25th September 2023
Share

ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುವರೇ.

ಕಳೆದ ಎರಡು ವರ್ಷಗಳಲ್ಲಿ ಭಾರಿ ಮಳೆಯಿಂದಾಗಿ ಕೊಡಗಿನ ಸಾವಿರಾರು ಜನರ ಜಮೀನು ನಾಪತ್ತೆಯಾಗಿದೆ. ಬೆಟ್ಟಗುಡ್ಡಗಳ ತೋಟ ಜರುಗಿ ಕಡಿದಾದ ಪ್ರದೇಶ ಉಂಟಾಗಿ ನಮ್ಮ ಜಮೀನು ಎಲ್ಲಿದೆ? ಯಾವುದು ಎಂದು ಹುಡುಕುವುದೇ ಕಷ್ಟವಾಗಿದೆ.

ಇಂಥಹ ಪ್ರದೇಶಗಳ ಜಮೀನುಗಳಿಗೆ ಬದಲಾಗಿ ಸಮತಟ್ಟಾದ ಸರ್ಕಾರಿ ಜಮೀನು ನೀಡಿ ನಮ್ಮ ಜಮೀನುಗಳನ್ನು ಸರ್ಕಾರ ತೆಗೆದು ಕೊಳ್ಳಲಿ ಎಂಬ ಭಾವನೆ ಅಲ್ಲಿನ ಜಮೀನು ಸಂತ್ರಸ್ಥರ ಬೇಡಿಕೆಯಾಗಿದೆ. ಇದು ನಿಜಕ್ಕೂ ಉತ್ತಮವಾದ ಸಲಹೆಯಾಗಿದೆ.

ಮನೆಗಳು ಜರುಗಿ ಹಳ್ಳಗಳಿಗೆ ಬಿದ್ದಿರುವ ಉದಾಹರಣೆಗಳಿವೆ. ನಾನು ಸುಮಾರು ಒಂದು ವಾರಗಳ ಕಾಲ ಇಂಥಹ ಹಲವಾರು ಪ್ರದೇಶಗಳನ್ನು ನೋಡಿ ಅಲ್ಲಿನ ಜನರ ಭಾವನೆಗಳನ್ನು ಅರ್ಥಮಾಡಿಕೊಂಡಿರುವೆ.

ಅಧಿಕಾರದಲ್ಲಿರುವವರು ಅರ್ಥ ಮಾಡಿಕೊಂಡಲ್ಲಿ ಅಲ್ಲಿನ ಜನರ ಬದುಕು ಸಾರ್ಥಕವಾಗಲಿದೆ. ಕಷ್ಟಕಾಲದಲ್ಲಿ ಆಹಾರ ಪೊಟ್ಟಣ ನೀಡಿದರೇ ಸಾಲದು ನಮಗೆ ಶಾಶ್ವತ ಪರಿಹಾರ ನೀಡಲಿ ಎಂಬ ಅಲ್ಲಿನ ಜನರ ಕೂಗು ದೊರೆವರೆಗೂ ತಲುಪಬೇಕಷ್ಟೆ.