21st December 2024
Share

  ಮಾಜಿ ಮುಖ್ಯ ಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ದದ ನಾಯಕರಾದ ಶ್ರೀ ಸಿದ್ಧರಾಮಯ್ಯ ನವರು ಮತ್ತು ಮಾಜಿ ಜಲ ಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರಿಗೆ ಕೃತಜ್ಞತೆ ಸಲ್ಲಿಸಲೇ ಬೇಕು. ತುಮಕೂರಿನ ಆಗಿನ ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಭಿವೃದ್ಧಿ ಅಧ್ಯಯನ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದಾಗ ಅವರಿಬ್ಬರು ನೀಡಿದ ಸಹಕಾರ ಅಭಿನಂದನೀಯ.

 ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಗ ಕುಲಪತಿಗಳಾಗಿದ್ದ ಶ್ರೀ ಎ.ಹೆಚ್. ರಾಜಾಸಾಬ್ ಮತ್ತು ತುಮಕೂರು ಜಿಲ್ಲಾಧಿಕಾರಗಳಾಗಿದ್ದ ಶ್ರೀ ಕೆ.ಪಿ.ಮೋಹನ್‌ರಾಜ್‌ರವರ  ಸಲಹೆ ಮೇರೆಗೆ ಅಧ್ಯಯನ ಪೀಠ ಆರಂಭಿಸುವಾಗ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತನ್ನ ಪಾಲಿನ ರೂ 50 ಲಕ್ಷ ಹಣವನ್ನು ದೇಣಿಗೆ ಅಥವಾ ಸರ್ಕಾರದ ವತಿಯಿಂದ ನೀಡುವ ಭರವಸೆಯನ್ನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ನೀಡಿತ್ತು.

   ಆದರೇ ಅಷ್ಟು ಹಣ ಒದಗಿಸುವುದು ಕಷ್ಟವಾಗಿತ್ತು. ಸರ್ಕಾರಕ್ಕೆ ಅನುದಾನ ನೀಡಲು ಫೋರಂ ಮನವಿ ಸಲ್ಲಿಸಿದಾಗ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿ, ಆಗಿನ ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್, ವಿಶ್ವೇಶ್ವರಯ್ಯ ನಿಗಮದ ವ್ಯವಸ್ಥಾಪಕ ನಿರ್ಧೇಶಕ ಶ್ರೀ ಕೆ.ಜೈಪ್ರಕಾಶ್ ಮತ್ತು ಜಲಸಂಪನ್ಮೂಲ ಸಚಿವರ ಆಪ್ತಕಾರ್ಯದರ್ಶಿಯಾಗಿದ್ದ ಶ್ರೀ ಪಾಟೀಲ್ ರವರ ಸಹಕಾರ ನಿಜಕ್ಕೂ ಮೆಚ್ಚುವಂತದ್ದು.

  ಬಸವರಾಜ್ ಮಾಜಿಯಾಗಿದ್ದರು, ತುಮಕೂರಿನ ಯಾವುದೇ ರಾಜಕಾರಣಿಗಳ ಸಹಕಾರವಿಲ್ಲದೆ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಹಣ ಬಿಡುಗಡೆ ಮಾಡಿಸುವುದು ಸುಲಭದ ಕೆಲಸವಲ್ಲ. ಆದರೂ ಸಹ ಶ್ರೀ ಸಿದ್ಧರಾಮಯ್ಯನವರು ಇದು ತುಮಕೂರಿನ ಬಸವರಾಜ್‌ರವರ ಕೇಸು ಒಳ್ಳೆಯ ಕೆಲಸ ಎಂದು ಆದೇಶ ಮಾಡಿದ್ದು ಇತಿಹಾಸ.

ಶ್ರೀ ಎಲ್.ಕೆ.ಅತೀಕ್‌ರವರಿಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಹೇಳಿದ ಮಾತು ಅತೀಕ್ ಅವರೇ ನಾನು ಮುಖ್ಯಮಂತ್ರಿಗಳ ಬಳಿ ಹೋಗುವುದು ಬೇಡ ನೀವು ಮತ್ತು ಶ್ರೀ ರಾಕೇಶ್ ಸಿಂಗ್ ಮಾತನಾಡಿ ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಿ, ರಾಜಾಸಾಬ್ ನಿವೃತ್ತಿ ಹೊಂದುವ ವೇಳೆಗೆ ಪೀಠ ರಚನೆಯಾಗಲಿ ಎಂದು ಹೇಳಿದ ಮಾತಿಗೆ ಮರು ಮಾತನಾಡದೆ ಎರಡೇ ದಿವಸದಲ್ಲಿ ಆದೇಶ ಹೊರಬಿದ್ದಿತ್ತು.

   ಆದರೇ ತುಮಕೂರು ವಿಶ್ವವಿದ್ಯಾನಿಲಯದ ಸಣ್ಣತನದಿಂದ ನಾವು ಅಂದುಕೊಂಡ ರೀತಿಯಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ. ಆದರೂ ಹಠ ಬಿಡದ ಛಲ ವಿಕ್ರಮನಂತೆ ಜಿ.ಎಸ್.ಬಸವರಾಜ್‌ವರವರ ತಂಡ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಭಿವೃದ್ಧಿ ಅಧ್ಯಯನ ಆರಂಭಿಸಲಾಯಿತು.

  ದೇವರ ದಯೆ ಶ್ರೀ ಜಿ.ಎಸ್.ಬಸವರಾಜ್‌ವರು ಮತ್ತೆ ಲೋಕಸಭಾ ಸದಸ್ಯರಾದರು ಮತ್ತು   ಕೇಂದ್ರ ಸರ್ಕಾರದ  Jalshakthi ಸಚಿವಾಲಯದ Consultative Committee For The Ministry Of Jalshakthi ಗೂ ಸದಸ್ಯರಾದರು ಈಗ ವಿಶ್ವದ, ದೇಶದ, ಕರ್ನಾಟಕದ ಪ್ರತಿಯೊಂದು ಹನಿ ನೀರಿನ ಅಧ್ಯಯನಕ್ಕಾಗಿ ಶಕ್ತಿಪೀಠ ಫೌಂಡೇಷನ್ ಮುಂದಾಗಿದೆ.

 ಶ್ರೀ ಜಿ.ಎಸ್.ಬಸವರಾಜ್‌ವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಸಹಕಾರದಿಂದ ಕೆರೆಗಳಿಗೆ ನದಿ ನೀರು ತುಂಬಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲು ಮುಂದಾಗಿದ್ದಾರೆ.

ತಾವು ಮತ್ತು ತಮ್ಮ ಪಕ್ಷದ ಎಲ್ಲಾ ನಾಯಕರು ಕುಳಿತು ಚರ್ಚಿಸಿ ಯೋಜನೆಯ ಬಗ್ಗೆ ಪರಾಮರ್ಶಿಸಿ ಉತ್ತಮ ಸಲಹೆ ನೀಡಿ, ದಯವಿಟ್ಟು ರೈತರ ನೀರಿನ ವಿಚಾರದಲ್ಲಿ ರಾಜಕೀಯ ಬೇಡ ಎಂದು ಜನತೆಯ ಪರವಾಗಿ ತಮ್ಮಲ್ಲಿ ಬಹಿರಂಗ ಮನವಿ.

ಪರಿಣಿತ ತಜ್ಞರೊಂದಿಗೆ ತಮ್ಮ ಮನೆಗೆ ಬಂದು ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಲು ಶಕ್ತಿಪೀಠ ಫೌಂಡೇಷನ್ ಬಯಸಿದೆ ಎಂದು ತಮಗೆ ಈ ಮೂಲಕ ಮನವಿ ಮಾಡುತ್ತೇನೆ.