TUMAKURU:SHAKTHIPEETA FOUNDATION
ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯ ನಿರ್ಣಯದಂತೆ, ಕೆಳಕಂಡ 19 ಇಲಾಖೆಗಳ 1120 ಪ್ರಭೇಧಗಳ ಪಟ್ಟಿಯನ್ನು, ದಿನಾಂಕ:09.02.2026 ರಂದು ಪರಿಸರ ತಜ್ಞ ಡಾ.ಜಗನ್ನಾಥ್‌ರಾವ್ ರವರು ನೀಡಿದ್ದಾರೆ.
- AGRICULTURE
- ANIMAL HUSBANDARY
- AYUSH
- BABMBOO MISSION
- BIOTECHNOLOGY
- CASHEW BOARD
- CIMAP
- CULTURE
- ECOLOGY AND ENVIRONMENT
- ENDOWMENT
- FISHERIES
- FOREST
- HANDICRAFT
- HORTICULTURE
- SERICULTURE
- SPICE BOARD
- URBAN
- WATER RESOURCE
- WILDLIFE
ಅಗ್ರೋಸ್ಪೇಸ್‌ನ ಗೋವಿಂದರಾಜುರವರು ಪಟ್ಟಿಗಾಗಿ ಕಾಯುತ್ತಿದ್ದಾರೆ, ಆದರೆ ಜಗನ್ನಾಥ್‌ರವರು ಅನುಮತಿ ನೀಡದೇ ನಾನು ಯಾರಿಗೂ ಕೊಡಬಾರದು ಎಂಬುದು ನನ್ನ ಅಭಿಪ್ರಾಯ.
ನಮ್ಮ ಮುಂದಿರುವ ಆಯ್ಕೆಗಳು.
- ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕ ಮೊದಲನೇ ಹಂತದಲ್ಲಿ, ಈ ಪಟ್ಟಿಯಲ್ಲಿರುವ 19 ಇಲಾಖೆಗಳ ಜೊತೆ ಪತ್ರ ವ್ಯವಹರಿಸಿ, ಇದೂವರೆಗೂ ನಡೆಸಿರುವ ಅಧ್ಯಯನ ಮತ್ತು ಸಂಶೋದನಾ ವರದಿಗಳು ಇವೆಯೇ, ಎಲ್ಲಾದರೂ ನರ್ಸರಿ ಮಾಡಿದ್ದಾರೇಯೇ, ಇಲಾಖಾವಾರು ಈ ರೀತಿ ಪಟ್ಟಿ ಮಾಡಲಾಗಿದೇಯೇ ಎಂಬ ಮಾಹಿತಿಗಳನ್ನು ಸಂಗ್ರಹ ಮಾಡಿಸಲು ಮನವಿ ಸಲ್ಲಿಸಲಾಗುವುದು.
- ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಮನವಿ ಸಲ್ಲಿಸಿ, ರೈತರ ಆದಾಯ ಹೆಚ್ಚಿಸಲು ಯಾವ ರೀತಿ ಅನೂಕೂಲವಾಗಲಿದೆ ಎಂಬ ಬಗ್ಗೆ ಅಧ್ಯಯನ ಮಾಡಲು ಎಲ್ಲಾ 19 ಇಲಾಖೆಗಳಿಗೂ ಪತ್ರ ಬರೆಸಿ ಮಾಹಿತಿ ಸಂಗ್ರಹಿಸಲು ಶ್ರಮಿಸಲಾಗುವುದು.
- ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ, ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ 19 ಇಲಾಖೆಗಳಿಗೆ ಪತ್ರ ಬರೆದು, ಮೇಲ್ಕಂಡ ಮಾಹಿತಿಗಳನ್ನು ಸಂಗ್ರಹಿಸುವುದರ ಜೊತೆಗೆ 19 ಇಲಾಖೆಗಳ ನೋಡೆಲ್ ಆಫೀಸರ್‌ಗಳನ್ನು ಆಹ್ವಾನಿಸಿ ಒಂದು ಕಾರ್ಯಾಗಾರ ಆಯೋಜಿಸಲು ಕೋರಲಾಗುವುದು.
- ಈ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಮುಂದೆ ಬರುವ ಕೃಷಿ ಆಶ್ರಮಗಳಿಗೆ/ ರೈತರಿಗೆ ಒಂದು ಮಾರ್ಗದರ್ಶಿ ಸೂತ್ರವನ್ನು ಸಿದ್ಧಪಡಿಸಲು, ಇಲಾಖಾವಾರು ಮನವಿ ಸಲ್ಲಿಸುವುದು ಸೂಕ್ತವಾಗಿದೆ.
- ಈ ಬಗ್ಗೆ ಜ್ಞಾನವಿರುವ ಒಬ್ಬ ಸಲಹಾಗಾರರನ್ನು/ಸಲಹಾಗಾರ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಆಸಕ್ತರು ಡಾ.ನಾಗಭೂಷಣ್ ರವರನ್ನು ಸಂಪರ್ಕಿಸ ಬಹುದು.
ಆಸಕ್ತರ ಜ್ಞಾನಿಗಳು ಸೂಕ್ತ ಸಲಹೆ, ಮಾರ್ಗದರ್ಶನ ನೀಡಲು ಬಹಿರಂಗ ಮನವಿ ಮಾಡಲಾಗಿದೆ.
PLS COMMENT
COFFEE BOARD
WAQF BOARD
REVENUE
COMMERCE AND INDUSTRY
ANY OTHER DEPARTMENT ?
