27th July 2024
Share

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನವಾದ ದಿನಾಂಕ:25.12.2019 ರಂದು ನೂತನವಾಗಿ ಅಟಲ್ ಭೂಜಲ್ ಯೋಜನೆ ಜಾರಿಗೊಳಿಸುತ್ತಿದೆ. ಯೋಜನೆಯಿಂದ ಕರ್ನಾಟಕ ರಾಜ್ಯಕ್ಕೂ ವರದಾನವಾಗಲಿದೆ.

 ಕರ್ನಾಟಕ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳ 78 ಜಿಲ್ಲೆಗಳ 193 ತಾಲ್ಲೂಕಗಳ, 8353 ಗ್ರಾಮ ಪಂಚಾಯತ್ ವ್ಯಾಪ್ತಿಗೆ ಯೋಜನೆಯ ಲಾಭವಾಗಲಿದೆ.

  5 ವರ್ಷದಲ್ಲಿ ಸುಮಾರು 1037.46  ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯದ 14 ಜಿಲ್ಲೆಗಳ 1199 ಗ್ರಾಮ ಪಂಚಾಯಿತಿಗಳಿಗೆ ಅನೂಕೂಲವಾಗುವ ಯೋಜನೆಯಿಂದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ 30, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 28, ಮಧುಗಿರಿಯ 39 ಮತ್ತು ಕೊರಟಗೆರೆ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳು ಸೇರಿದಂತೆ 125 ಗ್ರಾಮ ಪಂಚಾಯಿತಿಗಳಿಗೂ ನೆರವು ದೊರೆಯಲಿದೆ.

  ತುಮಕೂರಿನ ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಮಾಧವರವರು ಮತ್ತು ಎಸ್.. ಡಿ.ಎಸ್.ಹರೀಶ್ ರವರು ನನಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ ಯೋಜನೆ ಜಾರಿ ಮಾಡಿಸಿದರೆ ರಾಜ್ಯಕ್ಕೆ ಅನೂಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದರು. ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಯೋಜನೆಯ ಅನುಕೂಲದ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತುಕಾಕತಾಳಿಯವಾಗಿ ಅವರು ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯರು ಆದರು. ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಹಕಾರದಿಂದ ಯೋಜನೆ ಸಾಕಾರಾವಾಗುತ್ತಿದೆ.

   ರಾಜ್ಯ ಸರ್ಕಾರವೂ ಮುಂಗಡ ಪತ್ರದಲ್ಲಿ ರಾಜ್ಯದ ಎಲ್ಲಾ ಗ್ರಾಮಪಂಚಾಯಿತ್ಗಳಿಗೂ ಯೋಜನೆ ಜಾರಿಮಾಡಿದಲ್ಲಿ ನಿಖರವಾದ ನೀರಿನ ಲೆಕ್ಕ ಸಿಗಲಿದೆ. ಪ್ರಧಾನ ಮಂತ್ರಿಕೃಷಿ ಸಿಂಚಾಯಿ ಯೋಜನೆ ಮಾಡುವಾಗ ನೀರಿನ ಆಡಿಟ್, ನೀರಿನ ಬಡ್ಜೆಟ್ ಮತ್ತು ನೀರಿನ ಸ್ಟ್ರಾಟಜಿಯನ್ನು ಕರಾರುವಕ್ಕಾಗಿ ಮಾಡಿಲ್ಲ. ಈಗ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹಣ ಬಿಡುಗಡೆಯಾಗುವುದರಿಂದ ಗ್ರಾಮವಾರು ಸರಿಯಾದ ಮಾಹಿತಿಯ ಲಭ್ಯವಾಗಲಿದೆ. ಶ್ರೀ ಜೆ.ಸಿ.ಮಾಧುಸ್ವಾಮಿಯವರು ಪ್ರಮುಖ ಪಾತ್ರ ವಹಿಸಬೇಕಾಗಿದೆ.

   ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಜಲಗ್ರಾಮ ಕ್ಯಾಲೆಂಡರ್ ಮಾಡುವ ಮೂಲಕ ಗ್ರಾಮವಾರು ಹನಿ ನೀರಿನ ಮಾಹಿತಿ ಮತ್ತು ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ಜಾರಿಗೊಳಿಸಲು ಸಮಾಲೋಚನೆ ನಡೆಸಲಾಗಿತ್ತು. ಬಸವರಾಜ್ ರವರ ಮನವಿಗೆ ಸ್ಪಂದಿಸಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಹ ಫೈಲೆಟ್ ಯೋಜನೆಯಾಗಿ ತುಮಕೂರು ಜಿಲ್ಲೆಯನ್ನು ಆಯ್ಕೆ ಮಾಡಿ ಇಡೀ ರಾಜ್ಯಕ್ಕೆ ವಿಸ್ತರಿಸಲು ಆದೇಶಿಸಿದ್ದರು.

  ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರು ಹಾಗೂ ಶ್ರೀ ಜಿ.ಎಸ್.ಬಸವರಾಜ್ರವರು ಸಹ ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಜಲಶಕ್ತಿ ಸಚಿವರ ಗಮನ ಸೆಳೆದಿದ್ದರು.