, ಹೀಗೆ ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಬಹುದಾಗಿದೆ.
ರೈಲ್ವೇ, ಹೈವೆ, ಇಂಡಸ್ಟಿçಯಲ್ ನೋಡ್, ಪವರ್ ಗ್ರಿಡ್, ಹೆಚ್.ಎ.ಎಲ್. ಇಸ್ರೋ, ಹೀಗೆ ಪ್ರಗತಿಯಲ್ಲಿರುವ ಯೋಜನೆಗಳಿಗೆ, ಅನುದಾನ ಬಳಕೆ ಪತ್ರ ನೀಡಿದಲ್ಲಿ, ಜಿಲ್ಲೆಗೆ ಹಾಲಿ ಪ್ರಗತಿಯಲ್ಲಿರುವ ಮುಂದುವರೆದ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ಬರಲಿದೆ. ಈಗಾಗಲೇ ಕೇಂದ್ರ ಸರ್ಕಾರದಲ್ಲಿರುವ ಯೋಜನೆಗಳಿಗೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ಆಧ್ಯತೆ ನೀಡಬೇಕಷ್ಟೆ.
-ಕುಂದರನಹಳ್ಳಿ ರಮೇಶ್, ಅಧ್ಯಕ್ಷ ಅಭಿವೃದ್ಧಿ ರೆವೂಲ್ಯೂಷನ್ ಫೊರಂ
