22nd July 2024
Share

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣರವರ ಜೀವನದ ಸಾಧನೆಗಳ ಬಗ್ಗೆ ಬರೆದ ಆರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳ ಬೆಲೆ ಒಟ್ಟು ರೂ 6800 ಬಿಡುಗಡೆ ದಿನ ಮಾರಾಟ ಮಾಡಿದ್ದು ರೂ 3000 ಗಳಿಗೆ.

ಇಂಗಿಷ್‌ನಲ್ಲಿ ಎರಡು ಪುಸ್ತಕಗಳು

DOWN MEMORY LANE- OF RADIANTS JOYS

STATSMAN S.M.KRISHNA

ಕನ್ನಡದಲ್ಲಿ ನಾಲ್ಕು ಪುಸ್ತಕಗಳು

ಕೃಷ್ಣಪಥ, ಸ್ಮೃತಿ ವಾಹಿನಿ, ಚಿತ್ರ ದೀಪ ಸಾಲು ಮತ್ತು ಭವಿಷ್ಯದರ್ಶನ.

ಶ್ರೀ ಎಸ್.ಎಂ.ಕೃಷ್ಣರವರು ಹೇಳಿದ್ದು.

ನಾನು ಮೊದಲು ಚುನಾವಣೆಗೆ ನಿಂತಾಗ ಜನರು ನನಗೆ ಹಣ ನೀಡಿ ಮತ ಹಾಕುತ್ತಿದ್ದರು, ಆದರೆ ಇಂದು ಹಣ ನೀಡದಿದ್ದರೆ ಯಾರು ಮಾತನಾಡಿಸುವುದೇ ಇಲ್ಲ, ಮುಂದೆ ಕುಳಿತ್ತಿದ್ದವರೆಲ್ಲಾ ಬಹುತೇಕ ಹಣ ಪಡೆದವರು ಮತ್ತು ಹಣ ನೀಡಿದವರು ಆದರೂ ಜೋರು ತಪ್ಪಾಳೆ ಇದು ಯಾಕೆ?

ನಾನು ಯಾರು ಮೇಲೂ ದ್ವೇಷ ಸಾಧಿಸುವುದಿಲ್ಲ, ಸಭೀಕರು ಹೇಳಿದ್ದು ಆದರೆ ಪುಸ್ತಕದಲ್ಲಿನ ಕೆಲವು ಸತ್ಯಾಂಶಗಳು ನಿಮ್ಮ ಮೇಲೆ ಮುಗಿ ಬೀಳುವ ಹಾಗೆ ಇದೆಯಂತಲ್ಲಾ ಸ್ವಾಮಿ.

ನ್ಯಾಯ ಮೂರ್ತಿ ವೆಂಕಟಾಚಲಯ್ಯನವರು ಹೇಳಿದ್ದು.

ಶ್ರೀ ಎಸ್.ಎಂ.ಕೃಷ್ಣರವರು ಕಾಲೇಜಿನಲ್ಲಿ ಚುನಾವಣೆಗೆ ನಿಂತಾಗ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿನಿಯರ ಎರಡು ಪ್ರತ್ಯೇಕ ಓಟರ್ ಲಿಸ್ಟ್ ಇತ್ತು, ವಿದ್ಯಾರ್ಥಿನಿಯರು 100  ಜನ ಇದ್ದರು ಅದರಲ್ಲಿ ಕೃಷ್ಣರವರಿಗೆ 97 ಓಟುಗಳು ಬಿದ್ದಿತಂತೆ, ಅಂದರೆ ಕೃಷ್ಣರವರು ಹುಡುಗಿಯರ ಆಕರ್ಷಕ ಬಿಂದುವಾಗಿದ್ದರು. ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. 

ಕೃಷ್ಣರವರು ಹೆಣ್ಣು ಮಕ್ಕಳಲ್ಲಿ ಎಷ್ಟೆ ಜನ ನನ್ನ ಸ್ನೇಹಿತೆಯರು ಇದ್ದರೂ ನಾನು ಕಾಲು ಜಾರಲಿಲ್ಲ ಎಂದು ಹೇಳಿದ್ದಾರೆ, ಆದರೇ ಹೆಣ್ಣು ಮಕ್ಕಳು ಕಾಲು ಜಾರಿರುವ ಬಗ್ಗೆ ಹೇಳಿಲ್ಲ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ಶ್ರೀ ಮನುಬಳಿಗಾರ್‌ರವರು ಹೇಳಿದ್ದು.

ಮಾಜಿ ಪ್ರಧಾನ ಮಂತ್ರಿ ಅಟಲ್‌ಜಿಯವರು ವಿದೇಶಿಗರು ಮೊದಲು ದೆಹಲಿ. ಮುಂಬೈ ಬಂದು ಇತರ ನಗರಗಳ ಕಡೆ ಗಮನ ಹರಿಸುತ್ತಿದ್ದರು, ಈ ಕೃಷ್ಣರವರು ಐಟಿ-ಬಿಟಿ ಮಾಡಿ ಮೊದಲು ಅವರೆಲ್ಲಾ ಬೆಂಗಳೂರಿಗೆ ಬಂದು ನಂತರ ಇತರ ಕಡೆ ನೋಡುವಂತೆ ಮಾಡಿದರು ಎಂದು ಭಾಷಣ ಮಾಡಿದ್ದರಂತೆ ಎಂದಾಗ ಇಡೀ ಸಭೆ ಕರತಾಡನ ಮಾಡಿ ಗೌರವ ಸಲ್ಲಿಸಿತು.

ಶ್ರೀ ಸಿದ್ದಲಿಂಗಯ್ಯನವರು ಹೇಳಿದ್ದು.

ಶ್ರೀ ಎಸ್.ಎಂ.ಕೃಷ್ಣರವರ ತಂದೆ ಮಲ್ಲಯ್ಯನವರು ಸ್ವಾತಂತ್ರ್ಯ ಬರುವುದಕ್ಕೂ ಮುಂಚೆ ಸ್ಥಾಪಿಸಿದ್ದ ವಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಇಬ್ಬರು ಹರಿಜನ ವಿದ್ಯಾರ್ಥಿಗಳಿಗೂ ಸ್ಥಾನ ಕಲ್ಪಿಸಿದ್ದರು, ಆ ಕಾಲದ ಅವರ ಸಾಮಾಜಿಕ ನ್ಯಾಯ ಕೃಷ್ಣರವರಿಗೆ ಬಳುವಳಿಯಾಗಿ ಬಂದಿದೆ ಎಂದಾಗ ಇಡೀ ಸಭೆ ಕರತಾಡನ ಮಾಡಿ ಗೌರವ ಸಲ್ಲಿಸಿತು.

ಶ್ರೀ ಪಾವಗಡ ಪ್ರಕಾಶ್‌ರವರು ಹೇಳಿದ್ದು.

ಪುಸ್ತಕ ಬರೆಯಲು ಮಾಹಿತಿ ಸಂಗ್ರಹಿಸಿದ್ದು, ಕೃಷ್ಣರವರು ಮಹಾರಾಷ್ಟ್ರ ರಾಜ್ಯ ಪಾಲರಾಗಿದ್ದಾಗ, ನಾನು ಪಕ್ಕಾ ಬಿಜೆಪಿ ಮನುಷ್ಯ, ಕೃಷ್ಣರವರು ಪಕ್ಕಾ ಕಾಂಗ್ರೆಸ್ ನವರು, ನನಗೂ ಅವರ ಹೃದಯ ಸೌಂದರ್ಯ ಅಕರ್ಷಣೆ ಮಾಡಿತ್ತು. ಪಕ್ಷ ಅಡ್ಡ ಬರಲಿಲ್ಲ.

ಶ್ರೀ ಬಿ.ಎಲ್.ಶಂಕರ್ ರವರು ಹೇಳಿದ್ದು.

ದಿವಂಗತ ಸಿದ್ದಾರ್ಥ ಹೆಸರು ಹೇಳುವಾಗ ಭಾವುಕರಾಗಿ ಕಣ್ಣಿರು ಹಾಕಿದ ಶ್ರೀ ಬಿ.ಎಲ್.ಶಂಕರ್ ರವರನ್ನು ನೋಡಿ ಇಡೀ ಸಭೆ ಕುಳಿತಲ್ಲೆ ಮೌನ ಆಚರಿಸಿತು. ಸಿದ್ದಾರ್ಥ ಅವರ ಕನಸು ಚಿಕ್ಕಮಂಗಳೂರಿನಲ್ಲಿ  ಶ್ರೀ ಎಸ್.ಎಂ.ಕೃಷ್ಣರವರ ಹೆಸರಿನಲ್ಲಿ ಆದ್ಯಯನ ಕೇಂದ್ರ ಸ್ಥಾಪನೆ ಮಾಡುವುದಾಗಿತ್ತು, ನಾವುಗಳು ಅವರ ಕನಸು ನನಸು ಮಾಡಬೇಕು.

ಕೃಷ್ಣರವರಿಗೆ ಮೊದಲು ಗೌರವ ಸಲ್ಲಿಸಲು ಆಹ್ವಾನಿಸಿದ್ದು ಕಾಂಗ್ರೆಸ್‌ನ ಶ್ರೀ ಡಿ.ಕೆ.ಶಿವಕುಮಾರ್, ಬಿಜೆಪಿಯ ಶ್ರೀ ಜಿ.ಎಸ್.ಬಸವರಾಜ್, ಜನತಾದಳದ ಶ್ರೀ ತಿಪ್ಪಣ್ಣ, ಶ್ರೀ ರಮೇಶ್ ಬಾಬು, ಅವರನ್ನು ಇಡೀ ಸಭೆ ಸಿಳ್ಳೆಹಾಕಿ   ಕೂಗುತ್ತಿದ್ದರು.

ಶ್ರೀ ಡಿ.ಕೆ.ಶಿವಕುಮಾರ್ ಗೌರವ ಸಲ್ಲಿಸಲು ಹೋಗಿದ್ದಾಗ ಹೇಳಿದ್ದು ಬಸಣ್ಣ ನೀನೇನೋ ಹಾರ ತಂದಿದ್ದೀಯಲ್ಲಣ್ಣ, ನಾನು ಬರೀ ಕೈಲಿ ಬಂದಿದ್ದೇನೆ ಎನ್ನುವ ವೇಳೆಗೆ ಅವರ ಕೈಗೆ ಒಂದು ಬೊಕ್ಕೆ ಬಂತಂತೆ.

ಸಭೆಯಲ್ಲಿ ಎಲ್ಲಾ ಪಕ್ಷದ, ಎಲ್ಲಾ ಜಾತಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ದಂಡೇ ಇತ್ತು. ನಿಜಕ್ಕೂ ಅದ್ಬುತ ಸಮಾರಂಭ.