26th July 2024
Share

ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 2020-21  ರ ಮುಂಗಡ ಪತ್ರದಲ್ಲಿ ರಾಜ್ಯದ 224  ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜನರಿಗೆ ಅಗತ್ಯವಿರುವ, ಎಲ್ಲಾ ವರ್ಗಗಳಿಗೂ ಅನೂಕೂಲವಾಗುವ  ಬೃಹತ್ ಯೋಜನೆಗಳ ಜಾರಿಗೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಚಿಂತನೆ ನಡೆಸಿದ್ದಾರೆ.

                2022  ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡುವ ಯೋಜನೆಗೆ ಪೂರಕವಾಗಿ, ಅಟಲ್ ಭೂಜಲ್ ಯೋಜನೆಯ ಶೇಕಡ 100  ಜಾರಿ, ರಾಜ್ಯದ ನದಿ ಜೋಡಣೆ, ಪ್ರತಿ ಮನೆಗೆ ಕುಡಿಯುವ ನೀರು ಮತ್ತು ಊರಿಗೊಂದು ಕೆರೆ- ಆ ಕೆರೆಗಳಿಗೆ ನದಿ ನೀರು ಯೋಜನೆಯಡಿಯಲ್ಲಿ ಕೆರೆಕಟ್ಟೆಗಳಿಗೆ ವಿಧಾನಸಭಾ ಕ್ಷೇತ್ರವಾರು ಯೋಜನೆ.

                2022 ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡುವ ಯೋಜನೆಗೆ ಪೂರಕವಾಗಿ, ಆಯಾ ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಅತಿ ಹೆಚ್ಚು ಬೆಳೆಯುವ ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಉತ್ಪನ್ನಗಳ ಕ್ಲಸ್ಟರ್‌ಗಳನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆರಂಭಿಸುವುದು.

   ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉದ್ಯೋಗ ಅಸಕ್ತ ನಿರುದ್ಯೊಗಿಗಳ ಸಂಘಗಳನ್ನು ಸ್ತ್ರಿಶಕ್ತಿ ಸಂಘಗಳ ಮಾದರಿಯಲ್ಲಿ ರಚಿಸಿ, ಅವರು ಕೈಗೊಳ್ಳಲು ಇಚ್ಚಿಸುವ ಉದ್ದಿಮೆಗಳಿಗೆ ಟ್ರಂಕಿಬೇಸಿಸ್‌ನಲ್ಲಿ ಉದ್ದಿಮೆಗೆ ಬೇಕಾಗುವ ಜಮೀನು, ಬ್ಯಾಂಕ್ ಸಾಲ, ಅನುದಾನ, ಮೂಲಭೂತ ಸೌಕರ್ಯ ಮತ್ತು ಎಂ.ಎಸ್.ಎಂ.ಇ ಸಾರ್ಥಕ್ ಯೋಜನೆಯ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸುವುದು. ಈ ಸಂಘಗಳಲ್ಲಿ ಸ್ವಯಂ ಉದ್ಯೋಗ ಸ್ಥಾಪನೆ ಮಾಡಲು ಇಚ್ಚಿಸುವವರು ಮಾತ್ರ ಸದಸ್ಯರಾಗಿರಬೇಕು. ಪ್ರತಿ 3 ತಿಂಗಳಿಗೊಮ್ಮೆ ಎಷ್ಟು ಜನ ಸ್ವಯಂ ಉದ್ಯೋಗ ಸ್ಥಾಪನೆ ಮಾಡಿದ್ದಾರೆ ಎಂಬ ಬಗ್ಗೆ ಶೇಕಡವಾರು ಬಿಡುಗಡೆ ಮಾಡುವ ಯೋಜನೆ.

  ಡಿಜಿಟಲ್ ಇಂಡಿಯಾಗೆ ಪೂರಕವಾಗಿ ಪಿಪಿಪಿ ಮಾದರಿಯಲ್ಲಿ ರಾಜ್ಯದ 29340  ಗ್ರಾಮಗಳಲ್ಲೂ ವಿಲೇಜ್-1 ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರತಿ ಬಡಾವಾಣಿಯಲ್ಲೂ ಬಡಾವಣೆ-1 ಸ್ಥಾಪಿಸಿ ಸರ್ಕಾರಿ ಸೇವೆ ಜನರ ಮನೆ ಬಾಗಿಲಿಗೆ ಯೋಜನೆ.

                ಡಿಜಿಟಲ್ ಇಂಡಿಯಾಗೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳ ಮಾಹಿತಿ ಒಂದೇ ಕಡೆ ಲಭ್ಯವಾಗುವಂತೆ ಮಾಡಿ ಪ್ರತಿ ಸಭೆಗಳಲ್ಲೂ ಡಿಜಿಟಲ್ ರಿವ್ಯೂ ಮಾಡುವ ಡೇಟಾ-1, ಕರ್ನಾಟಕ-1 ಯೋಜನೆ.

 ಈ ಯೋಜನೆಗಳನ್ನು ಈ ವರ್ಷದ ಮುಂಗಡ ಪತ್ರದಲ್ಲಿ ಮಂಡಿಸಿ ಮುಂದಿನ 3 ವರ್ಷದೊಳಗೆ ಸ್ಪಷ್ಠ ರೂಪುರೇಷೆಯತ್ತ  ಗುರಿ ಸಾಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಈ ಯೋಜನೆಗಳ ಜಾರಿಗೆ ಮೂರು ಹಂತದ ಸಮಿತಿಗಳಿಗೆ ಜವಾಬ್ಧಾರಿ ನೀಡಲು ಉತ್ಸುಕರಾಗಿದ್ದಾರೆಂದು ತಿಳಿದಿದೆ. ಈ ಎಲ್ಲಾ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು.

  ವಿಧಾನಸಭಾ ಸದಸ್ಯರಿಗೆ, ಪಕ್ಷದ ವತಿಯಿಂದ ಪಕ್ಷದ ವಿಧಾನ ಸಭೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಮತ್ತು ಆರ್.ಎಸ್.ಎಸ್ ತಂಡಗಳಿಗೆ ನೀಡುವ ಚಿಂತನೆಯೂ ನಡೆಯುತ್ತಿದೆ ಎಂದುಮೂಲಗಳಿಂದ ತಿಳಿದು ಬಂದಿದೆ.

 ಈ ಯೋಜನೆಗಳಿಗೆ ಆಕರ್ಷಕ ಹೆಸರುಗಳನ್ನು ಇಡಲು ಕಸರತ್ತು ಆರಂಭಿಸಲಾಗಿದೆಯಂತೆ.