ಮುಂದಿನ ಆಯವ್ಯಯದಲ್ಲಿ : ಫಾರ್ಮರ್ ಸಿಟಿ/ಫಾರ್ಮರ್ ಕಾರಿಡಾರ್/ಕೃಷಿ ಸಂಶೋದನಾ ನಗರ/ ಕೃಷಿ ಆಶ್ರಮ/ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಘೋಷಣೆ ?
TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರನ್ನು ದಿನಾಂಕ:20.02.2026 ರಂದು ಬೆಂಗಳೂರಿನಲ್ಲಿ, ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ಭೇಟಿ ಮಾಡಲಾಯಿತು.
ಮುಂದಿನ ಆಯವ್ಯಯದಲ್ಲಿ, ಫಾರ್ಮರ್ ಸಿಟಿ/ಫಾರ್ಮರ್ ಕಾರಿಡಾರ್/ಕೃಷಿ ಸಂಶೋದನಾ ನಗರ/ ಕೃಷಿ ಆಶ್ರಮ/ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಘೋಷಣೆ ಮಾಡುವ ಮತ್ತು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆಯುವ ಬಗ್ಗೆ ಹಿರಿಯ ನಾಯಕರು ಸಮಾಲೋಚನೆ ನಡೆಸಿದರು.
ಮುಖ್ಯ ಮಂತ್ರಿಯವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲು ಮತ್ತು ಕೃಷಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ರವರೊಂದಿಗೆ ಚರ್ಚಿಸಲಾಯಿತು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಲಾಯಿತು. ಅವರ ಕಚೇರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಯಿತು.
ವಿಶ್ವದ ವಿವಿಧ ದೇಶಗಳ, ದೆಹಲಿಯ, ಬೆಂಗಳೂರಿನ, ಮೈಸೂರಿನ ಮತ್ತು ತುಮಕೂರಿನ ಹಲವಾರು ತಜ್ಞರುಗಳ ತಂಡ ನಿರಂತರವಾಗಿ ಪರಿಕಲ್ಪನಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ.
