TUMAKURU:SHAKTHI PEETA FOUNDATION
ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಮತ್ತು ಭಾರತ ಸರ್ಕಾರದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ರವರು ಮಂಡಿಸಿರುವ, ಕೇಂದ್ರ ಸರ್ಕಾರದ 2026-27 ಆಯವ್ಯಯಕ್ಕೆ ಪೂರಕವಾಗಿ, ರೈತರ ಸಹಭಾಗಿತ್ವದಲ್ಲಿ ವಿವಿಧ ಕೆಳಕಂಡ ಫಾರ್ಮರ್ ಕಾರಿಡಾರ್ ಪ್ರಸ್ತಾವನೆಯನ್ನು, ಮಾನ್ಯ ಮುಖ್ಯಮಂತ್ರಿಯವರಿAದ, ಮಾನ್ಯ ಪ್ರಧಾನ ಮಂತ್ರಿಯವರಿ0ದ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ.
ಹಾಗೂ ಈ ಯೋಜನೆಗಳಿಗೆ ಪೂರಕವಾಗಿ, ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಅನುದಾನ ಮೀಸಲಿಡಲು, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರ ಜೊತೆ ಸಮಾಲೋಚನೆ ಮಾಡುವ ಅಗತ್ಯವಿದೆ. ಈಗಾಗಲೇ ಮಾನ್ಯ ಮುಖ್ಯ ಮಂತ್ರಿಯವರು ಮತ್ತು ಕೃಷಿ ಸಚಿವರು, ಮುಖ್ಯಕಾರ್ಯದರ್ಶಿಯವರು, ಅವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಈಗಾಗಲೇ ಒಂದೆರಡು ಸಭೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಶೀಘ್ರದಲ್ಲಿ ದಿನಾಂಕ, ಸಮಯ ಮತ್ತು ಸ್ಥಳ ನಿಗಧಿ ಮಾಡಿ ತಿಳಿಸಲಾಗುವುದು.
ಕೃಷಿ ಆಶ್ರಮಕ್ಕೆ ಹಲವಾರು ಜನರನ್ನು ಮೆಂಟರ್ ಮತ್ತು ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ, ಎಂದು ಕೃಷಿ ಆಶ್ರಮಗಳ ಹರಿಕಾರರಾದ ಡಾ.ನಾಗಭೂಷಣ್ ರವರು ಪ್ರಕಟಿಸಿದ್ದಾರೆ, ಅವರೆಲ್ಲರ ಮಾರ್ಗದರ್ಶನದ ಅಗತ್ಯವಿದೆ.
ಡಾ.ಜಗನ್ನಾಥ್ ರವರು 1120 ಅಳಿವಿನಂಚಿನಲ್ಲಿರುವ ಮತ್ತು ವಿವಿಧ 19 ಇಲಾಖೆಗಳ ಪ್ರಬೇಧಗಳನ್ನು ಗುರುತಿಸಿದ್ದಾರೆ, ಇದು ಈಗ ಅನೂಕೂಲಕ್ಕೆ ಬರಲಿದೆ.
- ಜೊತೆಗೆ ರಾಜ್ಯದಲ್ಲಿ ಸುಮಾರು 8-10 ರೈತ ಸಂಘಟನೆಗಳು ರಾಜ್ಯ ಮಟ್ಟದಲ್ಲಿ ಇವೆಯಂತೆ.
- ಸಾವಯವ, ನೈಸರ್ಗಿಕ ಕೃಷಿ, ಅಗ್ರಿ ಟೂರಿಸಂ ಹೀಗೆ 10 ಕ್ಕೂ ಹೆಚ್ಚು ಸಂಘಟನೆಗಳು ಆಂದೋಲನ ಮಾಡುತ್ತಿವೆಯಂತೆ.
- ನಾಟಿ ವೈಧ್ಯರು, ಪಾರಂಪರಿಕ ವೈದ್ಯರು ಮತ್ತು ಹಕೀಮರು ಸಂಘಟನೆಗಳು 10-12 ಇವೆಯಂತೆ, ಈ ಎಲ್ಲಾ ಸಂಘಟನೆಗಳು ಸಹ ರಾಜ್ಯ ಸರ್ಕಾರದ ಗಮನ ಸೆಳೆಯುವುದು ಸೂಕ್ತವಾಗಿದೆ.
ಇಲ್ಲಿ ಗುಂಪುಗಾರಿಕೆ, ಪ್ರತಿಷ್ಟೆ ಅಥವಾ ರಾಜಕೀಯಗಳನ್ನೂ ಬದಿಗಿಟ್ಟು ಒಗ್ಗಟ್ಟಾಗಿ ಶ್ರಮಿಸ ಬೇಕಿದೆ.
ಆಯವ್ಯಯ ಭಾಷಣದ ಕ್ರಮಸಂಖ್ಯೆವಾರು ಪಟ್ಟಿ ಮಾಡಲಾಗಿದೆ. ವಿತ್ತ ಸಚಿವರ ಆಯವ್ಯಯದ ಭಾಷಣ ಪ್ರತಿಯನ್ನು ಅಧ್ಯಯನ ಮಾಡಿ, ಇನ್ನೂ ಯಾವುದಾದರೂ ಫಾರ್ಮರ್ ಕಾರಿಡಾರ್ ಸೇರ್ಪಡೆ ಮಾಡಲು, ನಮ್ಮ ರಾಜ್ಯದಲ್ಲಿ ಅವಕಾಶವಿದೆಯೇ, ಎಂಬ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಲು, ಈ ಮೂಲಕ ಮನವಿ ಮಾಡಲಾಗಿದೆ.
- ಕೇರ್ ಇಕೋ ಸಿಸ್ಟಮ್ ಫಾರ್ಮರ್ ಕಾರಿಡಾರ್(54)
- ಆಯುಷ್ ಟೂರಿಸಂ ಫಾರ್ಮರ್ ಕಾರಿಡಾರ್(55-56-57
- ಅನಿಮಲ್ ಹಸ್ಬೆಂಡರಿ ಫಾರ್ಮರ್ ಕಾರಿಡಾರ್(59-77)
- ಟೂರಿಸಂ ಫಾರ್ಮರ್ ಕಾರಿಡಾರ್(65)
- ಡಿಜಿಟಲ್ ನಾಲೇಡ್ಜ್ ಗ್ರಿಡ್ ಫಾರ್ಮರ್ ಕಾರಿಡಾರ್(68)
- ವೇಸ್ರ‍್ನ್ ಘಾಟ್ಸ್ ಟ್ರೆಕ್ಕಿಂಗ್ ಆಂಡ್ ಹೀಕಿಂಗ್ ಫಾರ್ಮರ್ ಕಾರಿಡಾರ್(69)
- ಕೋಸ್ಟಲ್ ಅಗ್ರಿ ಟೂರಿಸಂ ಫಾರ್ಮರ್ ಕಾರಿಡಾರ್(69)
- ಫಿಷರಿಶ್ ಫಾರ್ಮರ್ ಕಾರಿಡಾರ್(76)
- ಕೋಕನಟ್ ಫಾರ್ಮರ್ ಕಾರಿಡಾರ್ (78-79)
- ಶ್ರೀಗಂದ ಫಾರ್ಮರ್ ಕಾರಿಡಾರ್(78-81)
- ಕೋಕೋ ಫಾರ್ಮರ್ ಕಾರಿಡಾರ್(78-80)
- ಕ್ಯಾಸುನೆಟ್ ಫಾರ್ಮರ್ ಕಾರಿಡಾರ್(78-80)
- ಭಾರತ್ ವಿಸ್ತಾರ್ ಫಾರ್ಮರ್ ಕಾರಿಡಾರ್(83)
- ಶಿಮಾರ್ಟ್ ಬೆಂಗಳೂರು- ಪುಣೆ ಲಕ್ಪತಿಕ ದೀದಿ ಫಾರ್ಮರ್ ಕಾರಿಡಾರ್(84)
ಕರ್ನಾಟಕ ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರಗಳು ಒಳಗೊಂಡ0ತೆ, ಕ್ಲೆöÊಮ್ಯಾಟಿಕ್ ಝೋನ್ ಮತ್ತು ಅವಕಾಶಗಳ ಆಧಾರದಲ್ಲಿ ಆಯ್ಕೆ ಮಾಡುವುದು ಸೂಕ್ತವಾಗಿದೆ.
-ಕುಂದರನಹಳ್ಳಿ ರಮೇಶ್, ಮಾಜಿ ಸದಸ್ಯ, ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ
