14th March 2026
Share

TUMAKURU:SHAKTHIPEETA FOUNDATION

ರಾಜ್ಯದಲ್ಲಿ ಜಿಲ್ಲೆ, ಜಿಲ್ಲೆಗಳ ಮಧ್ಯೆಯಲ್ಲಿ ಹೋರಾಟಗಳು ಆರಂಭವಾಗಿದೆ. ಎಲ್ಲಾ ವರ್ಗದವರ ಅಭಿಪ್ರಾಯಗಳನ್ನು ಗಣನೆಗೆ ತೆಗದುಕೊಂಡು, ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ, ಪ್ರತಿಯೊಂದು ನದಿ ಪಾತ್ರದ ಇಂತಿಷ್ಟು ನೀರನ್ನು, ಇಂತಹ ಪ್ರದೇಶಗಳಿಗೆ ಅಲೋಕೇಷನ್ ಮಾಡುತ್ತೇವೆ, ಎಂಬ ಒಂದು ಸಮಗ್ರ ನೀರಿನ ಬಳಕೆಯ’ ಕಾನೂನು ರೂಪಿಸಲು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು, ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್‍ರವರು ಹಾಗೂ ಕಾನೂನು ಮತ್ತು ಸಂಸದೀಯ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರಿಗೆ                             ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಒತ್ತಾಯಿಸಿದ್ದಾರೆ.

ಅವರು ದಿನಾಂಕ:02.01.2026 ರಂದು ತುಮಕೂರಿನ ಸಾಯಿಬಾಬಾ ಸಭಾಂಗಣದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಇದ್ದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಈಗಾಗಲೇ ಆಯವ್ಯಯದಲ್ಲಿ ಮಂಡಿಸಿರುವ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ನದಿ ಜೋಡಣೆಯಡಿಯಲ್ಲಿ ಗೋದಾವರಿ–ಕಾವೇರಿ-ಬೇಡ್ತಿ-ವರದಾ(ಹೀರೇವಡ್ಡಟ್ಟಿ) ಯೋಜನೆಯನ್ನು ಜಾರಿಗೊಳಿಸಲು ನಮ್ಮ ರಾಜ್ಯ ಸರ್ಕಾರವೂ ಮುಂದಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ.

ಗೋದಾವರಿ–ಕಾವೇರಿ ನದಿ ಜೋಡಣೆಯಲ್ಲಿ, ತೆಲಂಗಾಣ-43.64 ಟಿ.ಎಂ.ಸಿ, ಆಂದ್ರ ಪ್ರದೇಶ- 45.27, ಟಿ.ಎಂ.ಸಿ,  ತಮಿಳುನಾಡು-40.82 ಟಿ.ಎಂ.ಸಿ,  ಕರ್ನಾಟಕ -15.89 ಟಿ.ಎಂ.ಸಿ ಮತ್ತು ಪುದುಚೇರಿ – 2.30 ಟಿ.ಎಂ.ಸಿ ಹಾಗೂ ಕರ್ನಾಟಕ ರಾಜ್ಯಕ್ಕೆ ಬೇಡ್ತಿ-ವರದಾ(ಹೀರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯಲ್ಲಿ 18.50 ಟಿ.ಎಂ.ಸಿ ಅಡಿ ನೀರು ಸೇರಿದಂತೆ ಸುಮಾರು 166.42 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸುತ್ತಿದೆ.

ಈ ಯೋಜನೆಯಿಂದ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಲಿದೆ. ಅದೇ ರೀತಿ ಅಘಿನಾಶಿನಿ- ವೇದಾವತಿ(ವಾಣಿವಿಲಾಸ) ನದಿ ಜೋಡಣೆಯಿಂದ ಸುಮಾರು 35.10 ಟಿ.ಎಂ.ಸಿ ಅಡಿ ನೀರಿನ ಯೋಜನೆಯ ಅಧ್ಯಯನವೂ ನಡೆಯುತ್ತಿದೆ. ಇದರಿಂದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನೂಕೂಲವಾಗಲಿದೆ.

ಈ ಎರಡು ನದಿಜೋಡಣೆಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರವೂ ಸೇರಿದಂತೆ, ಗೋದಾವರಿ, ಕೃಷ್ಣಾ, ಪಾಲಾರ್, ಪೆನ್ನಾರ್, ಕಾವೇರಿ ನದಿ ಪಾತ್ರಗಳಿಗೂ ಅನೂಕೂಲವಾಗಲಿದೆ. ಕಾಳಿ ನದಿಯಿಂದ- ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ, ಕುಮಾರಧಾರ ನದಿ ನೀರನ್ನು – ಎತ್ತಿನೊಳೆ ಯೋಜನೆಗೆ,  ಲಿಂಗನಮಕ್ಕಿ ನೀರನ್ನು – ಬೆಂಗಳೂರಿಗೆ  ಹೀಗೆ ರಾಜ್ಯದ್ಯಾಂತ, ಆನೇಕ ಯೋಜನೆಗಳ ಅಧ್ಯಯನ ನಡೆಯುತ್ತಿದೆ. ತುಮಕೂರಿನ ಜಾಲಗುಣಿ ಸೇರಿದಂತೆ, ಸುಮಾರು 10 ಕಡೆ ಹೋಸದಾಗಿ ಬಪರ್ ಡ್ಯಾಂ’ ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗ ಬೇಕಿದೆ.

ಹೇಮಾವತಿ ಲಿಕಿಂಗ್ ಕೆನಾಲ್‍ಗೆ ನೇತ್ರಾವತಿ- ಹೇಮಾವತಿ ನದಿಜೋಡಣೆಯ(ಕುಮಾರಧಾರ) ನೀರನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ. ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ, ಪ್ರತಿಯೊಂದು ಪ್ರದೇಶಕ್ಕೂ ನದಿ ನೀರಿನ ಅಲೋಕೇಷನ್ ಮಾಡ ಬೇಕಿದೆ. ಇದಕ್ಕೂ ಸಹ ಅಧ್ಯಯನ ನಡೆಯುತ್ತಿದೆ. ಪ್ರತಿಯೊಂದು ಯೋಜನೆಗಳ ಕಡತದ ಅನುಸರಣೆಯನ್ನು ನಿರಂತರವಾಗಿ ಕುಂದರನಹಳ್ಳಿ ರಮೇಶ್ ಮಾಡುತ್ತಾ ಬಂದಿದ್ದಾರೆ.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ನದಿ ಜೋಡಣೆ(ಎನ್.ಪಿ.ಪಿ) ಯೋಜನೆ’ಯಡಿಯಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಶ್ರಮಿಸ ಬೇಕಿದೆ. ಹಲವಾರು ವರ್ಷಗಳ ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆಯಲಿದೆ. ‘ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ’  ಈ ಎಲ್ಲಾ ಯೋಜನೆಗಳಿಗೆ ಪೂರಕವಾಗಿದೆ. ‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನಕ್ಕೆ ಮುಕ್ತಿ ಸಿಗಲಿದೆ ಎಂದಿದ್ದಾರೆ.