22nd December 2024
Share

ಕರ್ನಾಟಕ ಐಟಿ ಬಿಟಿ ಗೆ ತವರು ಮನೆ ಎಂದು ವಿಶ್ವದ್ಯಾಂತ ಪ್ರಸಿದ್ಧಿಯಾಗಿದೆ. ಸಿಲಿಕಾನ್ ಬೆಂಗಳೂರು ಎಂದು ಹೆಸರುವಾಸಿಯಾಗಿದೆ. ಸಾಕಷ್ಟು ಬದಲಾವಣೆಯಾಗಿರುವುದು ಸರಿ ರಾಜ್ಯದ ಅಂಕಿ ಅಂಶಗಳ ಕೊರತೆ ಎದ್ದು ಕಾಣುತ್ತಿದೆ.

  ನೂರಾರು ಸಮೀಕ್ಷೆಗಳು ಸಾವಿರಾರು ಕೋಟಿ ವೆಚ್ಚದಲ್ಲಿ ನಿರಂತರವಾಗಿ ಸಾಗುತ್ತಿವೆ. ಬೆರಳ ತುದಿಯಲ್ಲಿ ಡೇಟಾ ಇರಬೇಕು ಎಂದು ಪ್ರಧಾನಿಯವರು ಹೇಳುತ್ತಿರುತ್ತಾರೆ. ಏಕೆ ಎಲ್ಲಾ ಡೇಟಾವನ್ನು ಆನ್‌ಲೈನ್ ಮಾಡಿ ಕ್ಷಣ ಕ್ಷಣದ ಮಾಹಿತಿ ಅಫ್ ಲೋಡ್ ಆಗುತ್ತಿರುವಂತೆ ಮಾಡಬಾರದು. ಎಂಬ ಅಂಶ ಸಂಶೋಧಕರ ಪ್ರಶ್ನೆಯಾಗಿದೆ.

   ಎಲ್ಲಾ ಇಲಾಖೆಗಳ ಸ್ಥಿತಿ ಗತಿ ಅಧ್ಯಯನ ಮಾಡಿದಾಗ ಒಂದು ಮಹತ್ತರವಾದ ಅಂಶ ಬೆಳಕಿಗೆ ಬಂದಿತು. ಕೇಂದ್ರ ಸರ್ಕಾರ ಈ ಪಶುಹಾತ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆಯಂತೆ. ಇದರಲ್ಲಿ ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ಪ್ರತಿ ಸೆಕೆಂಡ್‌ನಲ್ಲಿ ಎಷ್ಟು ಹಸುಗಳು ಕರು ಹಾಕಿದವು ಮತ್ತು ಎಷ್ಟು ಪ್ರಾಣ ಕಳೆದು ಕೊಂಡವು ಎಂಬ ಬಗ್ಗೆ ಆನ್‌ನಲ್ಲಿ ನಿರಂತರವಾಗಿ ದಾಖಲೆ ಆಗುತ್ತಾ ಇದೆಯಂತೆ.

  ದೇಶದಲ್ಲಿ ಯಾವ ಯಾವ ಜಾತಿಯ ಎಷ್ಟೆಷ್ಟು ಪಶುಗಳು ಯಾವ ಗ್ರಾಮದಲ್ಲಿ ಇವೆ ಎಂಬ ಬಗ್ಗೆಯೂ ಕ್ಷಣ ಕ್ಷಣದ ಮಾಹಿತಿ ಅಫ್ ಡೇಟ್ ಆಗುತ್ತಾ ಇದೆಯಂತೆ. .ಇದೊಂದು ವಿಚಿತ್ರ ಎನಿಸಿದರೂ ಸತ್ಯ,

  ಈ ಡೇಟಾವನ್ನು ಯಾರು ? ಎಲ್ಲಿ ? ಹೇಗೆ ? ಅಫ್ ಡೇಟ್ ಮಾಡುತ್ತಿರುತ್ತಾರೆ. ಎಂಬ ಕುತೂಹಲ ನನಗೆ ಕಾಡಿದೆ. ಇನ್ನೂ ಒಂದು ವಿಶಿಷ್ಟ ಎಂದರೆ ಈ ಡೇಟಾವನ್ನು ಮಾನಿಟರಿಂಗ್ ಮಾಡುತ್ತಿರುವ ಸಂಸ್ಥೆ ಕರ್ನಾಟಕದ ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ ಇದೆಯಂತೆ. ಪತ್ತೆದಾರಿ ಕೆಲಸ ಆರಂಭವಾಗಿದೆ.

   ಪಶುಗಳ ಬಗ್ಗೆ ಈ ರೀತಿ ಆನ್ ಲೈನ್ ಡೇಟಾ ಅಫ್ ಡೇಟ್ ಆಗುತ್ತಿರುವುದು ನಿಜವಾದಲ್ಲಿ, ಎಲ್ಲಾ ಇಲಾಖೆಯಲ್ಲೂ ಅದೇ ರೀತಿ ಮಾಡಿದಲ್ಲಿ ಯಾವ ಸಮೀಕ್ಷೆಯೂ ಬೇಕಿಲ್ಲ. ಕ್ಷಣ ಕ್ಷಣದ ಮಾಹಿತಿ ಪ್ರತಿಯೊಂದು ಇಲಾಖೆಯಲ್ಲೂ ದೊರೆಯಲಿದೆ.

   ಈ ಯೋಜನೆಯ ಮಾಹಿತಿ ಇನ್ನೂ ನಮ್ಮ ಮಾಧ್ಯಮ ಮಿತ್ರರಿಗೆ ತಿಳಿದಿಲ್ಲವಾ? ಅಥವಾ ಪ್ರಚಾರ ಮಾಡಿದ್ದರೂ ನನಗೆ ಗೊತ್ತಿಲ್ಲವಾ ಎಂಬ ಅಂಶ ನನ್ನನ್ನು ಕಾಡಲಾರಂಭಿಸಿದೆ.

  ವಿಲೇಜ್-1 ಮತ್ತು ಬಡಾವಣೆ-1 ಯೋಜನೆ ಜಾರಿಗೆ ತಂದು ಈ ಯೋಜನೆಯಡಿಯಲ್ಲಿ   ಮಾಹಿತಿಗಳನ್ನು ಕರಾರುವಕ್ಕಾಗಿ ಪ್ರತಿ ಸೆಕೆಂಡ್‌ನಲ್ಲೂ ಅಫ್ ಡೇಟ್ ಮಾಡುವುದು ರಾಜ್ಯ ಸರ್ಕಾರದ ಚಿಂತನೆಯಲ್ಲಿದೆಯಂತೆ.

  ಪ್ರತಿ ಗ್ರಾಮದ, ಪ್ರತಿ ಸರ್ವೆನಂಬರ್‌ನ ಒಂದು ಇಂಚು ಭೂಮಿಯಲ್ಲಿ ಕೈಗೊಳ್ಳುವ ಖಾಸಗಿ ಅಥವಾ ಸರ್ಕಾರಿ ಯೋಜನೆಗಳ ಮಾಹಿತಿ, ಪ್ರತಿ ವ್ಯಕ್ತಿಯ, ಪ್ರತಿ ಕುಟುಂಬದ ಕ್ಷಣ, ಕ್ಷಣದ ಮಾಹಿತಿ ಸರ್ಕಾರದಲ್ಲಿ ಒಂದೇ ಕಡೇ ದೊರೆತಲ್ಲಿ ರಾಜ್ಯ ಯಾವ ರೀತಿ ಅಭಿವೃದ್ಧಿಯಾಗಲಿದೆ ಊಹೆ ಮಾಡಿಕೊಳ್ಳಿ. ಹೇಗಿದೆ ವಿಲೇಜ್-1 ಪರಿಕಲ್ಪನೆ.