11th February 2026
Share

 TUMAKURU:SHAKTHIPEETA FOUNDATION

848 ವರ್ಷಗಳ ಹಿಂದೆ ನಮ್ಮೂರಿಗೆ ಬಂದು ನೆಲಸಿರುವ, ದೇವಿಯ ಇತಿಹಾಸ ತಿಳಿದುಕೊಳ್ಳುವುದು ನಮ್ಮ ಆಧ್ಯ ಕರ್ತವ್ಯ.  ನಾನು ಜೋತಿಷ್ಯ, ಶಾಸ್ತç, ಅಷ್ಟಮಂಗಳ ನಂಭುವವನಲ್ಲ, ವಾಸ್ತು ನಂಬುತ್ತೇನೆ. ಆದರೇ ಇದು ಒಂದು ವಿಜ್ಞಾನ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ನಾನು ಪ್ರೂವ್ ಮಾಡುತ್ತೇನೆ, ಎಂಬ ನಿಖರವಾದ ಒಬ್ಬ ಗೂರೂಜಿಯವರ ಮಾತಿನ ಮೇಲೆ ನಂಬಿಕೆ ಇಟ್ಟು, ಗಂಗಮಾಳಮ್ಮ ದೇವಿಯ ಇತಿಹಾಸದ ಸಂಶೋಧನೆ ಮಾಡಲು ದೇವಿ ಆದೇಶಿಸಿದ್ದಾಳೆ.

ಖರ್ಚು ವೆಚ್ಚಗಳಿಗೂ ಒಬ್ಬ ಭಕ್ತರನ್ನು ಹೊಂಚಿ ಕೊಟ್ಟಿದ್ದಾರೆ ಆ ತಾಯಿ. ಈಗಾಗಲೇ ಅವರು ರೂ 10000 ಗಳನ್ನು ಗೂರೂಜಿಯವರಿಗೆ ಮುಂಗಡವಾಗಿ ನೀಡಲು, ಶಕ್ತಿಪೀಠ ಫೌಂಡೇಷನ್ ಖಾತೆಗೆ ಜಮಾ ಮಾಡಿದ್ದಾರೆ. ನಾನು ಅವರಿಗೆ ಈಗಾಗಲೇ ಡಿಜಿಟಲ್ ಪೇಮೆಂಟ್ ಮಾಡಿದ್ದೇನೆ. ಗೂರೂಜಿ ಸತ್ಯಾನಂದ್, ಮತ್ತು  ದಾನಿಗಳಾದ ಸಿದ್ದಗಂಗಪ್ಪಮನವರನ್ನು ಈ ಗ್ರೂಪ್‌ಗೆ ಸೇರ್ಪಡೆ ಮಾಡಲಾಗಿದೆ.

ದಯವಿಟ್ಟು ಗಮನಿಸಿ ಈ ಗ್ರೂಪ್ ಗೆ ನಮ್ಮೂರಿನವರೇ, ನ್ಯಾಯದೀಶರಾದ ಓಂಕಾರ್‌ರವರು, ಒಬ್ಬ ಉನ್ನತ ಮಟ್ಟದ ನಿವೃತ್ತ ಪೋಲೀಸ್ ಅಧಿಕಾರಿಯಾದ ಹಂಡನಹಳ್ಳಿ ರೇವಣ್ಣನವರು  ಸಹ ಸೇರ್ಪಡೆ ಆಗಲಿದ್ದಾರೆ.

ಗೂರೂಜಿಯವರೇ ವೈಜ್ಞಾನಿಕ ಸಂಶೋದನೆ ಮಾಡಿ, ಮೂಲ ದೇವತೆ ಇರುವ ಈಗಿನ ಪಾಕಿಸ್ತಾನ ಅಥವಾ ಅಖಂಡ ಬಾರತದ ಯಾವುದೇ ಪ್ರದೇಶದಲ್ಲಿ ಇರಲಿ, ನಮ್ಮ ಖರ್ಚಿನಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ. ನಮಗೆ ನಿಖರವಾದ ವರದಿ ನೀಡಿ ಎಂದು ಈ ಗ್ರೂಪ್‌ನಲ್ಲಿ ಇರುವ ಭಕ್ತರ ಮತ್ತು  ಕುಂದರನಹಳ್ಳಿ ಗ್ರಾಮಸ್ಥರ ಪರವಾಗಿ ಮನವಿ ಮಾಡಲಾಗಿದೆ.

ಬಹಳ ಜನರನ್ನು ಗ್ರೂಪ್ ಅಡ್ಮಿನ್ ಮಾಡಲಾಗಿದೆ. ಕುಂದರನಹಳ್ಳಿ ಗ್ರಾಮಸ್ಥರು, ಮದುವೆ ಆಗಿ ಹೋಗಿರುವವರು, ಊರುಬಿಟ್ಟು ಹೋಗಿರುವವರು ಮತ್ತು ದೇವಿಯ ಮನೆತನದ ಎಲ್ಲಾ ಗ್ರಾಮದವರನ್ನು ಸೇರ್ಪಡೆ ಮಾಡಿ.

ದೇವಿಯ ಇತಿಹಾಸ ನನಗಂತೂ ಕೂತೋಹಲ ಮಾಡಿಸಿದೆ.