4th February 2026
Share

 

 

TUMAKURU:SHAKTHIPEETA FOUNDATION

ನಾನು ಶಾಸ್ತ್ರ, ಜೋತಿಷ್ಯ, ಅಷ್ಟಮಂಗಳ ಯಾವುದನ್ನು ನಂಬುವುದಿಲ್ಲ ಮತ್ತು ವಿರೋಧಿಸುವುದು ಇಲ್ಲ. ನನ್ನ ಆರಾಧ್ಯ ಶಕ್ತಿದೇವತೆ ಹೇಳಿದ ಹಾಗೆ ಕೇಳುವವನು ನಾನು. ಕೃಷಿ ಟ್ರೆಡಿಷನಲ್ ನಾಲೇಡ್ಜ್ ಅಧ್ಯಯನ ಮಾಡುತ್ತಿರುವಾಗ ಅಗ್ರೋಸ್ಪೇಸ್ ಗೋವಿಂದರಾಜು ಈ ಫೋಟೋ ಕಳುಹಿಸಿದ್ದಾರೆ.

ಮೈಸೂರಿನ ಕೃಷ್ನಮೂರ್ತಿ ದಂಪತಿಗಳು ನಾವು ಆಧ್ಯಾತ್ಮ ಕೃಷಿ ಮಾಡುತ್ತಿದ್ದೇವೆ, ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುತ್ತೇವೆ ಎಂದು ಸಮಾಲೋಚನೆ ನಡೆಸಿದ್ದಾರೆ.

ಹೀರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಸಭೆಯಲ್ಲಿ, ತುಮಕೂರು ಜಿಲ್ಲೆಯ ಕೃಷಿ ಇಲಾಖೆಯ ಜಂಟಿನಿರ್ದೇಶಕರಾದ ಲಕ್ಷ್ಮಣ್ ರವರು, ಭಾರತದ ಕೃಷಿ ಇತಿಹಾಸದ ಬಗ್ಗೆ ಮಾತನಾಡುವಾಗ ಈ ಫೋಟೋದಲ್ಲಿ ಇರುವ ಕೆಲವು ಮಾದರಿಯ ಕೃಷಿಗಳ ಬಗ್ಗೆ ವಿಷಯ ಹಂಚಿಕೊಂಡರು.

ನಾನು ಮತ್ತು ಸತ್ಯಾನಂದ್ ಎಸ್ ರಾಜ್ ರವರು ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ ಚರ್ಚೆ ಮಾಡುವಾ ಈ ಅಂಶಗಳನ್ನು ಸೇರ್ಪಡೆ ಮಾಡಿ ಎಂದು ತಿಳಿಸಿದೆ.

ಆಗ ಅವರು ಸೈಂಟಿಫಿಕ್ ವಾಸ್ತು ಕೃಷಿ ಮತ್ತು ವೇದಿಕ್ ವಾಸ್ತು ಕೃಷಿ’ ಬಗ್ಗೆ ವಿಷಯ ಹಂಚಿ ಕೊಂಡರು, ಆಗ ನನಗೆ ಕುತೋಹಲ ಇನ್ನೂ ಹೆಚ್ಚಾಯಿತು. ಹಾಗಾದರೆ ಒಂದು ಕೆಲಸ ಮಾಡಿ ನಾವು ಬೇರೆಯವರೊಂದಿಗೆ, ಈ ಬಗ್ಗೆ ಮಾತನಾಡುವಾಗ  ನಮ್ಮ ಜಮೀನಿನನಲ್ಲಿ ಪ್ರಾಯೋಗಿಕವಾಗಿ ಆರಂಭಿಸೋಣ ಎಂಬ ತೀರ್ಮಾನಕ್ಕೆ ಬಂದೆವು.

ಶಕ್ತಿಪೀಠ ಫಾರ್ಮರ್ ಕಾರಿಡಾರ್’ ಅಂದರೆ ಆಸಕ್ತ ರಾಸಾಯಿನಿಕ ಕೃಷಿಯಿಂದ – ರಾಸಾಯಿನಿಕ ಮುಕ್ತ ಕೃಷಿ’ ಮಾಡುವವರಿಗೆ ಬಾಡಿಗೆ, ಗುತ್ತಿಗೆ ಆಧಾರಿತ ಅಥವಾ ಫಾರ್ಮರ್ ಪಿಪಿಪಿ ಮಾದರಿಯಲ್ಲಿ ಕೃಷಿ ಮಾಡುವವರಿಗೆ, ಕನೆಕ್ಟ್ ಮಾಡುವ ಒಂದು ಆಲೋಚನೆ.

ಈಗಾಗಲೇ ‘ಗುಬ್ಬಿ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಹಿರಿಯೂರು ವಿಧಾನ ಸಭಾ ಕ್ಷೇತ್ರ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳಲ್ಲಿ’ ಎನ್.ಆರ್.ಐ ರವರಿಂದ ಜಮೀನು ಕರಾರು ಮಾಡಿಸಿಕೊಳ್ಳಲಾಗಿದೆ.

ಅಂತಹ ಒಂದು ಜಮೀನನಲ್ಲಿ ದಿನಾಂಕ:02.02.2026 ರಂದು ಅಷ್ಟಮಂಗಳ ಪ್ರಶ್ನೆ ಮೂಲಕ ಆರಂಭಿಸೋಣ ಎಂದು, ಅಷ್ಟಮಂಗಳ ಪ್ರಶ್ನೆ ಮಾಡುವವರನ್ನು  ಕರೆದುಕೊಂಡು ಅಲ್ಲಿಗೆ ಹೋದೆವು.

‘ಅಲ್ಲಿ ಅವರು ಹೇಳಿದ್ದು, ಇಲ್ಲಿ ನನಗೆ ಎಲ್ಲಿ ನೋಡಿದರೂ ನೀರೆ ಕಾಣುತ್ತೆ, ಇದೂ ಒಂದು ನೀರಿನ ಸಂಗ್ರಹದ ಡ್ಯಾಂ ನಂತಿದೆ, ಯಾವುದೋ ಕಾರಣದಿಂದ ಹಾಳಾಗಿದೆ, ಮುಂದೊಂದು ದಿನ ಇಲ್ಲಿ ನೀರು ನಿಲಲ್ಲಿದೆ ಎಂದರು’.

ನನಗೆ ಪರಮಾಶ್ಚರ್ಯ ಕಾರಣ ಕಳೆದ 40 ವರ್ಷಗಳಿಂದ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನವರು ಇಲ್ಲಿ ಒಂದು ‘ಬಫರ್ ಡ್ಯಾಂ’ ನಿರ್ಮಾಣ ಮಾಡಬಹುದು ಎಂದು ಮಾಹಿತಿ ನೀಡಿದ್ದರು. ಬಸವರಾಜ್ ಬೊಮ್ಮಾಯಿರವರು ಜಲಸಂಪನ್ಮೂಲ ಸಚಿವರಾಗಿದ್ದಾಗ, ಹೇಮಾವತಿ ಫ್ಲಡ್ ಪ್ಲೋ ಕೆನಾಲ್ ಯೋಜನೆ ಸಮೀಕ್ಷೆ ಮಾಡುವಾಗ ಇದೇ ಜಾಗದಲ್ಲಿ ಜಾಲಗುಣಿ ಬಫರ್ ಡ್ಯಾಂ’ ನಿರ್ಮಾಣ ಮಾಡಲು ನಕ್ಷೆ ಸಿದ್ಧವಾಗಿತ್ತು. ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜ್ ರವರು ಕಳೆದ 40 ವರ್ಷದಿಂದದಲೂ ಇಲ್ಲಿ ಡ್ಯಾಂ ಮಾಡಿಸುತ್ತೇವೆ ಎಂದು ಹಬ್ಬರಿಸುತ್ತಾ ಇದ್ದಾರೆ.

ಅಷ್ಟೇ ಏಕೆ ಜಿ.ಎಸ್.ಬಸವರಾಜ್ ರವರು ಇಂದು (02.02.2026) ಪತ್ರಿಕಾ ಘೋಷ್ಠಿ ನಡೆಸಿದಾಗಲೂ, ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಅಷ್ಟ ಮಂಗಳ ಪ್ರಶ್ನೆ ಮಾಡುವವರಿಗೆ ಇನ್ನೂ ವಿವರವಾಗಿ ಹೇಳಲು ಮನವಿ ಮಾಡಲಾಗಿದೆ.

ಲಿಂಗನಮಕ್ಕಿ ನೀರನ್ನು ತಂದು ಇಲ್ಲಿ ಡ್ಯಾಂ ಕಟ್ಟಿ, ಬೆಂಗಳೂರಿಗೆ ಕುಡಿಯುವ ಸರಬರಾಜು ಮಾಡಲು ಈಗಲೂ ಅಧ್ಯಯನ ನಡೆಯುತ್ತಿದೆ. ಇದೊಂದು ಕಾಕತಾಳೀಯ ಎನಿಸಿತು. ಮುಂದೆ ಇಲ್ಲಿ ಡ್ಯಾಂ ನಿರ್ಮಾಣ ಮಾಡಬಹುದಾ ಎಂದು ಕೇಳಿದಾಗ, ಅವರು ಹೇಳಿದ ಮಾತು, ‘ನೀವು ಮತ್ತು ನಾನು ಯಾರು ಡ್ಯಾಂ ನಿರ್ಮಾಣ ಮಾಡಿಸಲು ಗಂಗಾ ಮಾತೆಯೇ ಇಲ್ಲಿ ಡ್ಯಾಂ ನಿರ್ಮಾಣ ಮಾಡಿಸಿಕೊಳ್ಳುತ್ತಾಳೆ, ಇದು ಶತಸಿದ್ಧ’ ಎಂದರು.

ನಂಬುವವರು ನಂಬಿ, ಟೀಕೆ ಮಾಡುವವರು ಟೀಕೆ ಮಾಡಿ. ನಾನಂತೂ ಇದು ವೈಜ್ಞಾನಿಕವೋ,   ಮೂಡನಂಬಿಕೆಯೋ, ಇತಿಹಾಸವೋ, ನಂಬಿಕೆಯೋ ಎಂಬ ಬಗ್ಗೆ ಆಳವಾದ ಸಂಶೋದನೆ ಮಾಡಲೇ ಬೇಕು ಎನಿಸುತ್ತಿದೆ.

ಅಷ್ಟೇ ಅಲ್ಲ 5 ವಿಧಾನಸಭಾ ಕ್ಷೇತ್ರದ ಗುತ್ತಿಗೆ ಜಮೀನು ಮಾಡಿಸುವಾಗ, ಇದು ಒಂದು ಡಾಕ್ಯುಮೆಂಟ್ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ಗೆ, ರವಾನಿಸಿ ದಾಖಲೆ ಸಹಿತ ಸಂಶೋಧನಾ ಮಾಹಿತಿ ಪಡೆಯುವುದ ನನ್ನ ಗುರಿಯಾಗಿದೆ.

ಬಗ್ಗೆ ಪರ-ವಿರೋಧ ಜ್ಞಾನವುಳ್ಳವರು 98864477 ಕರೆ ಮಾಡಿ.