13th November 2024
Share

ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ಏಕೈಕ ಗುರಿ ಎನ್ನುವ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಿದ್ಧಪಡಿಸುತ್ತಿರುವ 2020-2021 ಮುಂಗಡ ಪತ್ರಕ್ಕೆ ರಾಜ್ಯದ ಸಾವಿರಾರು ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಮಾನ್ಯ ಪ್ರಧಾನ ಮಂತ್ರಿಯವರು ಜಾರಿಗೆ ತಂದಿರುವ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಜಾರಿ ಮಾಡಿದ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ಜೊತೆಗೆ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಪಡೆದ ರಾಜ್ಯ ನಮ್ಮದಾಗ ಬೇಕು ಎಂಬ ಸಂಕಲ್ಪ ಯಡಿಯೂರಪ್ಪನವರದ್ದಾಗಿದೆ.
ನಾಡಿನ ಜನತೆಯ ಅಗತ್ಯಕ್ಕೆ ಅನುಗುಣವಾಗಿ ಯೋಜನೆಗಳ ಜಾರಿ ಮಾಡಿ ಎಲ್ಲಾ ವರ್ಗದ ಜನತೆಯ ಮನಗೆಲ್ಲಲು ಸಾಕಷ್ಟು ಕಸರತ್ತು ಆರಂಭಿಸಿದ್ದಾರೆ. ಶಕ್ತಿ ಪೀಠ ಫೌಂಡೇಷನ್ ಮುಂಗಡ ಪತ್ರದ ತಯಾರಿಯ ಬೆನ್ನತ್ತಿ ಜನತೆಗೆ ಮತ್ತು ಅಧಿಕಾರಿಗಳಿಗೆ ಮನಮುಟ್ಟಿಸುವ ಮಹತ್ಕಾರ್ಯಕ್ಕೆ ಮುಂದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ-2018 ರಲ್ಲಿ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆಯಲ್ಲಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಹಣೆ ಬರಹ ಹೊತ್ತ ಬೃಹತ್ ಪ್ರಣಾಳಿಕೆಯನ್ನು ಹೊರತಂದಿದೆ. ಅವುಗಳ ಜಾರಿ ಮುಂದಿನ ಅವಧಿಯ ವಿಷನ್ ಡಾಕ್ಯುಮೆಂಟ್ ಅಗಬೇಕಾಗಿದೆ.
ಜೊತೆಗೆ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ರಾಜ್ಯದ ಯಾವ ಯಾವ ಯೋಜನೆಗಳಿಗೆ ಆಧ್ಯತೆ ನೀಡಬೇಕು ಎಂಬ ಬಗ್ಗೆಯೂ ಒಂದು ಚಿಂತನ- ಮಂಥನ ಆರಂಭವಾಗಿದೆ. ಈ ಎಲ್ಲಾ ಕಸರತ್ತುಗಳ ಹಿಂದಿನ ಶ್ರಮವನ್ನು ರಾಜ್ಯದ ಜನತೆಗೆ ಅರಿವು ಮೂಡಿಸುವ ಒಂದು ಪ್ರಯತ್ನ ನಮ್ಮದಾಗಿದೆ.
ತಮ್ಮಗಳ ಸಲಹೆ, ಅಭಿಪ್ರಾಯ ಮತ್ತು ಮಾರ್ಗದರ್ಶನವೂ ಒಂದು ಅಭಿವೃದ್ಧಿ ಮೆಟ್ಟಿಲು ಆಗಲಿದೆ, ಆದ್ದರಿಂದ ತಾವೂ ಕೈಜೋಡಿಸಲು ಮನವಿ. ಈ ರಾಜ್ಯದಲ್ಲಿರುವ ಡೇಟಾಗಳ ಬಗ್ಗೆ ಬರೆಯಲು ಸಹ ಭಯ ಹುಟ್ಟಿಸಿದೆ. ಒಂದೊಂದು ವರದಿಯಲ್ಲಿ ಒಂದೊಂದು ಡೇಟಾ ಇದೆ. ಮೊದಲು ಡೇಟಾ-1 ಕರ್ನಾಟಕ ರಾಜ್ಯ-1 ಹಾಗೂ ಮ್ಯಾಪ್-1 ಕರ್ನಾಟಕ ರಾಜ್ಯ-1 ಆಗಬೇಕಾಗಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, 28 ಲೋಕಸಭಾ ಕ್ಷೇತ್ರಗಳ, 30 ಜಿಲ್ಲೆಗಳ 6022 ಗ್ರಾಮ ಪಂಚಾಯಿತಿಗಳ, 281 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 29340 ಗ್ರಾಮಗಳ ವ್ಯಾಪ್ತಿಯಲ್ಲಿ ವಿಲೇಜ್-1 ಮತ್ತು ನಗರ ಪ್ರದೇಶಗಳ ಬಡಾವಾಣೆವಾರು ಬಡಾವಾಣೆ-1 ಜಾರಿಗೊಳಿಸುವ ಮೂಲಕ ತಾಜಾ ಮಾಹಿತಿಯ ಡೇಟಾ ರಾಜ್ಯ ಮಾಡಲು ರಾಜ್ಯದ ಜನತೆ ಬಿಎಸ್‌ವೈರವರಿಗೆ ಸಲಹೆ ನೀಡಿದ್ದಾರೆ. ಇದು ಮೋದಿಯವರ ಪ್ರಥಮ ಆಧ್ಯತೆಯೂ ಆಗಿದೆ.