6th March 2026
Share

TUMAKURU:SHAKTHIPEETA FOUNDATION

2026-27 ಸಾಲಿನ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಗ್ಯಾರಂಟಿ ಯೋಜನೆಗಳ ನೋವಿನಲ್ಲೂ, ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆಯಲು ಪೂರಕವಾಗಿರುವ ಯೋಜನೆಗಳನ್ನು ಮಂಡಿಸಿದ್ದಾರೆ. ನಂಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

11 ಜಿ ಮಾದರಿ ಆರ್ಥಿಕತೆ ನಿಜಕ್ಕೂ ಉತ್ತಮವಾದ ದೂರದೃಷ್ಠಿ ಯೋಜನೆ, ದೇಶದ ಜಿಡಿಪಿಗಿಂತ ಉತ್ತಮ ಜಿಡಿಪಿ ಬೆಳವಣಿಗೆ, ದೇಶದ ಶೇ 26.7 ರಷ್ಟು ವಿದೇಶಿ ಬಂಡವಾಳ ಹೂಡಿಕೆ,  ಕೇಂದ್ರ ಸರ್ಕಾರದ ವಿರುದ್ದ 15 ನೇ ಹಣಕಾಸಿನ ಹಂಚಿಕೆಯ ಬಗ್ಗೆ ಗಟ್ಟಿ ಧ್ವನಿ  ಎತ್ತಿ ದೇಶದ ಗಮನ ಸೆಳೆದ ಕರ್ನಾಟಕ ಸರ್ಕಾರದ, ಮನವಿಗೆ ಸ್ಪಂಧಿಸಿದ ಕೇಂದ್ರ ಸರ್ಕಾರದ ನಿಲುವಿಗೆ ಸ್ವಾಗತ ಮಾಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಸುಮಾರು 532 ಅಂಶಗಳಲ್ಲಿ ಬಹುತೇಕ ಯೋಜನೆಗಳು ಉತ್ತಮವಾಗಿವೆ, ಕೇಂದ್ರ ಸರ್ಕಾರದ ಆಯವ್ಯಯದ ಅನುದಾನವನ್ನು ಬಳಸಿಕೊಂಡು, ಅಭಿವೃದ್ಧಿಗೆ ಪೂರಕವಾಗಿವೆ.  ಕೇಂದ್ರ ಸರ್ಕಾರವನ್ನು ಸದಾ ಟೀಕಿಸುತ್ತಿದ್ದ ರಾಜ್ಯ ಸರ್ಕಾರ ಈ ಭಾರಿ ಹಲವು ಕಡೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸ್ವಾಗತಿಸಿರುವುದು, ನಿಜಕ್ಕೂ ಯಾವುದೇ ಪಕ್ಷದ ಸರ್ಕಾರವಿದ್ದರೂ ಒಳ್ಳೆಯ ಯೋಜನೆಗಳಿಗೆ ಬೆಂಬಲಿಸುವುದು ಮಾನವೀಯತೆ ಗುಣವಾಗಿದೆ.

ಆಯವ್ಯಯದಲ್ಲಿ ತುಮಕೂರಿಗೆ ಕಂಡಿದ್ದು

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೂ ತೃಪ್ತಿ ಇಲ್ಲದೆ ಇರಬಹುದು. ಗ್ರೇಟರ್ ತುಮಕೂರು ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಬಹಳ ಕನಸು ಹಂಚಿಕೊAಡಿದ್ದರು.

  1. ಕೊರಟಗೆರೆ ತಾಲ್ಲೋಕಿನಲ್ಲಿ ಎತ್ತಿನಹೊಳೆ ಯೋಜನೆಯ ಡ್ಯಾಂ(ದೊಡ್ಡ ಡ್ಯಾಂ ಹೋಗಿ ಸಣ್ಣ ಡ್ಯಾಂ)
  2. ಗಣಿಭಾದಿತ ಹಣದಿಂದ ಜಿಲ್ಲೆಗೆ ಸಮಗ್ರ ಅರೋಗ್ಯ
  3. ಜಿಲ್ಲಾ ಮಟ್ಟದಲ್ಲಿ ಬಾಲಕರ ಮತ್ತು ಬಾ¯ಕಿಯರÀ ಎರಡು ವಿದ್ಯಾರ್ಥಿ ನಿಲಯ (ಪ್ರತಿ ಜಿಲ್ಲೆಗೂ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಸಹಭಾಗಿತ್ವದ ಬಾಲಕೀಯರ ಹಾಸ್ಟೆಲ್ ಇರಬಹುದು)
  4. ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಂದಿರದ ಅಭಿವೃದ್ಧಿಗೆ ರೂ 3 ಕೋಟಿ
  5. ತುಮಕೂರು ನಗರದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಕ್ಕೆ ರೂ 3 ಕೋಟಿ
  6. ಸಾರಿಗೆ ಇಲಾಖೆಯ ಸೀಜಿಂಗ್ ಯಾರ್ಡ್ಗೆ ರೂ 5 ಕೋಟಿ
  7. ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ರೂ 6 ಕೋಟಿ

–              ಕುಂದರನಹಳ್ಳಿ ರಮೇಶ್, ಮಾಜಿ ಸದಸ್ಯ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕರ್ನಾಟಕ, ಭಾರತ ಸರ್ಕಾರ.