11th February 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ರೈತರ ಸಹಭಾಗಿತ್ವದಲ್ಲಿ, ತಲಾ 5 ರಂತೆ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು, ಕೃಷಿ ಆಶ್ರಮಗಳ/ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್ ಸಹಭಾಗಿತ್ವದಲ್ಲಿ ಶಕ್ತಿಪೀಠ ಫೌಂಡೇಷನ್ ಶ್ರಮಿಸುತ್ತಿದೆ, ಎಂದು ತಿಳಿಸಲು ಹರ್ಷಿಸುತ್ತೇನೆ.

ಡಾ.ಜಗನ್ನಾಥ್‌ರವರು ಸಂಶೋಧನೆ ಮಾಡಿ ನೀಡಿರುವ 1120 ಕಳೆ-ಬೆಳೆ ನರ್ಸರಿಯನ್ನು ಆರಂಭಿಸಲು, ದಿನಾಂಕ:27.02.2026 ರಂದು, ಭೂಮಿ ಶುದ್ಧಿ ಪೂಜಾ ಕಾರ್ಯಕ್ರಮವನ್ನು,  ವಿಶ್ವದ 108 ಶಕ್ತಿಪೀಠಗಳ ನೇತೃತ್ವದಲ್ಲಿ  ನಿಗಧಿ ಪಡಿಸಲಾಗಿದೆ.

ಫೆಭ್ರವರಿ 20 ರೊಳಗೆ, ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್ ಡಿಜಿಟಲ್ ಪ್ಲಾಟ್ ಫಾರಂ ಆಪ್ ಬಿಡುಗಡೆ ಮಾಡಲಾಗುವುದು. ಯಾರು, ಯಾರು ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಈಗಾಗಲೇ ಡಾ.ನಾಗಭೂಷಣ್ ರವರೊಂದಿಗೆ ನೊಂದಾಯಿಸಿ ಕೊಂಡಿದ್ದಿರೋ ಹಾಗೂ ನೊಂದಾಯಿಸಿ ಕೊಳ್ಳಲು ಇಚ್ಚಿಸಿದ್ದೀರೋ ಅಂಥವರು ಮಾನಸಿಕವಾಗಿ ಸಿದ್ಧವಾಗಿರಿ. ನೀವೂ ಆಯ್ಕೆ ಮಾಡಿಕೊಳ್ಳುವ ಕಳೆ-ಬೆಳೆಯ ಬೀಜ, ಬಳ್ಳಿ, ಕಡ್ಡಿ, ಗಿಡ ಹೀಗೆ ಯಾವುದೇ ಇದ್ದರೂ ಸಂಗ್ರಹಿಸಿ ತರಲು ಸಹ ಮನವಿ ಮಾಡಲಾಗಿದೆ.

ಶಕ್ತಿಪೀಠ ಫೌಂಡೇಷನ್ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು, ಅಗತ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಂಜೂರು ಮಾಡಿಸಿ, ಆಸಕ್ತ ರೈತರ ಮನೆಬಾಗಿಲಿಗೆ,  ತಲುಪಿಸುವ ಆಲೋಚನೆ ಮಾಡುತ್ತಿದೆ. ಮಂಜೂರಾದ ಬಳಿಕಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗಧಿ ಪಡಿಸುವ, ಸೇವಾ ಶುಲ್ಕವನ್ನು ಡಿಜಿಟಲ್ ಮೂಲಕ ಪಾವತಿಸುವ ಎಂ.ಓ.ಯು’ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

‘ಯಾರಿಗಾದರೂ ನಗದು ನೀಡಿ ಟೋಪಿ ಹಾಕಿಸಿಕೊಂಡರೇ ನಮ್ಮ ಜವಾಬ್ಧಾರಿಯಲ್ಲ’ ಇಚ್ಚಿಸುವ ರಾಜ್ಯದ ಯಾವುದೇ ರೈತರು, 10 ವರ್ಷ ನಿರಂತರವಾಗಿ ರಾಸಾಯನಿಕ ಕೃಷಿಯಿಂದ ರಾಸಾಯನಿಕ ಮುಕ್ತ ಕೃಷಿ’ ಯ ಆದಾಯ, ಖರ್ಚು ವೆಚ್ಚಗಳ ಡಿಜಿಟಲ್ ಡಾಟಾ ಅನಾಲೀಸಿಸ್ ಮಾಡಲು ಸಿದ್ಧವಾಗಿರ ಬೇಕು.

ನಮ್ಮ ಪರಿಕಲ್ಪನೆಗೆ ಜ್ಞಾನದಾನ ಮಾಡುವವರಿಗೂ ಬಹಿರಂಗ ಆಹ್ವಾನ, ವಿಶ್ವದ ಸುಮಾರು 54 ದೇಶಗಳ ಎನ್.ಆರ್.ಐ ಗಳು ಸಹ, ಅವರು ಇರುವ ದೇಶಗಳಲ್ಲಿನ ಕೃಷಿ ಪದ್ಧತಿ ಹಂಚಿಕೊಳ್ಳಲು ಈಗಾಗಲೇ ಮುಂದೆ ಬಂದಿದ್ದಾರೆ. ರಾಜ್ಯದಲ್ಲಿ ಎನ್.ಆರ್.ವಿಲೇಜ್ ಸ್ಥಾಪಿಸಿ ಹೆಲ್ತ್ ಆಯುಷ್ ಟೂರಿಸಂ’ ಪ್ರಚಾರ ಮಾಡಲು ಸಹ  ಚರ್ಚೆ ಆರಂಭವಾಗಿದೆ. ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲು ಈಗಾಗಲೇ ಮಾಸ್ಟರ್ ಪ್ಲಾನ್ ಸಹ ಸಿದ್ಧವಾಗುತ್ತಿದೆ.

ವಿಕಸಿತ ಭಾರತ @ 2047 ಮತ್ತು ನಂಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿ, ವಿಭಿನ್ನ ರಾಜಕೀಯ ಪಕ್ಷಗಳ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಸಹ ಮುಕ್ತ ಮನಸ್ಸಿನಿಂದ ರೈತರಿಗೆ ಬೆಂಬಲಿಸುವ ಭರವಸೆ ನೀಡಿದ್ದಾರೆ.

ಒಂದು ಇಂಜಿನಿಯರಿ0ಗ್ ಕಾಲೇಜು ಸಹ ಆಕ್ಟಿವಿಟಿ ಪಾಯಿಂಟ್ಸ್ ಯೋಜನೆಯಡಿಯಲ್ಲಿ, 224 ವಿಧಾನಸಭಾ ಕ್ಷೇತ್ರಗಳ ರೈತರೊಂದಿಗೆ ಶ್ರಮಿಸಲು ಸಹ ಸಮಾಲೋಚನೆ ಆರಂಭವಾಗಿದೆ. 27 ರಂದು ಎಂ.ಓ.ಯು ಸಹಿ ಹಾಕಲು ಸಿದ್ಧತೆ ನಡೆಯುತ್ತಿದೆ. ಆ ಕಾಲೇಜಿನ ವಿದ್ಯಾರ್ಥಿಗಳು ವಿಶ್ವದ ಹಲವಾರು ದೇಶಗಳಲ್ಲಿದ್ದಾರೆ, ಅವರು ಸಹ ಮುಂದೆ ಬಂದಿರುವುದು ಹೆಮ್ಮೆಯ ವಿಚಾರ.

ನರ್ಸರಿ ಮತ್ತು ಗಿಡಗಳನ್ನು ಸರಬರಾಜು ಮಾಡುವ  ಸಲಹಾಗಾರರನ್ನು, ನಿರ್ಧಿಷ್ಟ ದರಗಳೊಂದಿಗೆ ಸಂಪರ್ಕಿಸಲು, ಬಹಿರಂಗ ಮನವಿ ಮಾಡಲಾಗಿದೆ.