ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಪಡೆದ ರಾಜ್ಯವಾಗಿಸಲು ಶ್ರಮಿಸಲು ಮುಂದಾಗಿದೆ. ಕಳೆದ ಕೆಲವಾರು ವರ್ಷಗಳಿಂದ ಈ ಪ್ರಯತ್ನಕ್ಕೆ ಕೈಹಾಕಿದೆ.
ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರ 2016 ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪರಿಶೀಲನೆಗಾಗಿ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಮನ್ವಯತೆ ಸಾಧಿಸಲು ದಿಶಾ (DISHA – DISTRICT DEVELOPMENT COORDINATION AND MONITORING COMMITTEE) ಸಮಿತಿ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ಲೋಕಸಭಾ ಸದಸ್ಯರಿಗೆ, ದೇಶದ ಪ್ರತಿಯೊಂದು ಜಿಲ್ಲೆಯ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಈ ಸಮಿತಿಯಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಬಳಸುವ ಪ್ರತಿಯೊಂದು ರೂಗಳ ಮಾಹಿತಿ ಇರಬೇಕು. ಆದರೇ ಈವರೆಗೂ ಈ ಕೆಲಸವನ್ನು ಯಾವೊಬ್ಬ ಲೋಕಸಭಾ ಸದಸ್ಯರು ಸಹ ಮಾಡಿಲ್ಲ.
ಅಷ್ಟೆ ಏಕೆ ಕೇಂದ್ರ ಸರ್ಕಾರ ರಾಜ್ಯ ಮಟ್ಟದಲ್ಲಿ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸುವ ಮಹತ್ಕಾರ್ಯ ಮಾಡಿದೆ. ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ದಿಶಾ ಸಮಿತಿಯನ್ನೆ ರಚಿಸಿಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮೂಲದ ಕಾರಣದ ಹುಡುಕಾಟ ಆರಂಬವಾಗಿದೆ.
ಪ್ರಸ್ತುತ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಮೂಲಕ ಪತ್ರ ಬರೆದು ಗಮನ ಸೆಳೆಯಲಾಗಿದೆ. ಮಾನ್ಯ ಮಂತ್ರಿಯವರ ಕಚೇರಿಯಲ್ಲಿರುವ ಬಿಎಸ್‌ವೈ ಟೀಂ ನ ಒಬ್ಬ ಅಧಿಕಾರಿಯವರು ಸಹ ನನ್ನ ಚಿಂತನೆಗೆ ಧ್ವನಿಗೂಡಿಸಿದ್ದಾರೆ. ಅವರ ಹೆಸರು ಬರೆಯುವುದು ಸೂಕ್ತವಲ್ಲವೋನೋ ಎಂದು ಹೆಸರು ಬರೆದಿಲ್ಲ. ಅವರು ಒಪ್ಪಿದಲ್ಲಿ ಬರೆಯುವೆ.
ದಿಶಾ ಕರ್ನಾಟಕದ ಸಮಿತಿ ರಚಿಸುವ ಕಡತ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಸಚಿವರ ಕಚೇರಿಯಲ್ಲಿ ಇದೆ ಎಂದು ತಿಳಿದು ಬಂದಿದೆ. ಸನ್ಮಾನ್ಯ ಸಚಿವರಾದ ಶ್ರೀ ಕೆ.ಎಸ್.ಈಶ್ವಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಲು ಸಮಯವೇ ಕೂಡಿ ಬಂದಿಲ್ಲ. ಚುನಾವಣೆ ಕಾವು ಕಳೆದಿದೆ ಈಗ ಭೇಟಿಮಾಡಬೇಕಿದೆ.
ನೋಡಿ ಈವರೆಗೂ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಮಾಹಿತಿ ಒಂದು ಕಡೇ ಕ್ರೋಢಿಕೃತವಾಗಿಲ್ಲ, ಒಂದೊಂದು ಒಂದು ಕಡೇ ಇದೆ. ನಾನು ಈ ಬಗ್ಗೆ ದೆಹಲಿ ಪ್ರತಿನಿಧಿ, ದೆಹಲಿ ರೆಸಿಡೆಂಟ್ ಕಮೀಷನರ್, ಮುಖ್ಯ ಮಂತ್ರಿಗಳ ಕಚೇರಿ, ಮುಖ್ಯ ಕಾರ್ಯದರ್ಶಿಗಳ ಕಚೇರಿ, ಯೋಜನಾ ಇಲಾಖೆ ಹೀಗೆ ಎಲ್ಲಾ ಕಚೇರಿಗಳಲ್ಲಿಯೂ ಅಧ್ಯಯನ ಮಾಡಿರುವ ಪ್ರಕಾರ ಎಲ್ಲವೂ ಒಂದು ಕಡೇ ಇಲ್ಲ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಬೇಕಿದೆ ಅವರೇ ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. ಈ ಸಮಿತಿ ಚುರುಕದಾರೆ ನನ್ನ ಚಿಂತನೆಗೆ ಆನೆ ಬಲ ಬರಲಿದೆ.